ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಅಪಘಾತ ಮುಂದುವರಿದಿದೆ. ಮಂಗಳವಾರ 54 ವರ್ಷದ ಮಹಿಳೆಯೊಬ್ಬರಿಗೆ ಈ ರೈಲು ಡಿಕ್ಕಿ ಹೊಡೆದು, ಅವರು ಮೃತಪಟ್ಟಿದ್ದಾರೆ. ಗುಜರಾತ್ನ ಆನಂದ್ ರೈಲ್ವೆ ಸ್ಟೇಶನ್ ಬಳಿ ಸಂಜೆ 4.30ರ ಹೊತ್ತಿಗೆ ಮಹಿಳೆ ಹಳಿ ದಾಟುತ್ತಿದ್ದ ಸಂದರ್ಭದಲ್ಲಿ ಈ ಅವಘಡ ನಡೆದಿದೆ. ಮೃತರನ್ನು ಬೀಟ್ರಿಸ್ ಪೀಟರ್ ಎಂದು ಗುರುತಿಸಲಾಗಿದ್ದು, ಅವರು ಅಹ್ಮದಾಬಾದ್ ನಿವಾಸಿ. ಇವರು ಸಂಬಂಧಿಗಳನ್ನು ಭೇಟಿ ಮಾಡಲು ಆನಂದ್ ರೈಲ್ವೆ ಸ್ಟೇಶನ್ಗೆ ಆಗಮಿಸಿದ್ದರು. ಅದೇ ವೇಳೆ ಯಾವುದೋ ಕಾರಣಕ್ಕೆ ಹಳಿ ದಾಟುತ್ತಿದ್ದರು ಎಂದು ರೈಲ್ವೆ ಪೊಲೀಸ್ ತಿಳಿಸಿದ್ದಾರೆ.
ಮುಂಬೈ-ಅಹ್ಮದಾಬಾದ್ ವಂದೇ ಭಾರತ್ ರೈಲು ಇದಾಗಿದ್ದು, ಮಂಗಳವಾರ ನಿಗದಿತ ಸಮಯಕ್ಕಿಂತಲೂ ವಿಳಂಬವಾಗಿ ಬಂದಿತ್ತು ಎಂದು ಹೇಳಲಾಗಿದೆ. ಸದ್ಯ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ವಂದೇ ಭಾರತ್ ರೈಲು ಎಮ್ಮೆ, ಹಸು ಮತ್ತು ಗೂಳಿಗೆ ಡಿಕ್ಕಿ ಹೊಡೆದಿತ್ತು. ಇದೀಗ ಮಹಿಳೆಯೊಬ್ಬರು ಈ ರೈಲಿಗೆ ಬಲಿಯಾಗಿದ್ದಾರೆ.
ಇದನ್ನೂ ಓದಿ: Vande Bharat | ಚೆನ್ನೈನಿಂದ ಮೈಸೂರಿಗೆ ಆಗಮಿಸಿದ ವಂದೇ ಭಾರತ್ ಎಕ್ಸ್ಪ್ರೆಸ್ ಹೈಸ್ಪೀಡ್ ರೈಲು