ಜಮ್ಮು-ಕಾಶ್ಮೀರದ (Jammu Kashmir) ಬಾರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್ಒಸಿ)ಯನ್ನು ದಾಟಿ ಪಾಕಿಸ್ತಾನದಿಂದ ಭಾರತೆದೆಡೆಗೆ ಬಂದ ಅಪರಿಚಿತ ಮಹಿಳೆಯನ್ನು ಅಲ್ಲಿನ ಭದ್ರತಾ ಪಡೆ ಸಿಬ್ಬಂದಿ ಗುಂಡಿಟ್ಟು ಕೊಂದಿದ್ದಾರೆ. ಈಕೆ ಪಾಕ್ ಆಕ್ರಮಿತ ಕಾಶ್ಮೀರದಿಂದ ಬಂದವರಾಗಿರಬಹುದು ಎಂದು ಅಂದಾಜಿಸಲಾಗಿದೆ. ಮಹಿಳೆ ಕಮಲ್ಕೋಟೆ ಏರಿಯಾ ಬಳಿ ಎಲ್ಒಸಿ ದಾಟಿ, ಗಡಿಯ ಬೇಲಿ ಬಳಿ ಬರುವಾಗ ಅಲ್ಲಿದ್ದ ಭಾರತದ ಸೈನಿಕರು ಮಹಿಳೆಯನ್ನು ಪ್ರಶ್ನೆ ಮಾಡಿದ್ದಾರೆ. ಆದರೆ ಮಹಿಳೆ ಆ ಸೈನಿಕರ ಮಾತನ್ನು ಕೇಳಿಸಿಕೊಳ್ಳಲೇ ಇಲ್ಲ. ಆಕೆ ಒಳ ನುಸುಳಲು ಯತ್ನಿಸಿತ್ತಿರುವ (Woman Intruder) ಶಂಕೆಯ ಮೇಲೆ ಶೂಟ್ ಮಾಡಬೇಕಾಯಿತು ಎಂದು ಸೈನಿಕರು ಹೇಳಿದ್ದಾಗಿ ವರದಿಯಾಗಿದೆ.
ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಉಗ್ರರ ಹಾವಳಿ ಇತ್ತೀಚೆಗೆ ಹೆಚ್ಚಾಗಿದೆ. ಇನ್ನು ಪೂಂಚ್ನಲ್ಲಿ ಸೇನಾ ವಾಹನದ ಮೇಲೆ ಉಗ್ರರು ದಾಳಿ ನಡೆಸಿ, ಐವರು ಉಗ್ರರು ಮೃತಪಟ್ಟ ಬೆನ್ನಲ್ಲೇ ಭಾರತದ ಸೇನಾ ಪಡೆ ಸಿಬ್ಬಂದಿ ಜಮ್ಮು ಕಾಶ್ಮೀರದ ವಿವಿಧ ಕಡೆ ಉಗ್ರರ ವಿರುದ್ಧ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಬಾರಾಮುಲ್ಲಾದಲ್ಲಿ ಇತ್ತೀಚೆಗೆ ಉಗ್ರರ ಒಳನುಸುಳುವಿಕೆ ಹೆಚ್ಚಿದೆ ಎಂದೂ ಹೇಳಲಾಗಿದೆ. ಇತ್ತೀಚೆಗೆ ಇಲ್ಲಿನ ವನಿಗಂ ಪಯೀನ್ ಕ್ರೀರಿ ಎಂಬಲ್ಲಿ ಲಷ್ಕರೆ ತೊಯ್ಬಾ ಸಂಘಟನೆಯ ಇಬ್ಬರು ಭಯೋತ್ಪಾದಕರನ್ನು ಕೊಲ್ಲಲಾಗಿತ್ತು. ಅವರಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸೈನಿಕರು ವಶಪಡಿಸಿಕೊಂಡಿದ್ದರು. ಇಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರು ಶಕೀರ್ ಮಜೀದ್ ನಜರ್ ಮತ್ತು ಹನಾನ್ ಅಹ್ಮದ್ ಸೇಹ್. ಇವರಿಬ್ಬರೂ ಶೋಪಿಯಾನ್ ಜಿಲ್ಲೆಯ ನಿವಾಸಿಗಳಾಗಿದ್ದರು.
ಇದನ್ನೂ ಓದಿ: ರಾಜೌರಿ, ಬಾರಾಮುಲ್ಲಾದಲ್ಲಿ ಎನ್ಕೌಂಟರ್, ಇಬ್ಬರು ಉಗ್ರರ ಹತ್ಯೆ; ಜಮ್ಮುವಿಗೆ ಇಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ