ಬಾಜ್ಪುರ: ಮಹಿಳೆಯೊಬ್ಬಳು ತನ್ನ ಪುತ್ರನನ್ನೇ ಮದುವೆಯಾದ (Woman Marries Son) ಅಸಹಜ ಘಟನೆ ಉತ್ತರಾಖಂಡ್‌ನ ಬಾಜ್ಪುರದಲ್ಲಿ ನಡೆದಿದೆ. ಈ ಬಗ್ಗೆ ಆಕೆಯ ಪತಿಯೇ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆ ತನ್ನ ಹೊಟ್ಟೆಯಲ್ಲಿ ಹುಟ್ಟಿದ ಪುತ್ರನನ್ನೇ ವಿವಾಹವಾಗಿದ್ದು ತೀವ್ರ ಅಸ್ವಾಭಾವಿಕ ಎನ್ನಿಸಿದೆ. ಅಂದಹಾಗೆ ಮಹಿಳೆಯ ಹೆಸರು ಬಾಬ್ಲಿ. ಈಕೆ ಒಬ್ಬ ಗಂಡನನ್ನು ಬಿಟ್ಟು, ಇನ್ನೊಬ್ಬಾತನನ್ನು ವಿವಾಹವಾಗಿ, ಬಳಿಕ ಅವನನ್ನೂ ತೊರೆದು, ಮೊದಲ ಪತಿಯಿಂದ ಹುಟ್ಟಿದ ಮಗನನ್ನೇ ಮದುವೆಯಾಗಿದ್ದಾಳೆ!
ಎರಡನೇ ಪತಿ ಕೊಟ್ಟ ದೂರು ಏನಿದೆ?
ಪತ್ನಿ ಬಾಬ್ಲಿ ಕೃತ್ಯದ ಬಗ್ಗೆ ಅವರ ಎರಡನೇ ಪತಿ ಇಂದ್ರಾರಾಮ್ ಪೊಲೀಸರಿಗೆ ದೂರು ನೀಡಿದ್ದಾರೆ. ʼನಾನು ಬಾಬ್ಲಿಯನ್ನು 11 ವರ್ಷದ ಹಿಂದೆ ಮದುವೆಯಾದ. ಆಗ ಆಕೆ ತನ್ನ ಮೊದಲ ಪತಿಯನ್ನು ಬಿಟ್ಟು ಬಂದಿದ್ದಳು. ಆ ಗಂಡನಿಗೆ ಹುಟ್ಟಿದ ಎರಡು ಮಕ್ಕಳೂ ಕೂಡ ಅವಳೊಂದಿಗೆ ಇರಲಿಲ್ಲ. ನಮ್ಮಿಬ್ಬರಿಗೆ ಮೂವರು ಮಕ್ಕಳು ಹುಟ್ಟಿದರು. ಈಗೀಗ ಮೊದಲ ಪತಿಯ ಮಗನೊಬ್ಬ ಆಗಾಗ ಮನೆಗೆ ಬರುತ್ತಿದ್ದ. ಈಗ ನನ್ನ ಪತ್ನಿ ಆತನನ್ನೇ ಮದುವೆಯಾಗಿ ಓಡಿಹೋಗಿದ್ದಾಳೆ. ಇವರು ಹೋಗುವಾಗ 20 ಸಾವಿರ ರೂಪಾಯಿ ತೆಗೆದುಕೊಂಡು ಹೋಗಿದ್ದಾರೆʼ ಎಂದು ಹೇಳಿದ್ದಾರೆ. ಪೊಲೀಸರು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದೂ ಮನವಿ ಮಾಡಿದ್ದಾರೆ.
ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನೂ ಕೈಗೆತ್ತಿಕೊಂಡಿದ್ದಾರೆ. ಆದರೆ ಇಂದ್ರಾರಾಮ್ ಮೇಲೆಯೂ ಒಂದು ಕಣ್ಣಿಟ್ಟುರುವುದಾಗಿ ತಿಳಿಸಿದ್ದಾರೆ. ಇದು ನೈಜವಾಗಿಯೂ ನಡೆದ ಘಟನೆಯೋ? ಕೇವಲ ಇಂದ್ರಾರಾಮ್ ಆರೋಪವೋ ಎಂಬ ಆಯಾಮದಲ್ಲಿಯೂ ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ | ಆನ್‌ಲೈನ್‌ನಲ್ಲಿ ಭಾರೀ ರಿಯಾಯಿತಿ ಆಸೆಗೆ ಬಿದ್ದು ₹3 ಲಕ್ಷ ಕಳೆದುಕೊಂಡ ಮಹಿಳೆ