Site icon Vistara News

Gym Workout: ಜಿಮ್ ಟ್ರೆಡ್‌ಮಿಲ್‌‌ನಲ್ಲಿ ಓಡುತ್ತಿದ್ದಾಗಲೇ ವಿದ್ಯುತ್ ಸ್ಪರ್ಶದಿಂದ ಯುವ ಟೆಕ್ಕಿ ಮೃತ

Saksham Pruthi

ನವದೆಹಲಿ: ಜಿಮ್‌ವೊಂದರ ಟ್ರೆಡ್‌ಮಿಲ್‌ನಲ್ಲಿ (Treadmill) ಕಸರತ್ತು ಮಾಡುತ್ತಿದ್ದ ಯುವ ಟೆಕಿಯೊಬ್ಬರು ವಿದ್ಯುತ್ ಸ್ಪರ್ಶದಿಂದಾಗಿ ಮೃತಪಟ್ಟ (Techie Electrocuted to Death) ಘಟನೆ ಉತ್ತರ ದಿಲ್ಲಿಯ (Delhi) ರೋಹಿಣಿ ಪ್ರದೇಶದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಸಕ್ಷಮ್ ಪೃಥಿ ಎಂದು ಗುರುತಿಸಲಾಗಿದೆ. 24 ವರ್ಷದ ಯುವಕ ಬಿಟೆಕ್ ಪದವೀಧರನಾಗಿದ್ದು, ಗುರಗ್ರಾಮ್ ಮೂಲದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ದಿಲ್ಲಿಯ ರೋಹಿಣಿ ಸೆಕ್ಟರ್ 19ರ ನಿವಾಸಿಯಾಗಿದ್ದ ಸಕ್ಷಮ್ ಅವರು, ಸೆಕ್ಟರ್ 15ರಲ್ಲಿರುವ ಜಿಮ್‌ಪ್ಲೆಕ್ಸ್‌ ಫಿಟ್ನೆಸ್ ಝೋನ್‌ ಜಿಮ್‌ಗೆ ಹೋಗುತ್ತಿದ್ದರು(Gym Workout).

ಮಂಗಳವಾರ ಬೆಳಗ್ಗೆ ಸುಮಾರು 7.30ರ ಸುಮಾರಿಗೆ ಟ್ರೆಡ್‌ಮಿಲ್‌ನಲ್ಲಿ ಓಡುತ್ತಿದ್ದಾಗಲೇ ಕುಸಿದು ಬಿದ್ದಿದ್ದಾರೆ. ಅವರ ಮರಣೋತ್ತರ ಪರೀಕ್ಷೆಯಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಜಿಮ್ ಮ್ಯಾನೇಜರ್ ಅನುಭವ್ ದುಗ್ಗಲ್ ಅವರನ್ನು ದಿಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೊಲೆಗೆ ಸಮನಲ್ಲದ ಅಪರಾಧಿ ನರಹತ್ಯೆ ಮತ್ತು ಯಂತ್ರೋಪಕರಣಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದ ನಡವಳಿಕೆಯ ಸೆಕ್ಷನ್‌ಗಳ ಅಡಿಯಲ್ಲಿ ಜಿಮ್ ಮ್ಯಾನೇಜರ್ ವಿರುದ್ಧ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ. ವಿಚಾರಣೆಯನ್ನು ಕೈಗೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Kanwar Yatra: ದೇವರ ಮೆರವಣಿಗೆ ವೇಳೆ ಕಾದು ಕುಳಿತಿದ್ದ ಯಮ; ವಿದ್ಯುತ್‌ ತಗುಲಿ ಐವರ ಸಾವು

ಜಿಮ್‌ನಲ್ಲಿ ಕುಸಿದು ಬಿದ್ದು, ಹೃದಯಾಘಾತಕ್ಕೆ ಒಳಗಾಗಿ ಮೃತಪಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಸಾಲಿಗೆ ಈ ಪ್ರಕರಣವು ಸೇರಿದೆ.

Exit mobile version