ನವ ದೆಹಲಿ: 2007ರಲ್ಲಿ ಕಿಡ್ನ್ಯಾಪ್ ಆಗಿದ್ದ ಮಹಿಳೆ ಈಗ 17ವರ್ಷಗಳ ಬಳಿಕ (Kidnapped Woman) ದೆಹಲಿಯಲ್ಲಿ ಪತ್ತೆಯಾಗಿದ್ದಾರೆ. ಆಕೆಗೆ ಈಗ 32 ವರ್ಷ. ಇವಳಿಗೆ 15ವರ್ಷವಾಗಿದ್ದಾಗ ಅಪಹರಣಕ್ಕೀಡಾಗಿದ್ದಳು. ಅವತ್ತಿನಿಂದ ಇವತ್ತಿನವರೆಗೆ ಪತ್ತೆಯಾಗಿರಲಿಲ್ಲ. ಕಟುಂಬದವರು, ಸಂಬಂಧಿಕರು ಹುಡುಕಿದ್ದರು. ಪೊಲೀಸ್ ಕಂಪ್ಲೇಂಟ್ ಕೊಟ್ಟ ಬಳಿಕ ಪೊಲೀಸರೂ ಕೂಡ ಹುಡುಕಾಟ ನಡೆಸಿದ್ದರು. ಆದರೆ ಸಿಕ್ಕಿರಲಿಲ್ಲ. ಇದೀಗ ಡಿಸಿಪಿ ಶಹದಾರ ರೋಹಿತ್ ಮೀನಾ ಅವರು ಮಾಹಿತಿ ನೀಡಿ ‘ಮೇ 22ರಂದು ಸೀಮಾಪುರಿ ಪೊಲೀಸ್ ಠಾಣೆಗೆ ಈ ಬಗ್ಗೆ ಯುವತಿ ಬಗ್ಗೆ ಮಾಹಿತಿ ಸಿಕ್ಕಿತ್ತು. ಅದರ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದಾಗ ಹುಡುಗಿ ಸಿಕ್ಕಿದ್ದಾಳೆ ಎಂದು ತಿಳಿಸಿದ್ದಾರೆ.
ಯುವತಿ 2006ರಲ್ಲಿ ನಾಪತ್ತೆಯಾದಾಗ ಗೋಕುಲ್ಪುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಹುಡುಗಿಯ ಪಾಲಕರೇ ಕಂಪ್ಲೇಂಟ್ ಕೊಟ್ಟಿದ್ದರು. ಇದೀಗ ಸಿಕ್ಕ ಬಳಿಕ ಪೊಲೀಸರ ಎದುರು ಆಕೆ ಹೇಳಿಕೆ ನೀಡಿದ್ದಾಳೆ. ‘2006ರಲ್ಲಿ ನನ್ನ ಅಪಹರಣ ಮಾಡಲಾಯಿತು. ದೆಹಲಿಯಲ್ಲಿರುವ ಮನೆ ಬಿಟ್ಟು ನಾನು ಮೊದಲು ಹೋಗಿದ್ದು ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿರುವ ಚೆರ್ಡಿಹ್ ಎಂಬ ಹಳ್ಳಿಗೆ. ಅಲ್ಲಿ ದೀಪಕ್ ಎಂಬುವನ ಜತೆ ವಾಸವಾಗಿದ್ದೆ. ಆದರೆ ಲಾಕ್ಡೌನ್ ಸಮಯದಲ್ಲಿ ನನಗೂ ಅವನಿಗೂ ಮಧ್ಯೆ ಜಗಳವಾಯಿತು. ಹೀಗಾಗಿ ಮನೆ ಬಿಡಬೇಕಾಯಿತು. ಅಲ್ಲಿಂದ ಮತ್ತೆ ಬಂದು ದೆಹಲಿಯ ಗೋಕಲ್ಪುರಿಯಲ್ಲಿಯೇ, ಒಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದೆ ಎಂದು ಹೇಳಿಕೊಂಡಿದ್ದಾಳೆ’ ಆದರೆ ಪೊಲೀಸರು ಈ ಕೇಸ್ನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Kidnapping Case: ಕಾಲ್ ಗರ್ಲ್ ಆಗಿ ಬಂದವಳೇ ಕಿಡ್ನ್ಯಾಪರ್ ಆದಳು; ಬೆಂಗಳೂರು ಯುವಕರ ಅಪಹರಣ ಕೇಸ್‌ಗೆ ಟ್ವಿಸ್ಟ್