ಬೆಂಗಳೂರು : ‘ಸಸುರಾಲ್ ಸಿಮರ್ ಕಾʼ ಹಾಗೂ ‘ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೆʼ ಧಾರಾವಾಹಿ ಖ್ಯಾತಿಯ ನಟಿ ವೈಶಾಲಿ ಟಕ್ಕರ್ (Vaishali Takkar ) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಶವವು ಭಾನುವಾರ (ಅಕ್ಕೋಬರ್ 16) ಬೆಳಗ್ಗೆ ಅವರ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ನಟಿ ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ತೇಜಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಟಿ ಕಳೆದ ಒಂದು ವರ್ಷದಿಂದ ಇಂದೋರ್ನಲ್ಲಿ ವಾಸಿಸುತ್ತಿದ್ದರು. ʻಸಸುರಲ್ ಸಿಮರ್ ಕಾ ʼಧಾರಾವಾಹಿಯಲ್ಲಿ ಅಂಜಲಿ ಭಾರದ್ವಾಜ್ ಪಾತ್ರದಲ್ಲಿ ವೈಶಾಲಿ ಹೆಚ್ಚು ಹೆಸರುವಾಸಿಯಾಗಿದ್ದರು.
ವೈಶಾಲಿ ʻಯೇ ರಿಶ್ತಾ ಕ್ಯಾ ಕೆಹ್ಲಾತಾ ಹೇʼ ಎಂಬ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದ್ದರು. ಇದರಲ್ಲಿ 2015 ರಿಂದ 2016 ರವರೆಗೆ ಸಂಜನಾ ಪಾತ್ರವನ್ನು ನಿರ್ವಹಿಸಿದ್ದರು. 2016 ರಲ್ಲಿ ʻಯೆ ಹೇ ಆಶಿಕಿಯಲ್ಲಿʼ ಧಾರಾವಾಹಿಯಲ್ಲಿ ವೃಂದಾ ಪಾತ್ರದಲ್ಲಿ ನಟಿಸಿದ್ದರು. ಅವರು ಕೊನೆಯದಾಗಿ ಟಿವಿ ಶೋ ರಕ್ಷಾಬಂಧನ್ನಲ್ಲಿ ಕನಕ ಸಿಂಘಾಲ್ ಸಿಂಗ್ ಠಾಕೂರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ | ಮಲಯಾಳಂ ನಟ ಶರತ್ಚಂದ್ರ ಆತ್ಮಹತ್ಯೆ
ಕಳೆದ ವರ್ಷ ಏಪ್ರಿಲ್ನಲ್ಲಿ, ಕೀನ್ಯಾ ಮೂಲದ ದಂತ ಶಸ್ತ್ರಚಿಕಿತ್ಸಕ ಅಭಿನಂದನ್ ಸಿಂಗ್ ಅವರೊಂದಿಗಿನ ರೋಕಾ ಸಮಾರಂಭದಲ್ಲಿ ಕಾಣಿಸಿಕೊಂಡಿರುವುದರ ಬಗ್ಗೆ ಮಾಧ್ಯಮವೊಂದು ವರದಿ ಮಾಡಿತ್ತು. ಮ್ಯಾಟ್ರಿಮೋನಿಯಲ್ ಮೂಲಕ ತನ್ನ ಜೀವನ ಸಂಗಾತಿಯನ್ನು ಹುಡುಕುವ ಬಗ್ಗೆ ನಟಿ ಬಹಿರಂಗಪಡಿಸಿದ್ದರು. ಜೂನ್ನಲ್ಲಿ ಮದುವೆ ಆಗುತ್ತಾರೆ ಎಂದು ಹೇಳಲಾಗುತ್ತಿತ್ತು.
ಇದನ್ನೂ ಓದಿ | Pauline Jessica | ತಮಿಳು ಚಿತ್ರರಂಗದ ಪ್ರಸಿದ್ಧ ನಟಿ ಪಾಲಿನ್ ಜೆಸ್ಸಿಕಾ ಆತ್ಮಹತ್ಯೆ, ಕಾರಣ ಏನು?