Site icon Vistara News

ಸಚಿನ್‌ sixer ದಾಖಲೆ ಮೀರಿದ ರಿಷಭ್‌ ಪಂತ್‌

sixer

ಬರ್ಮಿಂಗ್‌ಹ್ಯಾಮ್‌: ಭಾರತ ತಂಡದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿರುವ ನಡುವೆ 100 ಅಂತಾರಾಷ್ಟ್ರೀಯ SIXER ಬಾರಿಸಿದ್ದು, ಸಚಿನ್‌ ತೆಂಡೂಲ್ಕರ್‌ ಅವರ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಮೀರಿದ್ದಾರೆ.

ಪಂತ್‌ ಅವರ ಗುರುವಾರದ ಇನಿಂಗ್ಸ್‌ನಲ್ಲಿ ೪ ಸಿಕ್ಸರ್‌ಗಳು ಮೂಡಿ ಬಂದಿದ್ದವು. ಈ ವೇಳೆ ಅವರು ವೈಯಕ್ತಿಕ ೧೦೦ ಸಿಕ್ಸರ್‌ಗಳನ್ನು ಬಾರಿಸುವುದರೊಂದಿಗೆ ಭಾರತ ಪರ ೧೦೦ ಸಿಕ್ಸರ್‌ಗಳನ್ನು ಬಾರಿಸಿದ ಕಿರಿಯ ಬ್ಯಾಟರ್‌ ಎನಿಸಿಕೊಂಡರು. ಈ ದಾಖಲೆ ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಅವರ ಹೆಸರಿನಲ್ಲಿತ್ತು.

೧೦೦ ಸಿಕ್ಸರ್‌ ಬಾರಿಸುವಾಗ ರಿಷಭ್‌ ವಯಸ್ಸು ೨೪ ವರ್ಷ ೨೭೧ ದಿನಗಳು. ಸಚಿನ್‌ ಅವರು ೧೦೦ ಸಿಕ್ಸರ್‌ ಬಾರಿಸುವಾಗ ಅವರ ವಯಸ್ಸು ಸರಿಯಾಗಿ ೨೫ ವರ್ಷ. ಸುರೇಶ್‌ ರೈನಾ ೨೫ ವರ್ಷ ೭೭ ದಿನಗಳಿಗೆ ಈ ಸಾಧನೆ ಮಾಡಿದ್ದು, ಪಟ್ಟಿಯ ಮೂರನೇ ಸ್ಥಾನಿ.

ವೇಗದ ಸಿಕ್ಸರ್‌ ಸಾಧನೆಯಲ್ಲೂ ಎರಡನೇ ಸ್ಥಾನ

ರಿಷಭ್‌ ಪಂತ್‌ ಇದೇ ವೇಳೆ ಭಾರತ ತಂಡದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿವೇಗದಲ್ಲಿ ೧೦೦ ಸಿಕ್ಸರ್‌ ಬಾರಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ೧೦೧ ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಹಾರ್ದಿಕ್‌ ಪಾಂಡ್‌ ಮೊದಲ ಸ್ಥಾನದಲ್ಲಿದ್ದಾರೆ. ರಿಷಭ್‌ ೧೧೬ ಇನಿಂಗ್ಸ್‌ಗಳಲ್ಲಿ ೧೦೦ ಸಿಕ್ಸರ್‌ ಬಾರಿಸಿದ್ದಾರೆ.

ಇದನ್ನೂ ಓದಿ : England Tour: ಧೋನಿ ದಾಖಲೆ ಮುರಿದ ರಿಷಭ್‌ ಪಂತ್‌

Exit mobile version