Site icon Vistara News

Bigg Boss Kannada | ಕೆಲವೇ ಕ್ಷಣಗಳಲ್ಲಿ ಬಿಗ್‌ ಬಾಸ್‌ ಒಟಿಟಿ ಶುರು: ಇಲ್ಲಿದೆ ಟಾಪ್‌ 10 ಸ್ಪರ್ಧಿಗಳ ಮಾಹಿತಿ!

Bigg Boss Kannada

ಬೆಂಗಳೂರು: ಬಿಗ್‌ಬಾಸ್‌ ಒಟಿಟಿ (Bigg Boss Kannada) ಶನಿವಾರ (ಆ.6) ಗ್ರ್ಯಾಂಡ್‌ ಪ್ರೀಮಿಯರ್‌ ಸಂಜೆ 7ಕ್ಕೆ ನಡೆಯಲಿದೆ. ಈ ಬಾರಿ ಬಿಗ್‌ಬಾಸ್‌ ಕನ್ನಡ ಒಟಿಟಿಯಲ್ಲಿ 24 ಗಂಟೆಗಳ ಕಾಲ ಪ್ರಸಾರ ಆಗಲಿದೆ. ಈಗಾಗಲೇ ಬಿಗ್‌ಬಾಸ್‌ ಮನೆ ಸೇರಲಿರುವ ಪಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು. ಆದರೆ, ಈಗ ಹರಿದಾಡಿರುವ ಸ್ಪರ್ಧಿಗಳ ಹೆಸರು ನಿಖರವಾದದ್ದು ಎಂದು ಹೇಳಲಾಗುತ್ತಿದೆ.

ದಕ್ಷಿಣ ಭಾರತದ ನಾಲ್ಕೂ ಭಾಷೆಗಳ ಪೈಕಿ ಕನ್ನಡದಲ್ಲೇ ಮೊದಲ ಬಾರಿಗೆ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಈಗಾಗಲೇ ಮಾಹಿತಿ ನೀಡಿರುವಂತೆ 16 ಮಂದಿ ಸ್ಪರ್ಧಿಗಳು ಬಿಗ್‌ಬಾಸ್‌ ಕನ್ನಡ ಒಟಿಟಿಯಲ್ಲಿ ಭಾಗವಹಿಸಲಿದ್ದಾರೆ.

ಸಿನಿಮಾ ಕ್ಷೇತ್ರದಿಂದ ಸೋನು ಶ್ರೀನಿವಾಸ ಗೌಡ, ಅಕ್ಷತಾ ಕುಕ್ಕಿ, ರಾಕೇಶ್‌ ಅಡಿಗ, ರಾಗಿಣಿ, ರೇಖಾ ದಾಸ್‌, ಇನ್ನು ರಾಜಕೀಯ ಕ್ಷೇತ್ರದಿಂದ ಮುಖ್ಯಮಂತ್ರಿ ಚಂದ್ರು ಭಾಗವಹಿಸಲಿದ್ದಾರೆ ಎನ್ನಲಾಗುತ್ತಿದೆ. ಕಿರುತರೆಯಿಂದ ಪುಟ್ಟಗೌರಿ ಮದುವೆ ಖ್ಯಾತಿಯ ಸಾನ್ಯ ಅಯ್ಯರ್, ಪತ್ರಿಕೋದ್ಯಮದಿಂದ ಸೋಮಣ್ಣ ಮಾಚಿಮಾಡ ಈಗಾಗಲೇ ಫಿಕ್ಸ್‌ ಆಗಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್‌ ಮತ್ತು ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್‌, ಕ್ರಿಕೆಟ್‌ ಕ್ಷೇತ್ರದಿಂದ ವಿನಯ್‌ ಕುಮಾರ್‌ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ | Bigg Boss Kannada | ಲೀಕ್‌ ಆಯ್ತಾ ಸ್ಪರ್ಧಿಗಳ ಹೆಸರು? ಇವರಿಬ್ಬರು ಹೋಗುವುದು ಕನ್ಫರ್ಮ್!!

ಸೋಷಿಯಲ್‌ ಮೀಡಿಯಾ ಸ್ಟಾರ್‌ ಚಿಕ್ಕಮಗಳೂರಿನ ಕಾಫಿ ನಾಡು ಚಂದು ಬಿಗ್‌ಬಾಸ್‌ ಮನೆಗೆ ಎಂಟ್ರಿ ಆಗಲಿದ್ದಾರೆ ಎನ್ನಲಾಗಿದೆ. ಎಂಟಿವಿ ರೋಡೀಸ್‌ 18 ವಿಜೇತರಾದ ಜಶ್ವಂತ್‌ ಬೋಪಣ್ಣ ಹಾಗೂ ನಂದು ಬಿಗ್‌ ಮನೆ ಪ್ರವೇಶಿಸಲಿದ್ದಾರೆ. ಡಿಜಿಟಲ್‌ ಕ್ರಿಯೇಟರ್‌ ಕಿರಣ್‌ ಯೋಗೇಶ್ವರ್‌, ಬಡ್ಡೀಸ್‌ ಸಿನಿಮಾದಲ್ಲಿ ನಟಿಸಿದ ನಟ ಉದಯ್‌ ಸೂರ್ಯ ಇರಲಿದ್ದಾರೆ ಎಂಬ ಮಾತುಗಳು ಇವೆ. ಟಾಪ್‌ 10 ಪಟ್ಟಿಯಲ್ಲಿ ಇಷ್ಟು ಜನರ ಹೆಸರು ಪಕ್ಕಾ ಆಗಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಕೊನೇ ಕ್ಷಣದಲ್ಲಿ ಕೂಡ ಬದಲಾವಣೆ ಆಗುವ ಸಾಧ್ಯತೆ ಇದೆ.

ಈ ಬಾರಿ ಬಿಗ್‌ಬಾಸ್‌ ಸ್ಪರ್ಧಿಗಳ ಆಯ್ಕೆ ಸಿನಿಮಾ ಕ್ಷೇತ್ರ, ಪತ್ರಿಕೋದ್ಯಮ, ಕ್ರೀಡೆ, ಜ್ಯೋತಿಷ್ಯ ಸೇರಿದಂತೆ ಹಲವು ವಿಭಾಗದಿಂದ ಜನಪ್ರಿಯತೆ ಪಡೆದವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ. ಈಗಾಗಲೇ ಬಿಗ್‌ಬಾಸ್‌ ಮನೆ ಶೃಂಗಾರಗೊಂಡಿದ್ದು, ಸ್ಪರ್ಧಿಗಳನ್ನು ಸ್ವಾಗತಿಸಲು ಸಿದ್ಧವಾಗಿದೆ.

ಇದನ್ನೂ ಓದಿ | Bigg Boss Kannada | ಬಿಗ್ ಬಾಸ್ ಆಕಾಂಕ್ಷಿಗಳು ಮೋಸ ಹೋಗಬೇಡಿ! ಕಲರ್ಸ್‌ ವಾಹಿನಿಯಿಂದ ಸೂಚನೆ

Exit mobile version