Site icon Vistara News

TCS World 10K : ಬೆಂಗಳೂರು ಮ್ಯಾರಾಥಾನ್​ನಲ್ಲಿ ವಿಶ್ವದ ಅತಿ ವೇಗದ ಓಟಗಾರ್ತಿ ಅನ್ಯಂಗೊ ಭಾಗಿ

Anyango Achol

ಬೆಂಗಳೂರು: ವಿಶ್ವದ ಎರಡನೇ ಅತಿ ವೇಗದ 10ಕೆ ಓಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಕೀನ್ಯಾದ ಎಮಾಕ್ಯುಲೆಟ್​ ಅನ್ಯಂಗೊ ಅಚೋಲ್ ಅವರು 2024ರ ಏಪ್ರಿಲ್ 28ರಂದು ನಡೆಯಲಿರುವ ಟಿಸಿಎಸ್ ವರ್ಲ್ಡ್ 10ಕೆ (TCS World 10K) ಬೆಂಗಳೂರು ಮ್ಯಾರಾಥಾನ್​ನ 16ನೇ ಆವೃತ್ತಿಯಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರು ರೇಸ್​ ವಿಶ್ವ ಅಥ್ಲೆಟಿಕ್ಸ್ ಗೋಲ್ಡ್ ಲೇಬಲ್ ರೋಡ್ ರೇಸ್ ಆಗಿದ್ದು, ಒಟ್ಟಾರೆಯಾಗಿ 1,75,58,373.00 ರೂಪಾಯಿ ಬಹುಮಾನ ಮೊತ್ತ ಹೊಂದಿದೆ.

ವೆಲೆನ್ಸಿಯಾದಲ್ಲಿ ನಡೆದ ರೇಸ್​ನಲ್ಲಿ ಕೀನ್ಯಾದವರಾಗಿರುವ ಅನ್ಯಾಂಗೊ 28:57 ಸೆಕೆಂಡುಗಳಲ್ಲಿ 10ಕೆ ಓಟದಲ್ಲಿ ಗುರಿಮುಟ್ಟಿ ವಿಶ್ವ ದಾಖಲೆ ನಿರ್ಮಿಸಿದ್ದ ಆಗ್ನೆಸ್ ಎನ್ಗೆಟಿಚ್ ಅವರನ್ನು ಹಿಂದಿಕ್ಕಿದ್ದರು. 3000 ಮೀಟರ್ ಓಟದಲ್ಲಿ 2019 ರ ಆಫ್ರಿಕನ್ ಜೂನಿಯರ್ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಅನ್ಯಾಂಗೊ ಈ ವರ್ಷದ ವಿಶ್ವ ಕ್ರಾಸ್-ಕಂಟ್ರಿ ಚಾಂಪಿಯನ್​​ಷಿಪ್​ನಲ್ಲಿ ಪೋಡಿಯಂ ಫಿನಿಶ್ ಆಗುವುದನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದ್ದರು.

ಅತ್ಯುತ್ತಮ 10 ಸಾವಿರ ರೇಸ್ ಗಳಲ್ಲಿ ಒಂದಾಗಿ ವಿಶ್ವಾದ್ಯಂತ ಖ್ಯಾತಿಯನ್ನು ಗಳಿಸಿರುವ ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರು ಮ್ಯಾರಾಥಾನ್​ನಲ್ಲಿ ಪಾಲ್ಗೊಳ್ಳಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಭಾರತದಲ್ಲಿ ಆಯೋಜಿಸಲಾದ ಕಾರ್ಯಕ್ರಮಗಳ ಬಗ್ಗೆ ಮತ್ತು ಸುಮಾರು ಎರಡು ದಶಕಗಳ ಹಿಂದೆ ಅವು ಪ್ರಾರಂಭಿಸಿದ ರೇಸ್​​ ಕ್ರಾಂತಿಯ ಬಗ್ಗೆ ನಾನು ತುಂಬಾ ಕೇಳಿದ್ದೇನೆ. ಇಂಥ ರೇಸ್​ನಲ್ಲಿ ಪಾಲ್ಗೊಳ್ಳಲು ಕಾಯುತ್ತಿದ್ದೇನೆ. ಮಹಿಳಾ ವಿಭಾಗದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಲಿದೆ ಎಂದು ಅನ್ಯಾಂಗೊ ಹೇಳಿದ್ದಾರೆ.

ಈ ಕೂಟದ ದಾಖಲೆಗಿಂತ (30:35 ನಿಮಿಷ) ಕಡಿಮೆ ಅವಧಿಯಲ್ಲಿ 10ಕೆ ಸಾಧನೆ ಮಾಡಿರುವ ಲಿಲಿಯನ್ ರೆಂಗೆರುಕ್ ಕಸಾಯಿತ್ (29:32ನಿಮಿಷ ), ಫೇತ್ ಚೆಪ್ಕೊಯೆಚ್ (29:50 ನಿಮಿಷ ), ಲೊಯಿಸ್ ಚೆಮ್ನುಂಗ್ (29:57 ನಿಮಿಷ ), ಸಿಂಟಿಯಾ ಚೆಪ್ಗೆನೊ (30:08 ನಿಮಿಷ ) ಮತ್ತು ಗ್ರೇಸ್ ನವೊವುನಾ (30:27 ನಿಮಿಷ ) ಅವರು ಈ ಬಾರಿ ಸ್ಪರ್ಧೆಯಲ್ಲಿರುತ್ತಾರೆ. ಅವರ ಜತೆ ಅನ್ಯಾಂಗೊ ಕೂಡ ಮಹಿಳೆಯರ ಸ್ಪರ್ಧೆಯಲ್ಲಿ ಪದಕಕ್ಕಾಗಿ ಓಡಲಿದ್ದಾರೆ.

ವೆಲೆನ್ಸಿಯಾದಲ್ಲಿ ನಡೆದ ಓಟದಲ್ಲಿ ರೆಂಗೆರುಕ್ ಮತ್ತು ಚೆಪ್ಗೆನೊ ಭಾಗವಹಿಸಿದರೆ, ಚೆಪ್ಕೊಯೆಚ್ ಮತ್ತು ಚೆಮ್ನುಂಗ್ ಕ್ಯಾಸ್ಟೆಲ್ಲನ್ ಮತ್ತು ಪ್ಯಾರಿಸ್​ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಈ ವರ್ಷದ ಟಾಟಾ ಮುಂಬೈ ಮ್ಯಾರಥಾನ್ ವಿಜೇತರಾದ ಅಬೆರಾಶ್ ಮಿನ್ಸೆವೊ ಮತ್ತು 2022 ರ ವಿಶ್ವ ಒಳಾಂಗಣ 3000 ಮೀಟರ್ ಚಾಂಪಿಯನ್ ಲೆಮ್ಲೆಮ್ ಹೈಲು ಮಹಿಳೆಯ ಸ್ಪರ್ಧಿಗಳ ಪಟ್ಟಿಯಲ್ಲಿರುವ ಇನ್ನಿತರರು.

ಕೀನ್ಯಾದ ಪೀಟರ್ ಮ್ವಾನಿಕಿ ಮತ್ತು ಬ್ರೇವಿನ್ ಕಿಪ್ಕೊಗಿ ಎಲೈಟ್ ಪುರುಷರ ಸಾಲಿನಲ್ಲಿ ಅಗ್ರಸ್ಥಾನದಲ್ಲಿ

ಎಲೈಟ್ ಪುರುಷರ ಸಾಲಿನಲ್ಲಿ ಕೀನ್ಯಾದ ಪೀಟರ್ ಮ್ವಾನಿಕಿ ಐಲಾ (29) ಪಾಲ್ಗೊಳ್ಳಲಿದ್ದಾರೆ. ಅವರು 26:59 ನಿಮಿಷಗಳಲ್ಲಿ ಗುರಿ ಮುಟ್ಟಿದ ದಾಖಲೆ ಹೊಂದಿದ್ದಾರೆ. ವರ್ಷಾರಂಭದಲ್ಲಿ ವೆಲೆನ್ಸಿಯಾದಲ್ಲಿ ಮೂರನೇ ಸ್ಥಾನ ಪಡೆದು ಈ ಮೈಲಿಗಲ್ಲನ್ನು ಸಾಧಿಸಿದ್ದರು. ಆ ಪೀಟರ್ 10 ಕೆ ದೂರವನ್ನು 27 ನಿಮಿಷಗಳಲ್ಲಿ ಓಡಿದ ವಿಶ್ವದ ಹತ್ತೊಂಬತ್ತನೇ ಓಟಗಾರ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ.

10,000 ಮೀಟರ್ ಓಟದಲ್ಲಿ 2019ರ ಆಫ್ರಿಕನ್ ಜೂನಿಯರ್ ಚಾಂಪಿಯನ್ ಬ್ರೇವಿನ್ ಕಿಪ್ಚೊಗಿ ಕಳೆದ ವರ್ಷ ಮ್ಯಾಡ್ರಿಡ್​​ನಲ್ಲಿ 27:02 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು. ಈ ಫೆಬ್ರವರಿಯಲ್ಲಿ ಸ್ಪೇನ್​​ನ ಕ್ಯಾಸ್ಟೆಲ್ಲನ್​ನಲ್ಲಿ 27:16 ಸೆಕೆಂಡುಗಳಲ್ಲಿ ಗುರಿ ತಲುಪಿದ ಬ್ರಾವಿನ್ ಕಿಪ್ರೊಪ್ ಈ ರೇಸ್ ಅನ್ನು ಆಸಕ್ತಿದಾಯಕವಾಗಿರಿಸಲಿದ್ದಾರೆ.

ಇದನ್ನೂ ಓದಿ: IPL 2024 : ಮುಂದಿನ ಆವೃತ್ತಿಯಿಂದ ರೋಹಿತ್ ಶರ್ಮಾ ಚೆನ್ನೈ ತಂಡ ನಾಯಕ; ಮಾಜಿ ನಾಯಕನ ಭವಿಷ್ಯ

ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದ ಹಿಲರಿ ಚೆಪ್ಕ್ವಾನಿ ಮತ್ತು ಹಿಂದಿನ ವರ್ಷ ಕ್ಯಾಸ್ಟೆಲ್​​​ನಲ್ಲಿ ರನ್ನರ್ ಅಪ್ ಆಗಿದ್ದ ಪ್ಯಾಟ್ರಿಕ್ ಮೊಸಿನ್ ಅವರು ಪಾಲ್ಗೊಂಡಿದ್ದಾರೆ. ತಾಂಜೇನಿಯಾದ ಜಾನ್ ವೆಲೆ ಮತ್ತು ಇಥಿಯೋಪಿಯಾದ ಬೊಕಿ ಡಿರಿಬಾ ಕೂಡ ಪ್ರಮುಖ ಓಟಗಾರರಿಗೆ ಸ್ಪರ್ಧೆ ಒಡ್ಡಲಿದ್ದಾರೆ.

ನಿಕಟ ಸ್ಪರ್ಧೆ ಸಾಧ್ಯತೆ

2024 ರ ಆವೃತ್ತಿಯು ವೇಗದಿಂದ ತುಂಬಿರಲಿದೆ. ಏಕೆಂದರೆ ರೇಸ್​​ಗೆ ಪ್ರವೇಶಿಸಿದ ಐದು ಪುರುಷರು ಮತ್ತು ಆರು ಮಹಿಳೆಯರು 10 ಕೆ ರೋಡ್ ರನ್ನಿಂಗ್ನಲ್ಲಿ ವೈಯಕ್ತಿಕ ಅತ್ಯುತ್ತಮ ಸಮಯವನ್ನು ದಾಖಲಿಸಿದ್ದಾರೆ. ಇದು ಟಿಸಿಎಸ್ ವರ್ಲ್ಡ್ 10 ಕೆ ಬೆಂಗಳೂರಿನ ಕೋರ್ಸ್ ದಾಖಲೆ ಸಮಯಕ್ಕಿಂತ ವೇಗವಾಗಿದೆ. ಕೀನ್ಯಾದ ನಿಕೋಲಸ್ ಕಿಮೆಲಿ (27:38) ಮತ್ತು ಐರಿನ್ ಚೆಪ್ಟೆ (30:35) 2022 ರಿಂದ ಬೆಂಗಳೂರಿನಲ್ಲಿ ಕೋರ್ಸ್ ದಾಖಲೆ ಹೊಂದಿದ್ದಾರೆ.

Exit mobile version