ಲಂಡನ್: ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ಅವರು ನಟಿಸಿರುವ ಸಿಟಾಡೆಲ್ ಸೀರಿಸ್ (Citadel Series) ಅಮೇಜಾನ್‌ನಲ್ಲಿ ಬಿಡುಗಡೆಯಾಗಿ ದೊಡ್ಡ ಸೋಲನ್ನು ಕಂಡಿದೆ. ಸೀರಿಸ್ ಬಗ್ಗೆ ಸಾಕಷ್ಟು ನಿರೀಕ್ಷೆಯಿತ್ತಾದರೂ ಅದನ್ನು ನಿಜ ಮಾಡುವಲ್ಲಿ ಅದು ಮುಗ್ಗರಿಸಿದೆ. ಅಂದ ಹಾಗೆ ಈ ಸೀರಿಸ್ ಅನ್ನು ಬರೋಬ್ಬರಿ 2000 ಕೋಟಿ ರೂ. ವೆಚ್ಚದಲ್ಲಿ ತಯಾರಿಸಲಾಗಿತ್ತು ಎನ್ನುವ ಸತ್ಯ ಇದೀಗ ಹೊರಬಿದ್ದಿದೆ.
ಸ್ಪೈ ಥ್ರಿಲ್ಲರ್ ಕಥೆ ಹೊಂದಿರುವ ಈ ಸೀರಿಸ್‌ನಲ್ಲಿ ಪ್ರಿಯಾಂಕಾ, ರಿಚರ್ಡ್ ಜತೆಯಲ್ಲಿ ರುಸ್ಸೋ ಬ್ರದರ್ಸ್ ಕೂಡ ಇದ್ದಾರೆ. ಮೊದಲಿಗೆ ಈ ಸೀರಿಸ್‌ನ ಒಂದೊಂದು ಎಪಿಸೋಡ್‌ಗೆ 20 ಮಿಲಿಯನ್ ಡಾಲರ್ ಅನ್ನು ಪ್ರೈಮ್ ನೀಡಲು ಅಂದಾಜು ಹಾಕಿತ್ತು. ಆದರೆ ಸೀರಿಸ್‌ನ ಒಟ್ಟಾರೆ ಖರ್ಚು 250 ಮಿಲಿಯನ್ ಡಾಲರ್‌ಗೆ ಏರಿಕೆಯಾಯಿತು.
ಇದನ್ನೂ ಓದಿ: Viral Video: ಹೆರಿಗೆ ನೋವಿಂದ ಆಸ್ಪತ್ರೆಗೆ ದಾಖಲಾದ ಮಗಳು; ಆಕೆಯ ಮಾವ-ಅತ್ತೆಗೆ ಥಳಿಸಿದ ಅಪ್ಪ-ಅಮ್ಮ!
ವರದಿಗಳ ಪ್ರಕಾರ ಚಿತ್ರಕಥೆಗಾರ ಜೋಶ್ ಅಪ್ಪೆಲ್‌ಬಾಮ್ ಮತ್ತು ಹಿರಿಯ ಟಿವಿ ಬರಹಗಾರ ಬ್ರಿಯಾನ್ ಓಹ್ ಅವರು ಸಿಟಾಡೆಲ್‌ಗೆ ಕಥೆಯೊಂದನ್ನು ಬರೆದಿದ್ದರು. ಆದರೆ ರುಸ್ಸೋ ಬ್ರದರ್ಸ್ ಆ ಕಥೆಯನ್ನು ಒಪ್ಪಿಕೊಳ್ಳಲಿಲ್ಲ. ಕಥೆಯಲ್ಲಿ ಪ್ರಿಯಾಂಕಾ ಮತ್ತು ರಿಚರ್ಡ್ ಮಧ್ಯೆ ಪ್ರೇಮಕಥೆ ಬೇಡವೆಂದು ಅವರು ನಿಶ್ಚಯಿಸಿದ್ದರು. ಒಂದು ಕಡೆ ಜೋಶ್ ಅಪ್ಪೆಲ್‌ಬಾಮ್ ತಂಡ ಲಂಡನ್‌ನಲ್ಲಿ ಕುಳಿತುಕೊಂಡು ಪೋಸ್ಟ್ ಪ್ರೊಡಕ್ಷನ್ ಕೆಲಸ ಮಾಡುತ್ತಿತ್ತು. ಆದರೆ ಲಾಸ್ ಏಂಜಲೀಸ್‌ನಲ್ಲಿ ರುಸ್ಸೋ ಬ್ರದರ್ಸ್ ಕುಳಿತುಕೊಂಡು ಬೇರೆಯದ್ದೇ ಕಥೆಯನ್ನು ಬರೆದಿದ್ದರು.
ಈ ಎರಡೂ ಕಥೆಗಳನ್ನು ಪ್ರೈಮ್‌ಗೆ ನೀಡಿದಾಗ ಪ್ರೈಮ್ ರುಸ್ಸೋ ಬ್ರದರ್ಸ್ ಅವರ ಕಥೆಯನ್ನೇ ಒಪ್ಪಿಕೊಂಡಿತು. ಆದರೆ ಅದಾಗಲೇ ಅರ್ಧದಷ್ಟು ಸೀರಿಸ್‌ನ ಚಿತ್ರೀಕರಣ ಆಗಿಬಿಟ್ಟಿತ್ತು. ಹಾಗಾಗಿ ಮತ್ತೆ ಆ ಅರ್ಧ ಸೀರಿಸ್ ಅನ್ನು ಮರುಚಿತ್ರೀಕರಣ ಮಾಡಬೇಕಾಗಿ ಬಂದಿತು. ಇದರಿಂದಾಗಿ ಹೆಚ್ಚುವರಿ 80 ಮಿಲಿಯನ್ ಡಾಲರ್ ಖರ್ಚಾಯಿತು. ಇನ್ನು ಇದೇ ಸೀರಿಸ್‌ನ ಎರಡನೇ ಭಾಗವೂ ಬರಲಿದ್ದು, ಅದಕ್ಕೆ ಪ್ರತಿ ಎಪಿಸೋಡ್‌ಗೆ 25 ಮಿಲಿಯನ್ ಡಾಲರ್ ಖರ್ಚು ಮಾಡಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ: Viral Video : ಅತಿಯಾಸೆ ಗತಿಗೇಡು ಎನ್ನುವುದಕ್ಕೆ ಇದೇ ಸಾಕ್ಷಿ; ಭಾರೀ ಬೇಟೆಯ ನಿರೀಕ್ಷೆಯಲ್ಲಿದ್ದ ಚಿರತೆಗೆ ಸಿಕ್ಕಿದ್ದೇನು?
ಸಿಟಾಡೆಲ್ ಅಮೇಜಾನ್‌ನಲ್ಲಿ ಬಿಡುಗಡೆಯಾಗಿ ವೀಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಬಿಡುಗಡೆಯಾದ ವಾರದಿಂದಲೂ ಪ್ರೈಂನ ಅಗ್ರ 10 ಸರಣಿಗಳ ಪಟ್ಟಿಯಲ್ಲಿ ಸ್ಥಾನ ಗಳಿಸಿಕೊಳ್ಳುವಲ್ಲಿ ವಿಫಲವಾಗಿದೆ. ಸಿಟಾಡೆಲ್ ಎರಡನೇ ಸೀಸನ್ ಬಗ್ಗೆ ಇನ್ನೂ ಹೆಚ್ಚಿನ ಸುದ್ದಿಗಳು ಹೊರಗಡೆ ಬಂದಿಲ್ಲ. ಇನ್ನೊಂದತ್ತ ಈ ಸೀರಿಸ್ ಭಾರತದ ವರ್ಷನ್ ಅನ್ನೂ ತಯಾರಿಸಲಾಗುತ್ತಿದೆ. ನಟಿ ಸಮಂತಾ ರುತ್ ಪ್ರಭು, ನಟ ವರುಣ್ ಧವನ್ ಅವರು ಅದರಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.