Site icon Vistara News

Viral Video: ನವದಂಪತಿಯ ಫೋಟೋ ತೆಗೆಯುತ್ತ ಚರಂಡಿಗೆ ಬಿದ್ದ ಮಹಿಳೆ; ನೋವಿನ ಕ್ಷಣ ಎಂದ ನೆಟ್ಟಿಗರು

Woman Falls Into Drain While Taking Pictures of Bride and Groom

#image_title

ಈಗೀಗ ವಿಡಿಯೊ ಮಾಡುವುದು, ಫೋಟೋ ತೆಗೆಯುವುದು, ಬಳಿಕ ಅದನ್ನು ಸೋಷಿಯಲ್ ಮೀಡಿಯಾಗಳಿಗೆ ಅಪ್​ಲೋಡ್ ಮಾಡುವುದೇ ಒಂದು ಟ್ರೆಂಡ್​ ಆಗಿಬಿಟ್ಟಿದೆ. ಒಂದು ಮದುವೆ ಇರಲಿ, ಎಂಥದ್ದೇ ಸಮಾರಂಭ-ವಿಶೇಷ ಸನ್ನಿವೇಶ ಇರಲಿ ಅಲ್ಲಿ ಅದೆಷ್ಟೋ ಮಂದಿ ತಮ್ಮ ಮೊಬೈಲ್​​ಗಳಲ್ಲಿ ಕ್ಯಾಮರಾ ಆನ್​ ಮಾಡಿಕೊಂಡು ಹಿಡಿದಿರುತ್ತಾರೆ. ಹಾಗೇ, ಈ ಮಹಿಳೆ ಕೂಡ ಮದುವೆ ಮನೆಯೊಂದರಲ್ಲಿ ವಧು-ವರರ ಫೋಟೋವನ್ನು ತೆಗೆಯುತ್ತಿದ್ದರು. ಆದರೆ ಅದೇ ಎಡವಟ್ಟಾಯ್ತು. ಫೋಟೋ ಸೆರೆಹಿಡಿಯುತ್ತ ಹಿಮ್ಮುಖವಾಗಿ ಬಂದ ಮಹಿಳೆ, ಚರಂಡಿಯಲ್ಲಿ ಬಿದ್ದುಹೋದರು. ನೋವಿನಿಂದ ಮುಖ ಕಿವುಚಿದರು. ಈ ವಿಡಿಯೊ ಎಲ್ಲ ಕಡೆ ವೈರಲ್ ಆಗುತ್ತಿದೆ.

ನವ ದಂಪತಿಗಳು ಬರುತ್ತಿದ್ದಾರೆ. ಅವರ ಸುತ್ತಲೂ ಒಂದಷ್ಟು ಜನ ಬಂಧುಗಳು ಇದ್ದಾರೆ. ಹಾಗೆ ಕಪ್ಪು ಬಣ್ಣದ ಉಡುಪು ತೊಟ್ಟ ಮಹಿಳೆಯೊಬ್ಬರು ಆ ಜೋಡಿಯ ಫೋಟೋಗಳನ್ನು ತೆಗೆಯುತ್ತಲೋ, ವಿಡಿಯೊ ಮಾಡುತ್ತಲೋ ಹಿಮ್ಮುಖವಾಗಿ ಬರುತ್ತಿದ್ದರು. ಆದರೆ ಅಲ್ಲೇ ಎಡವಿದರು. ಅಡ್ಡಡ್ಡ ಚಲಿಸಿದ ಅವರು, ಚರಂಡಿಗೆ ಬಿದ್ದಿದ್ದಾರೆ. ಕೂಡಲೇ ಒಂದಷ್ಟು ಜನ ಬಂದು ಅವರನ್ನು ಎತ್ತುವ ಪ್ರಯತ್ನ ಮಾಡಿದ್ದನ್ನು ವಿಡಿಯೊದಲ್ಲಿ ನೋಡಬಹುದು.

ಇದನ್ನೂ ಓದಿ: Viral Video: ಎದ್ದು ನಿಂತಿತು ಮಾರುದ್ದದ ಕಾಳಿಂಗ ಸರ್ಪ; ಭಯ ಹುಟ್ಟಿಸುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್

ಮಹಿಳೆ ಬಿದ್ದಾಕ್ಷಣ ಎಲ್ಲರೂ ಆತಂಕಗೊಂಡಿಲ್ಲ. ವಧು-ವರರ ಮೆರವಣಿಗೆ ಅದರ ಪಾಡಿಗೆ ಅದು ಮುಂದೆ ಸಾಗಿತು. hyderabadi__jaan ಎಂಬ ಇನ್​ಸ್ಟಾಗ್ರಾಂನಲ್ಲಿ ಶೇರ್​ ಆಗಿರುವ ವಿಡಿಯೊಕ್ಕೆ 10.4 ಮಿಲಿಯನ್​​ಗೂ (100 ಲಕ್ಷ) ಅಧಿಕ ವೀವ್ಸ್​ ಬಂದಿದೆ. ಮಹಿಳೆ ಕೆಳಗೆ ಬಿದ್ದಿರುವುದು ಆಕೆಗೆ ಭಾವನಾತ್ಮಕವಾಗಿ ಮತ್ತು ದೈಹಿಕವಾಗಿ ನೋವು ತಂದ ಕ್ಷಣ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ, ಹಾಗೇ, ಆಕೆಗೆ ಇದು ಎಂದಿಗೂ ಮರೆಯಲಾಗದ ದಿನ ಎಂದು ಇನ್ನೊಬ್ಬರು ಹೇಳಿದ್ದಾರೆ.

Exit mobile version