Site icon Vistara News

ಸಮುದ್ರ ತೀರದಲ್ಲಿ ಗಂಡನ ಜತೆ ಫೋಟೊ ತೆಗೆಸಿಕೊಳ್ಳುವ ವೇಳೆ ಕೊಚ್ಚಿಹೋದ ಮಹಿಳೆ; ದುರಂತದ ವಿಡಿಯೊ ಭೀಕರ

Waman Swept Away At Sea

Woman swept away with sea wave while taking selfie with husband In Mumbai

ಮುಂಬೈ: ದೇಶದ ಬಹುತೇಕ ಭಾಗಗಳಲ್ಲಿ ಮಳೆ ಶುರುವಾಗಿದೆ. ಜಲಪಾತಗಳು ಧುಮ್ಮಿಕ್ಕುತ್ತಿವೆ, ಸಮುದ್ರಗಳ ಅಲೆಗಳ ಅಬ್ಬರ ಜೋರಾಗಿದೆ. ಜಲಪಾತ, ಬೀಚ್‌, ಬೆಟ್ಟಗಳಿಗೆ ಪ್ರವಾಸಕ್ಕೆ ಹೋಗುವವರ ಸಂಖ್ಯೆಯೂ ದುಪ್ಪಟ್ಟಾಗಿದೆ. ಆದರೆ, ಪ್ರವಾಸಕ್ಕೆ ಹೋದಾಗ ಜಲಪಾತ, ಬೆಟ್ಟ, ಸಮುದ್ರದ ತೀರದಲ್ಲಿ ಸೆಲ್ಫಿ, ಫೋಟೊ ತೆಗೆಸಿಕೊಳ್ಳುವ ಮುನ್ನ ತುಂಬ ಎಚ್ಚರದಿಂದಿರಿ ಅಥವಾ ಫೋಟೊ ತೆಗೆಸಿಕೊಳ್ಳುವ ಹುಚ್ಚು ಸಾಹಸ ಮಾಡಬೇಡಿ. ಏಕೆಂದರೆ, ಹೀಗೆ ಮುಂಬೈ (Mumbai) ಸಮುದ್ರದ ತೀರದಲ್ಲಿ ಗಂಡನ ಜತೆ ಫೋಟೊ ತೆಗೆಸಿಕೊಳ್ಳುತ್ತಿದ್ದ ಮಹಿಳೆಯೊಬ್ಬರು (Woman Swept Away) ಕೊಚ್ಚಿಹೋಗಿದ್ದಾರೆ. ಮಹಿಳೆ ಕೊಚ್ಚಿಹೋದ ವಿಡಿಯೊ (Viral Video) ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮುಂಬೈನ ಬಾಂದ್ರಾದಲ್ಲಿರುವ ಸಮುದ್ರದ ತೀರದಲ್ಲಿ ಜುಲೈ 9ರಂದು ದುರಂತ ಸಂಭವಿಸಿದೆ. ನೀರಿನಲ್ಲಿ ಕೊಚ್ಚಿಹೋದ ಮಹಿಳೆಯನ್ನು ಜ್ಯೋತಿ ಸೋನಾರ್‌ ಎಂದು ಗುರುತಿಸಲಾಗಿದೆ. ಇನ್ನು ಆಕೆಯ ಪತಿಯನ್ನು ಮುಕೇಶ್‌ ಸೋನಾರ್‌ ಎಂದು ಗುರುತಿಸಲಾಗಿದೆ. ಸಮುದ್ರದ ತೀರದಲ್ಲಿ ಇಬ್ಬರೂ ಫೋಟೊ ತೆಗೆಸಿಕೊಳ್ಳುತ್ತಿದ್ದರು. ಕಲ್ಲಿನ ಮೇಲೆ ಕೂತ ಅವರಿಗೆ ಹಲವು ಬಾರಿ ಅಲೆಗಳು ತಾಕಿ ಹೋಗಿವೆ. ಒಂದೆರಡು ಫೋಟೊ ತೆಗೆಸಿಕೊಂಡ ಬಳಿಕ ಅವರು ಎದ್ದು ಬಂದಿದ್ದರೆ ದುರಂತವೇ ಸಂಭವಿಸುತ್ತಿರಲಿಲ್ಲ. ಆದರೆ, ಅವರು ಹೆಚ್ಚು ಹೊತ್ತು ಅಲ್ಲಿಯೇ ಕುಳಿತಿದ್ದು, ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ದುರಂತದ ವಿಡಿಯೊ

ಪತಿ ಹಾಗೂ ಪತ್ನಿ ಕಲ್ಲಿನ ಮೇಲೆ ಕುಳಿತು ಫೋಟೊಗೆ ಪೋಸ್‌ ಕೊಡುತ್ತಿದ್ದರು. ಅವರ ಮಕ್ಕಳು ಇಬ್ಬರ ಫೋಟೊ ತೆಗೆಯುತ್ತಿದ್ದರು. ಹಲವು ಬಾರಿ ಸಮುದ್ರದ ಅಲೆಗಳು ಬಂದು ಅವರಿಗೆ ತಾಕಿವೆ. ಆದರೂ, ಅವರು ಅಲ್ಲಿಯೇ ಕುಳಿತಿದ್ದಾರೆ. ಜೋರಾಗಿ ಬಂದ ಅಲೆಗೆ ಇಬ್ಬರೂ ನೀರಿನಲ್ಲಿ ಬಿದ್ದಿದ್ದಾರೆ. ಇದೇ ವೇಳೆ ಮುಕೇಶ್‌ ಸೋನಾರ್‌ ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಆದರೆ, ಮಹಿಳೆಯು ಕೊಚ್ಚಿಹೋಗಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಎರಡು ಚೂರಾಗಿ ಒಡೆದು, ಮುಳುಗಿದ ಬೋಟ್​​; ಮದುವೆಯಿಂದ ಬರುತ್ತಿದ್ದ 103 ಜನರ ದುರ್ಮರಣ

ಮಾಹಿತಿ ಪಡೆದ ಭದ್ರತಾ ಸಿಬ್ಬಂದಿಯು ಕೂಡಲೇ ಸ್ಥಳಕ್ಕೆ ಆಗಮಿಸಿದರೂ ಮಹಿಳೆಯನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ತಿಳಿದುಬಂದಿದೆ. ಮಹಿಳೆ ನೀರಿಗೆ ಬೀಳುತ್ತಲೇ ಮಕ್ಕಳು ಅಮ್ಮಾ ಎಂದು ಕೂಗಿದ್ದಾರೆ. ಆದರೆ, ಮಕ್ಕಳ ಕೂಗು ಅಮ್ಮನಿಗೆ ಕೇಳಿಸಲೇ ಇಲ್ಲ, ಆಕೆ ಜೀವಂತವಾಗಿ ಬರಲೇ ಇಲ್ಲ. ಪ್ರವಾಸಿ ತಾಣಗಳಿಗೆ ಹೋಗಿ ಫೋಟೊ ತೆಗೆಸಿಕೊಳ್ಳುವುದು ತಪ್ಪಲ್ಲ. ಆದರೆ, ಅಪಾಯಕಾರಿ ಸ್ಥಳಗಳಲ್ಲಿ ಫೋಟೊ ತೆಗೆಸಿಕೊಳ್ಳುವಾಗ ಎಚ್ಚರದಿಂದ ಇರಬೇಕು ಎಂದು ಪೊಲೀಸರು ಎಚ್ಚರಿಸಿದ್ದಾರೆ.

Exit mobile version