Site icon Vistara News

ವಸತಿ ಕಟ್ಟಡದಲ್ಲಿ ಬೆತ್ತಲೆಯಾಗಿ ಅಲೆದಾಡುತ್ತ, ಅಶ್ಲೀಲವಾಗಿ ವರ್ತಿಸುವ ಮಹಿಳೆ; ಪೊಲೀಸರಿಗೆ ದೂರು ಕೊಟ್ಟ ನಿವಾಸಿಗಳು

Woman indecent exposure In Resident Building In Mumbai

#image_title

ಮುಂಬಯಿ: ಸಾರ್ವಜನಿಕವಾಗಿ ನಗ್ನವಾಗಿ ಓಡಾಡಿದ ಆರೋಪದಡಿ ಮಹಿಳೆ ಮತ್ತು ಆಕೆ ಅತಿಥಿಯಾಗಿ ಹೋಗಿದ್ದ ಮನೆಯ ಮಾಲೀಕನ ವಿರುದ್ಧ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಮುಂಬಯಿಯ ಸಾಂತಾಕ್ರೂಜ್​​ನ ವಕೋಲಾದಲ್ಲಿರುವ ವಸತಿ ಸಮುಚ್ಛಯದಲ್ಲಿ ಈ ಘಟನೆ ನಡೆದಿದೆ. ಕಟ್ಟಡದ 5ನೇ ಮಹಡಿಯಲ್ಲಿರುವ ಮನೆಯೊಂದಕ್ಕೆ ಮಹಿಳೆಯೊಬ್ಬರು ಅತಿಥಿಯಾಗಿ ಬಂದಿದ್ದಾರೆ. ಅವರು ಅದೆಷ್ಟೋ ಸಲ ಮೈಮೇಲೆ ಬಟ್ಟೆಯಿಲ್ಲದೆ ಕಟ್ಟಡದ ಆವರಣದಲ್ಲಿ ಓಡಾಡುತ್ತಿರುತ್ತಾರೆ. ಅಷ್ಟೇ ಅಲ್ಲ, ಅಶ್ಲೀಲವಾಗಿ ವರ್ತಿಸುವುದನ್ನೂ ಹಲವು ಬಾರಿ ನೋಡಿದ್ದೇವೆ. ಇದೆಲ್ಲ ಗೊತ್ತಿದ್ದರೂ, ಆ ಮನೆಯ ಮಾಲೀಕ ಸುಮ್ಮನೆ ಇದ್ದಾನೆ ಎಂದು ಕಟ್ಟಡದಲ್ಲಿ ವಾಸವಾಗಿರುವ ಹಲವರು ಪೊಲೀಸರಿಗೆ ದೂರು ನೀಡಿದ್ದರು. ಅದರ ಅನ್ವಯ ಪ್ರಕರಣ ದಾಖಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸರು ‘ಕಟ್ಟಡದ ನಿವಾಸಿಗಳು ದೂರು ಕೊಡುತ್ತಿದ್ದಂತೆ ನಾವು ಇಡೀ ಕಟ್ಟಡದಲ್ಲಿ ಎಲ್ಲೆಲ್ಲಿ ಸಿಸಿಟಿವಿ ಕ್ಯಾಮರಾಗಳಿವೆಯೋ, ಅವನ್ನೆಲ್ಲ ಚೆಕ್ ಮಾಡಿದ್ದೇವೆ. ಮಹಿಳೆ ನಗ್ನವಾಗಿ ಕಟ್ಟಡದ ಹಲವು ಕಡೆಗಳಲ್ಲಿ ಓಡಾಡಿದ್ದು, ಅಸಭ್ಯ ವರ್ತನೆ ಮಾಡಿದ್ದು ಅದರಲ್ಲಿ ದಾಖಲಾಗಿದೆ. ಅದರಲ್ಲೂ ಆಕೆ ರಾತ್ರಿ ಸಮಯದಲ್ಲಿಯೇ ಹೆಚ್ಚಾಗಿ ಇಂಥ ವರ್ತನೆ ತೋರಿಸಿದ್ದಾಳೆ’ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಆಕೆ ಹೀಗೆ ಮಾಡುವಾಗ ಆ ಮನೆಯ ಮಾಲೀಕ ಮತ್ತು ಅವನ ಸ್ನೇಹಿತ ನೋಡುತ್ತ ನಿಂತಿರುವುದೂ ಕ್ಯಾಮರಾದಲ್ಲಿ ಕಾಣಿಸುತ್ತದೆ’ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: Uttar pradesh : ಮಧ್ಯರಾತ್ರಿಯಲ್ಲಿ ರಸ್ತೆ ಮೇಲೆ ಬೆತ್ತಲೆಯಾಗಿ ಓಡಾಡಿದ ಮಹಿಳೆ

ಆ ಮಾಲೀಕ ಈ ಹಿಂದೆಯೂ ಹಲವು ಬಾರಿ ಅಪರಿಚಿತ ಮಹಿಳೆಯರನ್ನೆಲ್ಲ ಕಟ್ಟಡಕ್ಕೆ ಕರೆತಂದಿದ್ದಾನೆ. ನಾವೇ ಎಷ್ಟೋ ಸಲ ಅವನಿಗೆ ಹೀಗೆ ಮಾಡಬೇಡ ಎಂದಿದ್ದೇವೆ. ಸ್ವಲ್ಪ ತಿಂಗಳುಗಳ ಹಿಂದೆ ಆತ ಬೇರೆ ಮನೆಗೆ ಹೋಗಿದ್ದಾನೆ. ಆದರೆ ಹೀಗೆ ಆಗಾಗ ಅಪರಿಚಿತ ಮಹಿಳೆಯರನ್ನು ಇಲ್ಲಿಗೆ ಕರೆದುಕೊಂಡು ಬರುತ್ತಾನೆ ಎಂದು ದೂರುದಾರರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Exit mobile version