ಚೆನ್ನೈ: ಹಿಂದೂ ಧರ್ಮದ ಕುರಿತು ಡಿಎಂಕೆ ಸಂಸದ ಎ. ರಾಜಾ ನೀಡಿರುವ ಹೇಳಿಕೆಯು ವಿವಾದ ಸೃಷ್ಟಿಸಿದ್ದು, ಬಿಜೆಪಿಯು ತಿರುಗೇಟು ನೀಡಿದೆ. “ಶೂದ್ರರು ಹಿಂದೂಗಳಾಗಿರುವ ತನಕ ಶೂದ್ರರಾಗಿಯೇ ಉಳಿಯುತ್ತಾರೆ. ಅಸ್ಪೃಶ್ಯರು, ವೇಶ್ಯೆಯರು ಸಹ ಹೀಗೆಯೇ ಇರುತ್ತಾರೆ” ಎಂದು ಎ.ರಾಜಾ (A Raja) ಹೇಳಿದ್ದಾರೆ.
“ಹಿಂದೂ ಧರ್ಮದಲ್ಲಿ ನೀವು ಶೂದ್ರರಾಗಿದ್ದರೆ ಶೂದ್ರರಾಗಿಯೇ ಉಳಿಯುತ್ತೀರಿ. ವೇಶ್ಯೆಯರ ಮಕ್ಕಳು ಶೂದ್ರರಾಗಿಯೇ ಇರಲಿದ್ದಾರೆ. ನೀವು ದಲಿತರಾಗಿದ್ದರೆ, ಹಿಂದೂ ಆಗಿರುವತನಕ ದಲಿತರೇ ಆಗಿರುತ್ತೀರಿ. ಹಿಂದೂ ಆಗಿರುವತನಕ ನೀವು ಅಸ್ಪೃಶ್ಯರೇ ಆಗಿರುತ್ತೀರಿ. ಮನುಸ್ಮೃತಿಯು ಇಂತಹದ್ದೊಂದು ಅಸಮಾನತೆ ಸೃಷ್ಟಿಸಿದೆ” ಎಂದಿದ್ದಾರೆ.
ಎ.ರಾಜಾ ನೀಡಿರುವ ಹೇಳಿಕೆಗೆ ಬಿಜೆಪಿಯು ವಿರೋಧ ವ್ಯಕ್ತಪಡಿಸಿದೆ. “ತಮಿಳುನಾಡಿನಲ್ಲಿ ಇಂತಹ ರಾಜಕೀಯ ನಡೆಯುತ್ತಿರುವುದು ಬೇಸರದ ಸಂಗತಿಯಾಗಿದೆ. ಒಬ್ಬರನ್ನು ಹೋಲಿಸಲು ಎ.ರಾಜಾ ಅವರು ಇನ್ನೊಬ್ಬರ ವಿರುದ್ಧ ದ್ವೇಷ ಹರಡುತ್ತಿದ್ದಾರೆ. ಇಂತಹ ಮನಸ್ಥಿತಿಯ ರಾಜಕಾರಣಿಗಳು ತಮಿಳುನಾಡಿನಲ್ಲಿರುವುದಕ್ಕೆ ಬೇಸರವಾಗಿದೆ” ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ | Death Threat | ಹಿಂದೂ ಸಂಘಟನೆಗಳನ್ನು ಬೆಂಬಲಿಸಿದ್ದಕ್ಕೆ ಘಾಜಿಯಾಬಾದ್ ಡಾಕ್ಟರ್‌ಗೆ ಶಿರಚ್ಛೇದದ ಬೆದರಿಕೆ!