Site icon Vistara News

Twitter Golden Tick: ಟ್ವಿಟರ್‌ ಗೋಲ್ಡನ್‌ ಟಿಕ್‌ ಕಳೆದುಕೊಂಡ ಯೋಗಿ, ಹಿಮಂತ; ತಿರಂಗಾ ಡಿಪಿಗೂ ಇದಕ್ಕೂ ಏನು ಸಂಬಂಧ?

Yogi Adityanath Twitter Golden Tick

Yogi Adityanath, Himanta Among BJP Leaders To Lose Golden Tick On X After Changing Profile Pic To Tricolour

ನವದೆಹಲಿ: ದೇಶದ ಸ್ವಾತಂತ್ರ್ಯ ದಿನಾಚರಣೆ (Independence Day 2023) ಹಿನ್ನೆಲೆಯಲ್ಲಿ ದೇಶದ ಪ್ರತಿಯೊಬ್ಬರೂ ಸಾಮಾಜಿಕ ಜಾಲತಾಣಗಳ ಪ್ರೊಫೈಲ್‌ ಫೋಟೊವನ್ನು ತಿರಂಗಾ ಆಗಿ ಬದಲಾಯಿಸೋಣ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಕರೆ ನೀಡಿದ್ದಾರೆ. ಮೋದಿ ನೀಡಿದ ಕರೆಯಂತೆ ತಿರಂಗಾವನ್ನು ಡಿಪಿ ಇಟ್ಟ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಸೇರಿ ಹಲವರು ಟ್ವಿಟರ್‌ ಗೋಲ್ಡನ್‌ ಟಿಕ್‌ಅನ್ನು (Twitter Golden Tick) ಕಳೆದುಕೊಂಡಿದ್ದಾರೆ.

ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಅಧಿಕೃತ ಎಂಬುದಕ್ಕೆ ಟ್ವಿಟರ್‌ ಗೋಲ್ಡನ್‌ ಟಿಕ್‌ ನೀಡುತ್ತದೆ. ಆದರೆ, ತಿರಂಗಾವನ್ನು ಡಿಪಿ ಇಟ್ಟ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್‌, ಹಿಮಂತ ಬಿಸ್ವಾ ಶರ್ಮಾ, ಶಿವರಾಜ್‌ ಸಿಂಗ್‌ ಚೌಹಾಣ್‌, ಪುಷ್ಕರ್‌ ಸಿಂಗ್‌ ಧಾಮಿ, ಸಂಬಿತ್‌ ಪಾತ್ರಾ ಸೇರಿ ಬಿಜೆಪಿ ಹಲವು ನಾಯಕರ ಗೋಲ್ಡನ್‌ ಟಿಕ್‌ ಮಾಯವಾಗಿದೆ. ಪ್ರೊಫೈಲ್‌ ಫೋಟೊ ಅಪ್‌ಲೋಡ್‌ ಮಾಡಿ, ಸ್ಪಷ್ಟನೆ ನೀಡಿದ ಬಳಿಕವೇ ಗೋಲ್ಡನ್‌ ಟಿಕ್‌ ವಾಪಸ್‌ ಸಿಗಲಿದೆ ಎಂದು ತಿಳಿದುಬಂದಿದೆ.

ಗೋಲ್ಡನ್‌ ಟಿಕ್‌ ಇಲ್ಲದ ಶಿವರಾಜ್‌ ಸಿಂಗ್‌ ಖಾತೆ

ಇದನ್ನೂ ಓದಿ: Seema Haider: ತಿರಂಗಾ ಹಾರಿಸಿ ಭಾರತ್‌ ಮಾತಾ ಕಿ ಜೈ ಎಂದ ಪಾಕಿಸ್ತಾನದ ಸೀಮಾ ಹೈದರ್! ವಿಡಿಯೊ ವೈರಲ್

ಕರೆ ನೀಡಿದ್ದ ಮೋದಿ

“ಹರ್‌ ಘರ್‌ ತಿರಂಗಾ (ಪ್ರತಿಯೊಂದು ಮನೆಯಲ್ಲೂ ತಿರಂಗಾ) ಅಭಿಯಾನದ ಭಾಗವಾಗಿ ಎಲ್ಲರೂ ತಿರಂಗಾವನ್ನು ಸಾಮಾಜಿಕ ಜಾಲತಾಣಗಳ ಡಿಪಿಯಾಗಿ (Social Media Display Picture) ಇಡೋಣ. ಆ ಮೂಲಕ ನಮ್ಮ ಹಾಗೂ ದೇಶದ ನಡುವಿನ ಭಾವುಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸೋಣ” ಎಂದು ನರೇಂದ್ರ ಮೋದಿ ಅವರು ಟ್ವೀಟ್‌ (ಈಗ X) ಮಾಡಿದ್ದರು. ಹಾಗೆಯೇ, ಅವರು ತಮ್ಮ ಡಿಪಿಯನ್ನು ತಿರಂಗಾ ಆಗಿ ಬದಲಿಸಿದ್ದಾರೆ. ಆದರೆ, ಅವರ ಗ್ರೇ ಟಿಕ್‌ (ಬೂದು) ಹಾಗೆಯೇ ಇದೆ.

ದೆಹಲಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಗೆ ತಯಾರಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್‌ 15ರಂದು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ದೇಶಾದ್ಯಂತ ಸುಮಾರು 1,800 ವಿಶೇಷ ಅತಿಥಿಗಳು ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗುತ್ತಿದೆ.

Exit mobile version