Site icon Vistara News

Bigg Boss Hindi | ಈ ಬಾರಿ ಬಿಗ್ ಬಾಸ್ ಕೂಡ ಆಟ ಆಡುತ್ತಾರೆ: ಅಖಾಡಕ್ಕೆ ಇಳಿಯಲಿದ್ದಾರಾ ಹಿಂದಿ ಬಿಗ್ ಬಾಸ್?

Bigg Boss Hindi

ಬೆಂಗಳೂರು: ಕನ್ನಡ ಮತ್ತು ತೆಲುಗು ಬಿಗ್‌ ಬಾಸ್‌ ಬಿಡುಗಡೆಯ ಸುದ್ದಿ ಬೆನ್ನಲ್ಲೆ ಇದೀಗ ಹಿಂದಿ ಬಿಗ್‌ ಬಾಸ್‌ (Bigg Boss Hindi) ಬರಲು ಸಜ್ಜಾಗಿದೆ. ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾದ ಹಿಂದಿ ಬಿಗ್‌ ಬಾಸ್‌ 16 ಪ್ರೋಮೊ ಕೂಡ ರಿಲೀಸ್‌ ಆಗಿದೆ. ಪ್ರತಿ ಬಾರಿ ಅಂತೆ ಈ ಬಾರಿ ಸಲ್ಮಾನ್ ಖಾನ್ ನಿರೂಪಣೆ ಮಾಡಲಿದ್ದಾರೆ.

ಈ ಬಾರಿ ಬಿಗ್ ಬಾಸ್ ಕೂಡ ಆಟ ಆಡುತ್ತಾರೆ ಎಂಬ ಕ್ಯಾಪ್ಶನ್ ನೀಡಲಾಗಿದೆ. ʻ15 ವರ್ಷಗಳಲ್ಲಿ ಎಲ್ಲರೂ ತಮ್ಮ ತಮ್ಮ ಆಟಗಳನ್ನು ಆಡಿದ್ದಾರೆ. ಈ ಬಾರಿ ಬಿಗ್‌ ಬಾಸ್‌ ಕೂಡ ಆಟ ಆಡುತ್ತಾರೆʼʼ ಎಂದು ಕ್ಯಾಪ್ಷನ್‌ ನೀಡಲಾಗಿದೆ. ಇದು ವೀಕ್ಷಕರಲ್ಲಿ ಕುತೂಹಲ ಹುಟ್ಟಿಸಿದೆ. ಈ ಬಾರಿ ಹೊಸ ರೀತಿಯಲ್ಲಿ ಬಿಗ್‌ ಬಾಸ್‌ ಮೂಡಿ ಬರುತ್ತಿದೆ ಎನ್ನಲಾಗುತ್ತಿದೆ.

ಪ್ರತಿ ವರ್ಷ ಮನೆಯ ಲುಕ್‌ ಬದಲಾಯಿಸಲಾಗುತ್ತದೆ. ಈ ಬಾರಿಯ ಬಿಗ್‌ ಬಾಸ್‌ ಮನೆ ಅದ್ಧೂರಿಯಾಗಿ ಇರಲಿದೆ ಎಂದು ವರದಿ ಆಗಿದೆ.

ಇದನ್ನೂ ಓದಿ | Bigg Boss Telugu | ಇಂದಿನಿಂದ ತೆಲುಗು ಬಿಗ್ ಬಾಸ್ ಆಟ ಶುರು!

Exit mobile version