Site icon Vistara News

Rajeeta Kochhar | ಕಹಾನಿ ಘರ್‌ ಘರ್‌ ಕಿ ಖ್ಯಾತಿಯ ನಟಿ ರಜೀತಾ ಕೊಚ್ಚರ್‌ ಇನ್ನಿಲ್ಲ

Actress Rajeeta Kochhar

ಮುಂಬೈ: ಕಿರುತೆರೆ ಹಾಗೂ ಬಾಲಿವುಡ್‌ ಸಿನಿಮಾಗಳಲ್ಲಿ ಮನೋಜ್ಞ ನಟನೆ ಮೂಲಕ ಛಾಪು ಮೂಡಿಸಿದ್ದ ಹಿರಿಯ ನಟಿ ರಜೀತಾ ಕೊಚ್ಚರ್‌ (70) (Rajeeta Kochhar) ನಿಧನರಾಗಿದ್ದಾರೆ. “ಮೂತ್ರಪಿಂಡ ವೈಫಲ್ಯದಿಂದಾಗಿ ಅವರು ಮುಂಬೈನಲ್ಲಿ ಮೃತಪಟ್ಟಿದ್ದಾರೆ” ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

“ಡಿಸೆಂಬರ್‌ 20ರಂದು ಉಸಿರಾಟದ ತೊಂದರೆ ಹಾಗೂ ಹೊಟ್ಟೆ ನೋವಿನ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿ, ಚಿಕಿತ್ಸೆಗೆ ಸ್ಪಂದಿಸದೆ ಡಿಸೆಂಬರ್‌ 23ರ ರಾತ್ರಿ 10.15ಕ್ಕೆ ಮೃತಪಟ್ಟರು. ಕಳೆದ ವರ್ಷ ಅವರು ಪಾರ್ಶ್ವವಾಯುಗೆ ಕೂಡ ತುತ್ತಾಗಿದ್ದರು” ಎಂದು ನಟಿಯ ಸಂಬಂಧಿ ನೂಪುರ್‌ ಕಂಪಾನಿ ತಿಳಿಸಿದ್ದಾರೆ.

ಮನೋಜ್ಞ ನಟನೆ
ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮನೋಜ್ಞವಾಗಿ ನಟಿಸುವ ಮೂಲಕ ರಜೀತಾ ಕೊಚ್ಚರ್‌ ಮನೆಮಾತಾಗಿದ್ದರು. ‘ತಂತ್ರ’, ‘ಕವಚ್’, ‘ಕಹಾನಿ ಘರ್‌ ಘರ್‌ ಕಿ’, ‘ಕಾಳಿ ಶಕ್ತಿಯೋಂ ಸೆ’ ಸೇರಿ ಹಲವು ಧಾರಾವಾಹಿಗಳಲ್ಲಿ ಅವರು ನಟಿಸಿದ್ದರು. ಹಾಗೆಯೇ, ‘ಪಿಯಾ ಕಾ ಘರ್’, ‘ಮಣಿಕರ್ಣಿಕಾ: ದಿ ಕ್ವೀನ್‌ ಆಫ್‌ ಝಾನ್ಸಿ’ ಸಿನಿಮಾಗಳಲ್ಲೂ ಪಾತ್ರ ನಿರ್ವಹಿಸಿದ್ದರು.

ಇದನ್ನೂ ಓದಿ | Tunisha Sharma | ಸೆಟ್‌ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ನಟಿ ತುನಿಶಾ ಶರ್ಮಾ

Exit mobile version