ಶಾರ್ಜಾ : ಪಂದ್ಯದ ನಡುವೆ ಕೈ ಮಿಲಾಯಿಸಲು ಮುಂದಾಗ ಅಫಘಾನಿಸ್ತಾನ ಹಾಗೂ ಪಾಕಿಸ್ತಾನ ತಂಡದ ಆಟಗಾರರಿಗೆ ಐಸಿಸಿ ದಂಡದ ಶಿಕ್ಷೆಯನ್ನು ವಿಧಿಸಿದೆ. ಅಂತೆಯೆ ಮುಂದೆ ಈ ಮಾದರಿಯ ತಪ್ಪುಗಳನ್ನು ಮಾಡಿದರೆ ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸುವ ಎಚ್ಚರಿಕೆಯನ್ನೂ ನೀಡಿದೆ. ಪಾಕಿಸ್ತಾನ ತಂಡದ ಬ್ಯಾಟರ್ ಆಸಿಫ್ ಅಲಿ ಹಾಗೂ ಅಫಘಾನಿಸ್ತಾನ ತಂಡದ ವೇಗದ ಬೌಲರ್ ಫರೀದ್ ಅಹಮದ್ ದಂಡದ ಶಿಕ್ಷೆಗೆ ಒಳಪಟ್ಟವರು. ಇವರಿಬ್ಬರ ಪಂದ್ಯದ ಶುಲ್ಕದಲ್ಲಿ ಶೇಕಡಾ ೨೫ ಕಡಿತ ಮಾಡಲಾಗಿದೆ.
ಫರೀದ್ ಅವರು ಪಾಕಿಸ್ತಾನ ಬ್ಯಾಟರ್ ಆಸಿಫ್ ಅಲಿ ಅವರನ್ನು ನಿಂದಿಸಿದ್ದರೆ, ಪ್ರತಿಯಾಗಿ ಆಸಿಫ್ ಬ್ಯಾಟ್ ಬೀಸಿ ಹೊಡೆಯಲು ಮುಂದಾಗಿದ್ದರು. ಈ ಬಗ್ಗೆ ಎರಡೂ ತಂಡಗಳ ಮ್ಯಾಜೇನ್ಮೆಂಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಇದೀಗ ಐಸಿಸಿ ಕ್ರಮ ಕೈಗೊಂಡಿದೆ.
“ಆಸಿಫ್ ಅಲಿ ಐಸಿಸಿ ನಿಯಮದ ಆರ್ಟಿಕಲ್ ೨.೬ ಅನ್ನು ಉಲ್ಲಂಘನೆ ಮಾಡಿದ್ದಾರೆ. ಫರೀದ್ ಅಹಮದ್ ಆರ್ಟಿಕಲ್ ೨.೧.೧೨ ನಿಯಮವನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಅವರಿಗೆ ದಂಡ ವಿಧಿಸಲಾಗಿದೆ,” ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಇದೇ ವೇಳೆ ಇಬ್ಬರಿಗೂ ತಲಾ ಒಂದು ಡಿಮೆರಿಟ್ ಅಂಕಗಳನ್ನು ವಿಧಿಲಾಗಿದೆ.
ಇದನ್ನೂ ಓದಿ | Asia Cup | ಮೈದಾನದಲ್ಲಿ ಪಾಕ್- ಆಪ್ಘನ್ ಆಟಗಾರರ ಫೈಟ್, ಸ್ಟೇಡಿಯಮ್‌ನಲ್ಲಿ ಅಭಿಮಾನಿಗಳ ದಾಂಧಲೆ