ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಟೆಸ್ಟ್ ಸರಣಿಯ ಮರು ನಿಗದಿತ ಐದನೇ ಪಂದ್ಯದಲ್ಲಿ ನಾಯಕ ಜಸ್‌ಪ್ರೀತ್ ಬುಮ್ರಾ ಬ್ಯಾಟಿಂಗ್ ಮೂಲಕ world record ಮಾಡಿದ್ದಾರೆ. ಅವರ ಸಾಧನೆಗೆ ವಿಂಡೀಸ್ ಬ್ಯಾಟಿಂಗ್ ದಿಗ್ಗಜ ಬ್ರಿಯಾನ್ ಲಾರಾ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಬುಮ್ರಾ ಅವರು ಇಂಗ್ಲೆಂಡ್ ಬೌಲರ್ ಸ್ಟುವರ್ಟ್ ಬ್ರಾಡ್ ಅವರ ಓವರ್‌ನಲ್ಲಿ ೩೫ ರನ್ ಬಾರಿಸಿದ್ದರು. ಇದು ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಓವರೊಂದರಲ್ಲಿ ದಾಖಲಾದ ಗರಿಷ್ಠ ರನ್. ಅದರಲ್ಲಿ ಬುಮ್ರಾ ಬಾರಿಸಿದ್ದು ೨೯ ರನ್‌ಗಳಾಗಿದ್ದರೆ ಇನ್ನೂ ೬ ಇತರ ರನ್ ರೂಪದಲ್ಲಿ ದೊರಕಿರುವುದು. ಆದಾಗ್ಯೂ ಬುಮ್ರಾ ಬಾರಿಸಿದ್ದ ೨೯ ರನ್ ಬ್ಯಾಟ್ಸ್‌ಮನ್ ಒಬ್ಬರು ಟೆಸ್ಟ್‌ನಲ್ಲಿ ದಾಖಲಿಸಿದ ಗರಿಷ್ಠ ರನ್. ಈ ಹಿಂದೆ ವೆಸ್ಟ್ ಇಂಡೀಸ್‌ನ ದಿಗ್ಗಜ ಬ್ರಿಯಾನ್ ಲಾರಾ ದಾಖಲೆ ಹೊಂದಿದ್ದರು. ಅವರು ಓವರೊಂದರಲ್ಲಿ ೨೮ ರನ್ ಬಾರಿಸಿದ್ದರು. ಹೀಗಾಗಿ ತಮ್ಮ ದಾಖಲೆ ಮುರಿದ ಭಾರತ ತಂಡದ ನಾಯಕನಿಗೆ ಲಾರಾ ಅಭಿನಂದನೆ ಸಲ್ಲಿಸಿದ್ದಾರೆ.
“ಟೆಸ್ಟ್ ಕ್ರಿಕೆಟ್‌ನಲ್ಲಿ ಓವರ್ ಒಂದರಲ್ಲಿ ಅತಿ ಹೆಚ್ಚು ರನ್ ಸಿಡಿಸಿ ನನ್ನ ದಾಖಲೆಯನ್ನು ಮುರಿದಿರುವ ಜಸ್‌ಪ್ರಿತ್ ಬುಮ್ರಾಗೆ ಶುಭಾಶಯಮ,ʼʼ ಎಂದು ಲಾರಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: England Tour : ಬುಮ್ರಾ ಹೆಸರಿಗಷ್ಟೇ ನಾಯಕನಾ?