ದುಬೈ : ರೋಹಿತ್ ಶರ್ಮ ನೇತೃತ್ವದ ಭಾರತ ತಂಡ ಏಷ್ಯಾ ಕಪ್ (Asia Cup) ಕ್ರಿಕೆಟ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಮಣಿಸುವುದು ಖಾತರಿ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಹೇಳಿದ್ದಾರೆ. ಇದೇ ವೇಳೆ ಅವರು ಈ ಬಾರಿಯೂ ಏಷ್ಯಾ ಕಪ್ ಭಾರತದ ಪಾಲಾಗಲಿದೆ ಎಂದು ನುಡಿದಿದ್ದಾರೆ.
ಏಷ್ಯಾ ಕಪ್ ಟಿ೨೦ ಆಗಸ್ಟ್‌೨೭ರಂದು ಆರಂಭವಾಗಲಿದ್ದು, ಭಾರತ ಹಾಗೂ ಪಾಕಿಸ್ತಾನ ನಡುವೆ ಆಗಸ್ಟ್ ೨೮ರಂದು ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಭಾರತ ಜಯಿಸಲಿದೆ ಎಂಬುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ. ಅದಕ್ಕವರು ಭಾರತ ತಂಡದ ಸಾಮರ್ಥ್ಯವನ್ನೇ ಉದಾಹರಿಸಿದ್ದಾರೆ.
“ಭಾರತ ತಂಡವನ್ನು ಸೋಲಿಸುವುದೆಂದರೆ ಉಳಿದ ತಂಡಗಳಿಗಿಂತ ಕಷ್ಟದ ಕೆಲಸ. ಅದು ಏಷ್ಯಾ ಕಪ್ ಸೇರಿದಂತೆ ಎಲ್ಲ ಟೂರ್ನಿಗಳಿಗೆ ಅನ್ವಯ. ಅಂತೆಯೇ ಟಿ೨೦ ವಿಶ್ವ ಕಪ್ ಹತ್ತಿರದಲ್ಲಿದ್ದು, ಭಾರತದ ತಂಡ ಅತ್ಯಂತ ಬಲಿಷ್ಠವಾಗಿದೆ. ಅವರ ತಂಡದ ಸಾಮರ್ಥ್ಯ ಉಳಿದೆಲ್ಲ ತಂಡಗಳಿಗಿಂತ ಹೆಚ್ಚಿದೆ. ಹೀಗಾಗಿ ಏಷ್ಯಾ ಕಪ್ ಅನ್ನು ಭಾರತವೇ ಗೆಲ್ಲಲಿದೆ,” ಎಂದು ಹೇಳಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಒಟ್ಟಾರೆ ಮುಖಾಮುಖಿಯಲ್ಲಿ ಪಾಕ್ ತಂಡವೇ ಮುನ್ನಡೆಯಲ್ಲಿದೆ. ಆದರೆ, ಏಷ್ಯಾ ಕಪ್ ವಿಚಾರಕ್ಕೆ ಬಂದಾಗ ಒಟ್ಟು ೧೩ ಪಂದ್ಯಗಳಲ್ಲಿ ಭಾರತ ೭ ವಿಜಯ ಕಂಡಿದೆ.
ಭಾರತ ಮತ್ತು ಪಾಕ್ ನಡುವಿನ ಹಣಾಹಣಿಯಲ್ಲಿ ಈ ಬಾರಿ ಭಾರತವೇ ಗೆಲ್ಲುತ್ತದೆ ಎಂಬುದನ್ನು ನಾನು ಒತ್ತಿ ಹೇಳುತ್ತೇವೆ. ಎರಡೂ ಉತ್ತಮ ಕ್ರಿಕೆಟ್ ತಂಡಗಳು. ಆದರೂ ಈ ಬಾರಿಯ ತಂಡದ ಬಲಾಬಲ ಗಮಿಸಿದರೆ ಭಾರತ ಗೆಲ್ಲುವುದು ಖಾತರಿ ಎಂದು ಪಾಂಟಿಂಗ್ ಹೇಳಿದ್ದಾರೆ.
ಇದನ್ನೂ ಓದಿ | Asia Cup Cricket | ಏಷ್ಯಾ ಕಪ್‌ಗೆ ಆಯ್ಕೆಯಾದ ಆಟಗಾರರಿಗೆ ಶುರುವಾಗಿದೆ ಟೆನ್ಷನ್