ಬೆಂಗಳೂರು: ಹತ್ತಾರು ವಾಹಿನಿಗಳಲ್ಲಿ ಪ್ರಸಾರವಾಗುವ ಸೂಪರ್- ಡೂಪರ್ ಧಾರಾವಾಹಿಗಳ (Kannada Serials) ಮಧ್ಯೆ ಪೈಪೋಟಿಗೆ ನಿಂತು ಪ್ರೇಕ್ಷಕರ ಮನಗೆದ್ದು ಯಶಸ್ವಿ 200 ಸಂಚಿಕೆಗಳನ್ನು ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಧಾರಾವಾಹಿ (Udho Udho Sri Renuka Yellamma) ಪೂರೈಸಿದೆ.
ಕನ್ನಡ ಕಿರುತೆರೆ ವೀಕ್ಷಕರಿಗೆ ಪುರಾಣ, ಆಧ್ಯಾತ್ಮ ಮತ್ತು ಮೌಲ್ಯಾಧಾರಿತ ಕತೆಗಳನ್ನು ಕನ್ನಡದ ಸ್ಟಾರ್ ಸುವರ್ಣ ವಾಹಿನಿ ನೀಡುತ್ತಾ ಬಂದಿದೆ. ಸದ್ಯ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ “ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ” ಧಾರಾವಾಹಿ 200 ಸಂಚಿಕೆಗಳ ಸಂಭ್ರಮದಲ್ಲಿದೆ. ಅಪ್ಪಟ ಕನ್ನಡ ಮಣ್ಣಿನ ಪೌರಾಣಿಕ ಕಥಾವಸ್ತುವನ್ನಿಟ್ಟುಕೊಂಡು ಶುರುವಾದ ಈ ಧಾರಾವಾಹಿ ಆರಂಭದಿಂದಲೂ ಕಿರುತೆರೆಯಲ್ಲಿ ಹೊಸ ಸಂಚಲನವನ್ನು ಮೂಡಿಸಿತ್ತು.
ಇದನ್ನೂ ಓದಿ: Bombat Bhojana: ʻಬೊಂಬಾಟ್ ಭೋಜನʼದಲ್ಲಿ ಕೃಷ್ಣ ಜನ್ಮಾಷ್ಟಮಿ ಹಬ್ಬದ ವಿಶೇಷ ಅತಿಥಿ ಪುಟಾಣಿ ಶಾಲ್ಮಲಿ!
ಅತೀ ಹೆಚ್ಚು ರೇಟಿಂಗ್ ಕಬಳಿಸಿರುವ ಧಾರಾವಾಹಿ
ಸ್ಟಾರ್ ಸುವರ್ಣ ವಾಹಿನಿಯ ಇತಿಹಾಸದಲ್ಲಿ ಆರಂಭದಿಂದಲೇ ಅತೀ ಹೆಚ್ಚು ರೇಟಿಂಗ್ ಪಡೆದು ಮುನ್ನುಗ್ಗುತ್ತಿರುವ ಹೆಗ್ಗಳಿಕೆಗೆ ‘ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ’ ಧಾರಾವಾಹಿ ಪಾತ್ರವಾಗಿದೆ. ಇನ್ನು ರೇಣುಕಾ ದೇವಿಯ ಪವಾಡಗಳನ್ನು ತಿಳಿಯುವ ಸಲುವಾಗಿ ಸಾವಿರಾರು ಜನರು ಪ್ರತಿದಿನ ಈ ಧಾರಾವಾಹಿಯನ್ನು ಮಿಸ್ ಮಾಡದೇ ನೋಡುತ್ತಿದ್ದಾರೆ.
ವಿಶಿಷ್ಟ ವಸ್ತ್ರ ವಿನ್ಯಾಸಕ್ಕೆ ಮನಸೋತ ಪ್ರೇಕ್ಷಕರು
ಈ ಧಾರಾವಾಹಿಯು ಹಲವು ರೀತಿಯಲ್ಲಿ ವಿಶೇಷವಾಗಿದ್ದು ಕನ್ನಡ ಕಿರುತೆರೆಯಲ್ಲಿ ಮೊದಲ ಬಾರಿಗೆ ಪೌರಾಣಿಕ ಧಾರಾವಾಹಿಯೊಂದು ಸಂಪೂರ್ಣವಾಗಿ ಕರ್ನಾಟಕದಲ್ಲಿ ಚಿತ್ರೀಕರಣಗೊಂಡಿರುವುದು. ಎಷ್ಟೋ ಜನರ ಪರಿಶ್ರಮದಿಂದ ಎಲ್ಲಾ ರೀತಿಯಲ್ಲಿ ಸಂಶೋಧನೆ ನಡೆಸಿ ವಿಶೇಷವಾದ ಸೆಟ್‌ಗಳನ್ನು ಬೆಂಗಳೂರಿನಲ್ಲಿ ಹಾಕಲಾಗಿದೆ. ಧಾರಾವಾಹಿಯು ಅದ್ಭುತವಾಗಿ ಕಾಣಿಸಲು ವಿಶಿಷ್ಟ ರೀತಿಯಲ್ಲಿ ವಸ್ತ್ರವಿನ್ಯಾಸ ಹಾಗೂ ವಸ್ತ್ರಾಭರಣ ಮಾಡಲಾಗಿದ್ದು ನೋಡುಗರಿಗೆ ಮನೋಲ್ಲಾಸ ನೀಡುತ್ತಿದೆ.
ಮಕ್ಕಳ ನಟನೆಗೆ ತಲೆಬಾಗಿದ ಅಭಿಮಾನಿ ದೇವರುಗಳು
ಉಧೋ ಉಧೋ ಶ್ರೀ ರೇಣುಕಾ ಯಲ್ಲಮ್ಮ ಧಾರಾವಾಹಿಯು ಸೋಮ-ಶನಿ ರಾತ್ರಿ 8.30ಕ್ಕೆ ಪ್ರಸಾರವಾಗುತ್ತದೆ. ರೇಣುಕಾ ಹಾಗು ಎಲ್ಲಮ್ಮ ಪಾತ್ರಕ್ಕೆ ಜೀವ ತುಂಬಿದ ಮಕ್ಕಳು ಅದ್ಭುತವಾಗಿ ನಟಿಸಿ ಜನಾಭಿಮಾನಿಗಳ ಮನಗೆದ್ದು ಮನೆಮಾತಾಗಿದ್ದಾರೆ. ಕನ್ನಡ ಮಣ್ಣಿನ ಕತೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಇದೀಗ ಧಾರಾವಾಹಿಯು 200 ಸಂಚಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಮುನ್ನುಗ್ಗುತ್ತಿದೆ.
ಇನ್ನಷ್ಟು ಕಿರುತರೆ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ