Site icon Vistara News

Imdb Web Series 2023: ಅಗ್ರ ಸ್ಥಾನ ಪಡೆದ ‘ಫರ್ಝಿ’; ಲಿಸ್ಟ್‌ನಲ್ಲಿರುವ ಉಳಿದ ವೆಬ್‌ ಸೀರಿಸ್‌ ಯಾವುವು?

farzi

farzi

ಮುಂಬೈ: ಸಿನಿಮಾ, ಟಿವಿ ಶೋ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ಮೂಲವೆನಿಸಿಕೊಂಡಿರುವ ವಿಶ್ವ ಪ್ರಸಿದ್ಧ ತಾಣ ಐಎಂಡಿಬಿ(www.imdb.com) 2023ರ ಅತ್ಯಂತ ಜನಪ್ರಿಯ 10 ವೆಬ್‌ ಸಿರೀಸ್‌ಗಳನ್ನು ಘೋಷಿಸಿದೆ (Imdb Web Series 2023). ಐಎಂಡಿಬಿಯ ವರ್ಷಾಂತ್ಯದ ಈ ಪಟ್ಟಿಯನ್ನು ತಿಂಗಳಿಗೆ 200 ದಶಲಕ್ಷಕ್ಕೂ ಹೆಚ್ಚು ಬಾರಿ ಐಎಂಡಿಬಿ ತಾಣಕ್ಕೆ ಭೇಟಿ ನೀಡುವ ಬಳಕೆದಾರರ ಪೇಜ್‌ ವೀಕ್ಷಣೆಯನ್ನು ಆಧರಿಸಿ ಸಿದ್ಧಪಡಿಸಲಾಗಿದೆ. ಬಾಲಿವುಡ್‌ ನಟ ಶಾಹಿದ್‌ ಕಪೂರ್‌ (Shahid Kapoor) ಅಭಿನಯದ ʼಫರ್ಝಿʼ (Farzi) ಅಗ್ರ ಸ್ಥಾನದಲ್ಲಿದೆ.

ಅಗ್ರ ಸ್ಥಾನ ಯಾವ ವೆಬ್‌ ಸೀರಿಸ್‌ಗೆ?

ʼಫರ್ಜಿʼ ಮೂಲಕ ಶಾಹಿದ್ ಕಪೂರ್ ಡಿಜಿಟಲ್‌ಗೆ ಪಾದಾರ್ಪಣೆ ಮಾಡಿದ್ದಾರೆ. ದಕ್ಷಿಣ ಭಾರತದ ವಿಜಯ್ ಸೇತುಪತಿ, ಕೆಕೆ ಮೆನನ್‌, ರಾಶಿ ಖನ್ನಾ ಮತ್ತಿತರರು ಮುಖ್ಯ ಪಾತ್ರದಲ್ಲಿದ್ದಾರೆ. ʼಗನ್ಸ್ & ಗುಲಾಬ್ಸ್ʼ (Guns & Gulaabs) ಎರಡನೇ ಸ್ಥಾನಗಳಲ್ಲಿದೆ. ಎರಡೂ ಸರಣಿಗಳನ್ನು ರಾಜ್ ಮತ್ತು ಡಿಕೆ ರಚಿಸಿ, ನಿರ್ದೇಶಿಸಿದ್ದಾರೆ. ʼಗನ್ಸ್ & ಗುಲಾಬ್ಸ್‌ʼನಲ್ಲಿ ಮಾಲಿವುಡ್‌ ಸ್ಟಾರ್‌ ದುಲ್ಕಾರ್‌ ಸಲ್ಮಾನ್‌, ರಾಜ್‌ ಕುಮಾರ್‌ ರಾವ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮೂರನೇ ಸ್ಥಾನವನ್ನು ಆದಿತ್ಯ ರಾಯ್ ಕಪೂರ್ ಮತ್ತು ಅನಿಲ್ ಕಪೂರ್ ಅಭಿನಯದ ʼದಿ ನೈಟ್ ಮ್ಯಾನೇಜರ್ʼ (The Night Manager) ಪಡೆದುಕೊಂಡಿದೆ. ಇದು ಅದೇ ಹೆಸರಿನ ಬ್ರಿಟಿಷ್ ಸರಣಿಯ ರಿಮೇಕ್‌. ನಾಲ್ಕನೇ ಸ್ಥಾನವನ್ನು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ʼಕೊಹ್ರಾʼ (Kohrra) ಪಡೆದುಕೊಂಡಿದೆ. ಇದರ ಮುಖ್ಯ ಪಾತ್ರದಲ್ಲಿ ಸುವಿಂದರ್ ವಿಕ್ಕಿ ಮತ್ತು ಬರುನ್ ಸೋಬ್ತಿ ನಟಿಸಿದ್ದಾರೆ.

ಅರ್ಷದ್‌ ವಾರ್ಸಿ ಮತ್ತು ಬರುನ್ ಸೋಬ್ತಿ ನಟನೆಯ ʼಅಸುರ್ 2ʼ (Asur 2) ಐದನೇ ಸ್ಥಾನದಲ್ಲಿದೆ. ʼರಾಣಾ ನಾಯ್ಡುʼ (Rana Naidu) ಆರನೇ ಪ್ಲೇಸ್‌ನಲ್ಲಿದೆ. ರಾಣಾ ದಗ್ಗುಬಾಟಿ ಮತ್ತು ವೆಂಕಟೇಶ್ ಅಭಿನಯದ ಈ ಸೀರಿಸ್‌ನ ಎರಡನೇ ಸೀಸನ್ ಶೀಘ್ರ ಆರಂಭವಾಗಲಿದೆ. ಸೋನಾಕ್ಷಿ ಸಿನ್ಹಾ ಮತ್ತು ವಿಜಯ್ ವರ್ಮಾ ಅಭಿನಯದ ʼದಹಾದ್ʼ (Dahaad) ಏಳನೇ ಸ್ಥಾನ ಪಡೆದುಕೊಂಡಿದೆ. ಡಿಂಪಲ್ ಕಪಾಡಿಯಾ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ʼಸಾಸ್ ಬಹು ಔರ್ ಫ್ಲೆಮಿಂಗೊʼ (Saas Bahu Aur Flamingo) ಎಂಟನೆ ರ‍್ಯಾಂಕ್‌ ಪಡೆದುಕೊಂಡಿದೆ. 9ನೇ ಸ್ಥಾನವನ್ನು ಹನ್ಸಲ್ ಮೆಹ್ತಾ ಅವರ ʼಸ್ಕೂಪ್ʼ (Scoop-ಹರ್ಮನ್‌ ಬವೇಜಾ, ಕರಿಷ್ಮಾ ತನ್ನಾ ಮುಖ್ಯ ಪಾತ್ರ) ಪಡೆದುಕೊಂಡರೆ 10ನೇ ಪ್ಲೇಸ್‌ನಲ್ಲಿ ವಿಕ್ರಮಾದಿತ್ಯ ಮೋಟ್ವಾನೆ ಅವರ ʼಜುಬಿಲಿʼ (Jubilee) ಇದೆ. ಇದರಲ್ಲಿ ಪ್ರೊಸೆನ್ಜಿತ್ ಚಟರ್ಜಿ, ಅಪರ್ಶಕ್ತಿ ಖುರಾನಾ, ಸಿದ್ಧಾಂತ್ ಗುಪ್ತಾ, ಅದಿತಿ ರಾವ್ ಹೈದರಿ ಮತ್ತಿತರರು ಅಭಿನಯಿಸಿದ್ದಾರೆ.

ಇದನ್ನೂ ಓದಿ: Imdb 2023 Indian Cinema: IMDB ಬಿಡುಗಡೆ ಮಾಡಿದ 2023ರ ಅತ್ಯಂತ ಜನಪ್ರಿಯ ಚಿತ್ರಗಳು, ವೆಬ್‌ಸಿರೀಸ್‌ಗಳಿವು!

ಟಾಪ್‌ 10 ವೆಬ್‌ ಸೀರಿಸ್‌ ಪಟ್ಟಿ

  1. ಫರ್ಜಿ
  2. ಗನ್ಸ್ & ಗುಲಾಬ್ಸ್
  3. ದಿ ನೈಟ್ ಮ್ಯಾನೇಜರ್
  4. ಕೊಹ್ರಾ
  5. ಅಸುರ್ 2
  6. ರಾಣಾ ನಾಯ್ಡು
  7. ದಹಾದ್
  8. ಸಾಸ್ ಬಹು ಔರ್ ಫ್ಲೆಮಿಂಗೊ
  9. ಸ್ಕೂಪ್
  10. ಜುಬಿಲಿ

ಐಎಂಡಿಬಿನ ಟಾಪ್‌ ಸಿನಿಮಾಗಳ ಪೈಕಿ ʼಜವಾನ್ʼ, ʼಪಠಾಣ್ʼ, ʼರಾಕಿ ಔರ್ ರಾಣಿ ಕಿ ಪ್ರೇಮ್‌ ಕಹಾನಿʼ, ʼಲಿಯೊʼ, ʼಒಎಂಜಿ 2ʼ, ʼಜೈಲರ್ʼ, ʼಗದರ್ -2ʼ, ʼದಿ ಕೇರಳ ಸ್ಟೋರಿʼ, ʼತು ಝೂಠಿ ಮೈ ಮಕ್ಕಾರ್ʼ, ʼಭೋಲʼ ಮೊದಲ 10 ಸ್ಥಾನಗಳಲ್ಲಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version