Site icon Vistara News

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (International Cricket) ವಿದಾಯ ಹೇಳಿದ ಇಯಾನ್‌ ಮಾರ್ಗನ್

internation cricket

ಲಂಡನ್‌: ಏಕದಿನ ವಿಶ್ವ ಕಪ್‌ ವಿಜೇತ ಇಂಗ್ಲೆಂಡ್‌ ತಂಡದ ನಾಯಕರಾಗಿದ್ದ ಇಯಾನ್‌ ಮಾರ್ಗನ್‌ ಅಂತಾರಾಷ್ಟ್ರೀಯ (International Cricket) ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.

ಕಳೆದ ಹಲವು ದಿನಗಳಿಂದ ಬ್ಯಾಟಿಂಗ್‌ ವೈಫಲ್ಯ ಹಾಗೂ ಫಿಟ್ನೆಸ್‌ ಸಮಸ್ಯೆಯಿಂದ ಬಳಲುತ್ತಿದ್ದ ಮಾರ್ಗನ್‌ ಅವರು ನಿವೃತ್ತಿ ಹೊಂದಲಿದ್ದಾರೆ ಎಂದು ಬ್ರಿಟನ್‌ನ ಮಾಧ್ಯಮಗಳು ವರದಿ ಮಾಡಿದ್ದವು. ಅಂತೆಯ ಮಂಗಳವಾರ ಸಂಜೆಯ ವೇಳೆಗೆ ಅವರು ನಿವೃತ್ತಿ ಘೋಷಿಸಿದ್ದಾರೆ ಎಂದು ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್ ಸಂಸ್ಥೆಯು ಖಚಿತಪಡಿಸಿದೆ.

ಇಸಿಬಿ ಮಾಡಿದ ಟ್ವೀಟ್‌

“ಇಯಾನ್‌ ಮಾರ್ಗನ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ೩೫ ವರ್ಷದ ಅವರು ತಮ್ಮ ೧೩ ವರ್ಷಗಳ ಕ್ರಿಕೆಟ್‌ ವೃತ್ತಿಯಲ್ಲಿ ದೊಡ್ಡ ಸಾಧನೆಗಳನ್ನು ಮಾಡಿದ್ದಾರೆ. ೨೦೧೯ ಏಕದಿನ ವಿಶ್ವ ಕಪ್‌ ಗೆದ್ದ ತಂಡದ ನಾಯಕ ಹಾಗೂ ೨೦೧೦ ಐಸಿಸಿ ಟಿ೨೦ ವಿಶ್ವ ಕಪ್‌ ಗೆದ್ದಿರುವ ಇಂಗ್ಲೆಂಡ್‌ ತಂಡದಲ್ಲಿ ಅವರು ಸ್ಥಾನ ಪಡೆದಿದ್ದರು. ಏಳು ವರ್ಷಗಳ ನಾಯಕತ್ವದ ಅವಧಿಯಲ್ಲಿ ಅವರು ಪ್ರಮುಖ ಕ್ರಿಕೆಟ್‌ ತಂಡಗಳ ವಿರುದ್ಧ ಇಂಗ್ಲೆಂಡ್‌ ತಂಡವನ್ನು ಗೆಲ್ಲಿಸುವ ಜತೆಗೆ ಐಸಿಸಿ ರ‍್ಯಾಂಕ್ ಪಟ್ಟಿಯಲ್ಲಿ ಉತ್ತಮ ಸ್ಥಾನ ತಂದುಕೊಟ್ಟಿದ್ದಾರೆ,” ಎಂದು ಇಸಿಬಿ ಹೇಳಿಕೆ ಪ್ರಕಟಿಸಿದೆ.

೨೦೧೭ರಲ್ಲಿ ಅವರ ನಾಯಕತ್ವದ ಇಂಗ್ಲೆಂಡ್‌ ತಂಡ ಚಾಂಪಿಯನ್ಸ್‌ ಟ್ರೋಫಿಯ ಫೈನಲ್‌ಗೇರಿತ್ತು. ೩೫ ವರ್ಷದ ಮಾರ್ಗನ್‌ ೨೦೦೬ರಲ್ಲಿ ಐರ್ಲೆಂಡ್‌ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ೪ ವರ್ಷಗಳ ಬಳಿಕ ಅಂದರೆ ೨೦೦೯ರಲ್ಲಿ ಅವರು ಇಂಗ್ಲೆಂಡ್ ತಂಡಕ್ಕೆ ಸೇರ್ಪಡೆಗೊಂಡರು.

ರನ್‌ ಸಾಧನೆ

ಮಾರ್ಗನ್‌ ಒಟ್ಟಾರೆ ೨೪೮ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದು, ಅದರಲ್ಲಿ ೨೨೫ ಪಂದ್ಯಗಳನ್ನು ಇಂಗ್ಲೆಂಡ್‌ಗಾಗಿ ಆಡಿದ್ದಾರೆ. ೩೯. ೨೯ ಸರಾಸರಿಯಲ್ಲಿ ಒಟ್ಟಾರೆ ೭,೭೦೧ ರನ್‌ ಬಾರಿಸಿದ್ದು, ಅದರಲ್ಲಿ ೧೪ ಶತಕ ಹಾಗೂ ೪೭ ಅರ್ಧ ಶತಕಗಳ ಸೇರಿವೆ. ೧೧೫ ಟಿ೨೦ ಪಂದ್ಯಗಳಲ್ಲಿ 2,458 ರನ್‌ ಬಾರಿಸಿದ್ದಾರೆ

ಮಾರ್ಗನ್‌ ಟೆಸ್ಟ್‌ ಮಾದರಿಯಲ್ಲಿ ಹೆಚ್ಚು ಅವಕಾಶಗಳನ್ನು ಪಡೆದಿರಲಿಲ್ಲ. ಒಟ್ಟಾರೆ ೧೬ ಪಂದ್ಯಗಳನ್ನು ಆಡಿರುವ ಅವರು ೩೦.೪೩ ಸರಾಸರಿಯಂತೆ ೭೦೦ ರನ್‌ ಬಾರಿಸಿದ್ದಾರೆ. ಮಾರ್ಗನ್‌ ಅವರನ್ನು ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಇತ್ತೀಚಿನ ನೆದರ್ಲೆಂಡ್ಸ್‌ ವಿರುದ್ಧದ ಸರಣಿಯ ವೇಳೆ ತಂಡದಿಂದ ಕೈಬಿಡಲಾಗಿತ್ತು.

ಇದನ್ನೂ ಓದಿ: Mithali raj | ಆಟಗಾರ್ತಿಯಾಗಿ ಇನಿಂಗ್ಸ್‌ ಅಂತ್ಯಗೊಳಿಸಿದ ಮಿಥಾಲಿ ರಾಜ್‌, ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ

Exit mobile version