ಮುಂಬೈ: ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಈ ಹಿಂದೆ ಹಿಂದಿ ತೆರೆ ಮೇಲೆ ಮಿಂಚಿದವರು. ರಾಮಾಯಣ ಸೇರಿ ಹಲವಾರು ಧಾರಾವಾಹಿಗಳಲ್ಲಿ ನಟಿಸಿದವರು. ಅವರ ತೆರೆ ಜೀವನ ಅಷ್ಟೊಂದು ಸುಲಭವಾಗಿಯೂ ಇರಲಿಲ್ಲ. ಆರೋಗ್ಯದಲ್ಲಿ ಏರು ಪೇರಾದಗಲೂ ಅವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲೇಬೇಕಾಗಿತ್ತಂತೆ. ಈ ವಿಚಾರವನ್ನು ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Viral News : ಪ್ರಿಯತಮನೊಂದಿಗೆ ಸೇರಿ ಇಬ್ಬರು ಮಕ್ಕಳನ್ನೇ ಕೊಂದ ತಾಯಿ!
ಸ್ಮೃತಿ ಇರಾನಿ ಅವರು ಏಕ್ತಾ ಕಪೂರ್ ನಿರ್ಮಾಣದ ʼಕ್ಯೂಕಿ ಸಾಸ್ ಭೀ ಕಭಿ ಬಹು ಥೀʼ ಹಾಗೂ ರವಿ ಚೋಪ್ರಾ ನಿರ್ಮಾಣದ ʼರಾಮಾಯಣʼ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸುತ್ತಿದ್ದರು. ಆ ವೇಳೆ ಅವರು ಗರ್ಭಿಣಿಯಾಗಿದ್ದರಂತೆ. ಆದರೆ ಆ ವಿಚಾರ ಸ್ವತಃ ನಟಿಗೇ ತಿಳಿದಿರಲಿಲ್ಲವಂತೆ. ಧಾರಾವಾಹಿ ಚಿತ್ರೀಕರಣದಲ್ಲಿದ್ದ ವೇಳೆ ಇದ್ದಕ್ಕಿದ್ದಂತೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆ ಅವರು ಆಸ್ಪತ್ರೆಗೆ ತೆರಳಲು ಆಟೋ ಹತ್ತಿದ್ದಾರೆ. ಆಗ ಅವರಲ್ಲಿ ವಿಪರೀತವಾಗಿ ರಕ್ತಸ್ರಾವ ಆಗಲಾರಂಭಿಸಿದೆ.
ಆಸ್ಪತ್ರೆಗೆ ಹೋದೊಡನೆ ನರ್ಸ್ ಒಬ್ಬರು ಸ್ಮೃತಿ ಅವರ ಬಳಿ ಓಡಿ ಬಂದು ಆಟೋಗ್ರಾಫ್ ತೆಗೆದುಕೊಂಡಿದ್ದಾರೆ. ಆಗ ನಟಿ “ನನಗೆ ಗರ್ಭಪಾತವಾದಂತಿದೆ. ದಯವಿಟ್ಟು ಬೇಗ ಅಡ್ಮಿಟ್ ಮಾಡಿಕೊಳ್ಳಿ” ಎಂದು ಹೇಳಿ ಮನವಿ ಮಾಡಿದ್ದರಂತೆ. ಈ ವಿಚಾರವನ್ನು ನಟಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: Viral Video: ಜಪಾನ್‌ನಲ್ಲಿ ಮಗನಿಗಾಗಿ ಆರ್‌ಆರ್‌ಆರ್ ಸಿನಿಮಾ ಕಥೆಯನ್ನೇ ಪುಸ್ತಕ ಮಾಡಿಕೊಟ್ಟ ತಾಯಿ
“ನಾನು ಗರ್ಭಪಾತವಾಗಿದೆ ಎಂದು ಹೇಳಿದರೆ ಧಾರಾವಾಹಿ ತಂಡ ನಂಬುವುದಕ್ಕೆ ಸಿದ್ಧವಿರಲೇ ಇಲ್ಲ. ಗರ್ಭಪಾತವಾದ ಮಾರನೇ ದಿನವೇ ನಾನು ಚಿತ್ರೀಕರಣದ ಸೆಟ್‌ಗೆ ಹೋಗಿ ಏಕ್ತಾ ಅವರಿಗೆ ದಾಖಲೆಗಳನ್ನು ತೋರಿಸಬೇಕಾಯಿತು. ಆದರೆ ರಾಮಾಯಣ ತಂಡದಲ್ಲಿ ಆ ಸಮಸ್ಯೆ ಆಗಲಿಲ್ಲ. ನಿರ್ಮಾಪಕ ರವಿ ಅವರಿಗೆ ಕರೆ ಮಾಡಿ ಹೇಳಿದಾಕ್ಷಣ ಅವರೇ ನಿನಗೆ ಬೇಕಾದಷ್ಟು ದಿನ ವಿಶ್ರಾಂತಿ ಪಡೆದುಕೊ ಎಂದು ಹೇಳಿದರು” ಎಂದು ನಟಿ ಹೇಳಿದ್ದಾರೆ.