ಬ್ರಿಸ್ಬೇನ್ : ಟಿ೨೦ ವಿಶ್ವ ಕಪ್‌ನ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಟೀಮ್ ಇಂಡಿಯಾದ ಆಟಗಾರರು ಬ್ರಿಸ್ಬೇನ್ ತಲುಪಿದ್ದಾರೆ. ಸೋಮವಾರ (ಅಕ್ಟೋಬರ್ ೧೭) ಆಸ್ಟ್ರೇಲಿಯಾ ವಿರುದ್ಧ ಮೊದಲ ಅಭ್ಯಾಸ ಪಂದ್ಯದಲ್ಲಿ ಆಡಲಿದ್ದು, ಅಕ್ಟೋಬರ್ ೧೯ರಂದು ನ್ಯೂಜಿಲೆಂಡ್ ವಿರುದ್ಧ ಸೆಣಸಾಡಬೇಕಾಗಿದೆ. ಹೀಗಾಗಿ ಬ್ರಿಸ್ಬೇನ್ ತಲುಪಿರುವ ಆಟಗಾರರು ನೆಟ್ ಪ್ರಾಕ್ಟೀಸ್ ಶುರು ಮಾಡಿಕೊಂಡಿದ್ದಾರೆ. ಅದರ ವಿಡಿಯೊ ಎಲ್ಲೆಡೆ ಓಡಾಡುತ್ತಿರುವೆ. ಏತನ್ಮಧ್ಯೆ, ನಾಯಕ ರೋಹಿತ್ ಶರ್ಮ ೧೧ ವರ್ಷದ ಬಾಲಕನೊಬ್ಬನ ಬೌಲಿಂಗ್‌ಗೆ ಅಭ್ಯಾಸ ನಡೆಸುವ ಚಿತ್ರಗಳು ವೈರಲ್ ಆಗಿದೆ.
ಟೀಮ್ ಇಂಡಿಯಾ ಅಭ್ಯಾಸ ನಡೆಸುತ್ತಿದ್ದ ವೇಳೆ ಬಾಲಕನೊಬ್ಬ ದೂರದಲ್ಲಿ ಚೆನ್ನಾಗಿ ಬೌಲಿಂಗ್ ಮಾಡುತ್ತಿರುವುದು ನಾಯಕ ರೋಹಿತ್ ಶರ್ಮ ಅವರ ಕಣ್ಣಿಗೆ ಬಿದ್ದಿದೆ. ತಕ್ಷಣ ಅವರು ಬಾಲಕನನ್ನು ಕರೆಸಿ ಮಾತನಾಡಿದ್ದು, ಆತ ಬೌಲಿಂಗ್ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾನೆ. ಅದಕ್ಕೊಪ್ಪಿದ ರೋಹಿತ್ ಆತನಿಂದ ಬೌಲಿಂಗ್ ಮಾಡಿಸಿಕೊಂಡು ಆಡಿದ್ದಾರೆ. ಬಳಿಕ ಆತನಿಗೆ ಅಟೋಗ್ರಾಫ್ ಕೊಟ್ಟು ಕಳಹಿಸಿದ್ದಾರೆ.
ಬಾಲಕನ ದ್ರುಶಿಲ್ ಚೌಹಾಣ್ ಎಂಬುದಾಗಿ ಗೊತ್ತಾಗಿದ್ದು, ಬಿಸಿಸಿಐ ತನ್ನ ವೆಬ್‌ಸೈಟ್‌ನಲ್ಲಿ ರೋಹಿತ್ ಶರ್ಮ ಆಟೋಗ್ರಾಫ್ ಕೊಡುತ್ತಿರುವ ಚಿತ್ರವನ್ನ ಪ್ರಕಟಿಸಿದೆ. ಜೊಹಾನ್ಸ್ ಎಂಬುವರು ಟ್ವೀಟ್ ಮಾಡಿ, ಎಡಗೈ ಬೌಲರ್ ಆಗಿರುವ ದ್ರುಶಿಲ್ ಎಸೆತಕ್ಕೆ ಆಡುವ ಮೂಲಕ ರೋಹಿತ್ ಶರ್ಮ ಪ್ರೇರಣೆಯಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಬಾಲಕ ದ್ರುಶಿಲ್ ಚೌಹಾಣ್ ಕೂಡ ರೋಹಿತ್ ಅವರಿಗೆ ಬೌಲಿಂಗ್ ಮಾಡಿರುವ ಖುಷಿಯನ್ನು ಹಂಚಿಕೊಂಡಿದ್ದಾರೆ. “ರೋಹಿತ್ ಶರ್ಮ ನನ್ನನ್ನು ನೋಡಿ ಬೌಲಿಂಗ್ ಮಾಡಲು ಕರೆದರು. ನನಗೆ ಅಚ್ಚರಿಯಾಯಿತು. ಅದಕ್ಕಿಂತ ಒಂದು ದಿನ ಹಿಂದೆ ರೋಹಿತ್ ಶರ್ಮ ಅವರಿಗೆ ನಾನು ಬೌಲಿಂಗ್ ಮಾಡಬಲ್ಲೆ ಎಂದು ನನ್ನ ತಂದೆ ಹೇಳಿದ್ದರು. ಹೀಗಾಗಿ ಅವರು ಕರೆದ ತಕ್ಷಣ ನನಗೆ ಖುಷಿ ಎನಿಸಿತು,” ಎಂದು ಹೇಳಿದ್ದಾನೆ.
ಇದನ್ನೂ ಓದಿ | Team India | ಬಾಬರ್ ಬಳಿ ಹೊಸ ಕಾರು ತಂಗೊಡಿದ್ಯಾ ಎಂದು ಕೇಳಿದ್ದೆ; ರೋಹಿತ್ ಶರ್ಮ