Site icon Vistara News

ChatGPT and Whatsapp: ವಾಟ್ಸಾಪ್‌ನಲ್ಲಿ ಜಾಟ್‌ಜಿಪಿಟಿ ಬಳಸಬಹುದಾ? ಇದರಿಂದ ಏನು ಲಾಭ?

You can integrate Chat GPT and Whatsapp and Follow these steps

ನವದೆಹಲಿ: ಸದ್ಯ ಟಾಕ್ ಆಫ್ ದಿ ಟೌನ್ ಆಗಿರುವ ಚಾಟ್‌ಜಿಪಿಟಿ ಬಗ್ಗೆ ಸಾಕಷ್ಟು ಮಾಹಿತಿಗಳು ಹೊರ ಬೀಳುತ್ತಿವೆ. ಟೆಕ್ನಾಲಜಿ ಜಗತ್ತಿನಲ್ಲಿ ಚಾಟ್‌ಜಿಪಿಟಿಯದ್ದೇ ಸದ್ದು ಜೋರಾಗಿದೆ. ಎಐ ಆಧರಿತ ಈ ಚಾಟ್‌ಬಾಟ್ ಸಾಕಷ್ಟು ಕೈಗಾರಿಕೆಗಳು ಮತ್ತು ಕ್ಷೇತ್ರಗಳಲ್ಲಿ ಟೂಲ್ ಆಗಿ ಬಳಕೆಯಾಗುತ್ತಿದೆ. ಈ ಚಾಟ್‌ಬಾಟ್ ಅನ್ನು ನೀವು ನಿಮ್ಮ ವಾಟ್ಸಾಪ್ (ChatGPT and whatsapp) ಜತೆಗೆ ಸಂಯೋಜಿಸಬಹುದು. ಆದರೆ, ಚಾಟ್‌ಜಿಪಿಟಿ ಮತ್ತು ವಾಟ್ಸಾಪ್ ಮಧ್ಯೆ ಯಾವುದೇ ಅಧಿಕೃತ ಒಪ್ಪಂದಗಳಿಲ್ಲ. ಹಾಗಾಗಿ, ಅಧಿಕೃತವಾಗಿ ಈ ಎರಡೂ ಸೇವೆಗಳನ್ನು ಒಂದುಗೂಡಿಸಲು ಸಾಧ್ಯವಿಲ್ಲ. ಆದರೆ, ಬೇರೆ ಮಾರ್ಗಗಳನ್ನು ಬಳಸಿಕೊಂಡು, ನೀವು ವಾಟ್ಸಾಪ್‌ನಲ್ಲೇ ಚಾಟ್‌ಜಿಪಿಟಿಯನ್ನು ಬಳಸಬಹುದು.

ಹೀಗೆ ಮಾಡಿ… ಮೊದಲಿಗೆ ವಾಟ್ಸಾಪ್ ಬ್ಯುಸಿನೆಸ್ ಪ್ರೋಗ್ರಾಮಿಂಗ್ ಇಂಟರ್ಫೇಸ್(API)‌ ನೋಂದಣಿ ಮಾಡಿ ಮತ್ತು ಚಾಟ್‌ಗಾಗಿ ಪ್ಲೋ ಕ್ರಿಯೇಟ್ ಮಾಡಿ. ಬಳಿಕ, ಚಾಟ್ ಡೆವಲಪರ್‌ ಬಳಸಿಕೊಂಡು, ನಿಮ್ಮ ಚಾಟ್‌ಬಾಟ್ ಫಾಲೋ ಮಾಡಿ. ಆ ಬಳಿಕ, ಓಪನ್ಎಐ ಎಪಿಐ ಬೇಕಾಗುತ್ತದೆ. ಅದಕ್ಕಾಗಿ ನೀವು ಓಪನ್ಐಎ ಅಕೌಂಟ್ ಓಪನ್ ಮಾಡಿಕೊಂಡು, ಪ್ರೋಗ್ರಾಮಿಂಗ್ ಇಂಟರ್ಫೇಸ್ ಕೀ ಪುಟಕ್ಕೆ ಭೇಟಿ ನೀಡಿ. ಅಲ್ಲಿ, ಒಂದು ಸೀಕ್ರೆಟ್ ಕೀ ರಚಿಸಿ. ಇಷ್ಟಾದ ಬಳಿಕ ಅಂತಿಮವಾಗಿ, ವಾಟ್ಸಾಪ್‌ ಬಾಟ್‌ಗೆ ಕನೆಕ್ಟ್ ಮಾಡಲು ಓಪನ್ಎಐ ಎಪಿಐ ಬಳಸಿಕೊಳ್ಳಿ. ಒಂದೊಮ್ಮೆ ಈ ಇಂಟಿಗ್ರೇಷನ್ ಸೂಕ್ತ ಅಲ್ಲ ಎನಿಸಿದರೆ, ವಾಟ್ಸಾಪ್ ನಿಮ್ಮನ್ನು ಬ್ಲಾಕ್ ಮಾಡುವ ಸಾಧ್ಯತೆಗಳಿರುತ್ತವೆ. ಹಾಗಾಗಿ, ನಿಮ್ಮ ರಿಸ್ಕ್ ಮೇಲೆ ಈ ಇಂಟಿಗ್ರೇಷನ್ ಮಾಡಿಕೊಳ್ಳಬಹುದು.

ಮತ್ತೊಂದು ಮಾರ್ಗವಾಗಿ ನೀವು ಚಾಟ್‌ಜಿಪಿಟಿ ಮತ್ತು ವಾಟ್ಸಾಪ್ ಅನ್ನು ಇಂಟಿಗ್ರೇಟ್ ಮಾಡಬಹುದು. ಈ ತಂತ್ರವನ್ನು ಸಂಶೋಧಕ ಡೇನಿಯಲ್ ಎಂಬವರು ಶೋಧಿಸಿದ್ದಾರೆ . ಇದಕ್ಕಾಗಿ ನೀವು Execute server.pyನಿಂದ GitHub ಕೋಡ್ ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಬಳಿಕ ಫೈಲ್ ಡೌನ್‌ಲೋಡ್ ಮಾಡಿಕೊಳ್ಳಲು download zip ಮೇಲೆ ಕ್ಲಿಕ್ ಮಾಡಿ.

ಆ ನಂತರ, ಟರ್ಮಿನಲ್‌ನಲ್ಲಿ Whatsapp-gpt-principal ಕಡತವನ್ನು ಎಕ್ಸಿಕ್ಯೂಟ್ ಮಾಡಬೇಕು. server.py ಕೂಡ ಎಕ್ಸಿಕ್ಯೂಟ್ ಮಾಡಬೇಕು. ಬಳಿಕ Is ನಮೂದಿಸಿ, ಎಂಟರ್ ಒತ್ತಿ. ಬಳಿಕ python server.py ಎಂಟರ್ ಮಾಡಿ. ಆಗ ನಿಮ್ಮ ಫೋನ್ ಸ್ವಯಂ ಆಗಿ ಓಪನ್ಎಐ ವಿಜಿಟ್‌ ಪೇಜ್‌ಗೆ ಕಾನ್ಫಿಗರ್ ಆಗುತ್ತದೆ. ಮುಂದಿನ ಹಂತದಲ್ಲಿ ನೀವು ಹ್ಯೂಮನ್ ಎಂಬುದನ್ನು ದೃಢೀಕರಣ ಮಾಡಲು, I’m a human ಬಾಕ್ಸ್ ಚೆಕ್ ಮಾಡಿ. ಬಳಿಕ ನಿಮ್ಮ ವಾಟ್ಸಾಪ್ ಅಕೌಂಟ್ ಓಪನ್ ಮಾಡಿ, ಆಗ ಓಪನ್ಎಐ ಚಾಟ್‌ಜಿಪಿಟಿ ವಾಟ್ಸಾಪ್‌ನೊಂದಿಗೆ ಇಂಟಿಗ್ರೇಟ್ ಆಗಿರುವುದು ಅನುಭವಕ್ಕೆ ಬರುತ್ತದೆ.

ಇದನ್ನೂ ಓದಿ: ChatGPT ಬಳಸಬೇಕಿದ್ದರೆ ತಿಂಗಳಿಗೆ 3,400 ರೂ. ಕೊಡ್ಬೇಕಾ?

ಈ ರೀತಿಯಾಗಿ ನೀವು ಚಾಟ್‌ಜಿಪಿಟಿಯನ್ನು ನಿಮ್ಮ ವಾಟ್ಸಾಪ್‌ನೊಂದಿಗೆ ಇಂಟಿಗ್ರೇಟ್ ಮಾಡಬಹುದು. ಆದರೆ, ಇದ್ಯಾವುದು ಅಧಿಕೃತವಾಗಿರುವಂಥದ್ದಲ್ಲ. ನಿಮ್ಮ ಸ್ವಂತ ರಿಸ್ಕ್‌ನಲ್ಲಿ ಮಾಡಬೇಕಾಗುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು.

Exit mobile version