Site icon Vistara News

Asian Games 2023: 13 ಅಥ್ಲೀಟ್​ಗಳಿಗೆ ತಲಾ 10 ಲಕ್ಷ ಸಹಾಯಧನ ಘೋಷಿಸಿದ ಒಡಿಶಾ ಸರ್ಕಾರ

13 Odisha athletes bound for Asian Games to get Rs 10 lakh each from state government

ಭುವನೇಶ್ವರ್: ಕ್ರೀಡೆ ಮತ್ತು ಕ್ರೀಡಾಪಟುಗಳನ್ನು ಉತ್ತೇಜಿಸುವುದರಲ್ಲಿ ಸದಾ ಮುಂಚೂಣಿಯಲ್ಲಿರುವ ಒಡಿಶಾ ಸರ್ಕಾರ(Odisha state government) ಮಹತ್ವದ ಘೋಷಣೆಯೊಂದನ್ನು ಮಾಡಿದೆ. ಇದೇ ತಿಂಗಳು 23ರಿಂದ ಅಕ್ಟೋಬರ್​ 8ರ ವರೆಗೆ ಚೀನಾದ ಹ್ಯಾಂಗ್ಝೂನಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ನಲ್ಲಿ(Asian Games 2023) ಪಾಲ್ಗೊಳ್ಳಲಿರುವ ತಮ್ಮ ರಾಜ್ಯದ 13 ಅಥ್ಲೀಟ್‌ಗಳಿಗೆ ತಲಾ 10 ಲಕ್ಷ ರು. ಸಹಾಯಧನ ನೀಡುವುದಾಗಿ ಘೋಷಿಸಿದೆ.

“ತಮ್ಮ ರಾಜ್ಯದಿಂದ ಏಷ್ಯನ್​ ಗೇಮ್ಸ್​ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ 13 ಅಥ್ಲೀಟ್‌ಗಳಿಗೆ ತರಬೇತಿ, ಕ್ರೀಡಾಕೂಟದ ಇತರ ವೆಚ್ಚ ಭರಿಸುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಈ ಹಣಕಾಸಿನ ಸಹಾಯ ಮಾಡಲಾಗಿದೆ. ಎಲ್ಲ ಕ್ರೀಡಾಪಟುಗಳು ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ದೇಶದ ಮತ್ತು ಈ ರಾಜ್ಯದ ಪ್ರತಿಷ್ಠೆಯನ್ನು ಎತ್ತಿಹಿಡಿಯುವಂತಾಗಲಿ” ಎಂದು ಒಡಿಶಾ ಸರ್ಕಾರ ಪ್ರಕಟನೆಯಲ್ಲಿ ತಿಳಿಸಿದೆ.

ಕ್ರೀಡಾ ಪ್ರಗತಿಗೆ ಒಡಿಶಾ ಸರ್ಕಾರ ಅಪಾರ ಕೊಡುಗೆ

ಇಂದು ಭಾರತದಲ್ಲಿ ಹಾಕಿ ಮತ್ತು ಫುಟ್ಬಾಲ್​ ಪುನರುತ್ಥಾನ ಕಾಣುತ್ತಿದೆ ಎಂದರೆ ಅದಕ್ಕೆ ಒಡಿಶಾ ಸರ್ಕಾರ ಕಾರಣ ಅನೇಕ ಯೋಜನೆಗಳ ಮೂಲಕ ಅದರಲ್ಲೂ ಹಾಕಿ ಕ್ರೀಡೆಯ ಅಭಿವೃತ್ತಿಗಾಗಿ ನೂರು ಕೋಟಿ. ರೂ. ಯೋಚನೆಯೊಂದನ್ನು ಜಾರಿಗೆ ತರುವ ಮೂಲಕ ಈ ಕ್ರೀಡೆಯನ್ನು ಅಭಿವೃದ್ಧಿ ಪಡಿಸಿದ್ದರು. ಇದರ ಪ್ರತಿಫಲವಾಗಿ ಭಾರತದ ಪುರುಷರ ಹಾಕಿ ತಂಡ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿತ್ತು.

ಇದನ್ನೂ ಓದಿ Asian Games 2023: ಭಾರತ ಕ್ರಿಕೆಟ್​ ತಂಡಕ್ಕೆ ವಿವಿಎಸ್‌ ಲಕ್ಷ್ಮಣ್​ ಕೋಚ್‌

ದಾಖಲೆಯ ಕ್ರೀಡಾಪಟುಗಳು

ಭಾರತ ಒಟ್ಟು 38 ವಿಭಾಗಗಳಲ್ಲಿ ಸ್ಪರ್ಧೆಗೆ ಇಳಿಯಲಿದೆ. ಈ 634 ಕ್ರೀಡಾಪಟುಗಳ(634 athletes) ಯಾದಿಯಲ್ಲಿ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ನ ಗರಿಷ್ಠ 65 ಆ್ಯತ್ಲೀಟ್‌ಗಳಿದ್ದಾರೆ. ಇವರಲ್ಲಿ 34 ಪುರುಷರು ಹಾಗೂ 31 ವನಿತೆಯರು. ಅನಂತರದ ಸ್ಥಾನ ಫುಟ್​ಬಾಲ್​ ಮತ್ತು ಹಾಕಿ ತಂಡಗಳಿಗೆ ಸಲ್ಲುತ್ತದೆ. ಎರಡೂ ಫುಟ್​ಬಾಲ್​ ತಂಡಗಳು ಸ್ಪರ್ಧಿಸಲಿದ್ದು, ಇಲ್ಲಿನ ಆಟಗಾರರ ಸಂಖ್ಯೆ 44. ಹಾಕಿಪಟುಗಳ ಒಟ್ಟು ಸಂಖ್ಯೆ 36. ಪುರುಷರ ಹಾಗೂ ವನಿತೆಯರ ಕ್ರಿಕೆಟ್‌ ತಂಡಗಳೂ ಪದಕ ಸ್ಪರ್ಧೆಗೆ ಇಳಿಯಲಿವೆ. ಒಂದೊಂದು ತಂಡದಲ್ಲಿ 15 ಸದಸ್ಯರಿದ್ದಾರೆ. ಸೈಲಿಂ ಗ್‌ನಲ್ಲಿ 33, ಶೂಟಿಂಗ್‌ನಲ್ಲಿ 30 ಸ್ಪರ್ಧಿಗಳಿದ್ದಾರೆ.

ಕ್ರಿಕೆಟ್​ ಟೂರ್ನಿಯಲ್ಲಿ ಭಾರತದ ಮಹಿಳೆಯರ ಮತ್ತು ಪುರುಷರ ತಂಡ ಇದೇ ಮೊದಲ ಬಾರಿಗೆ ಕಣಕ್ಕಿಳಿಯುತ್ತಿದೆ. ಪುರುಷರ ತಂಡವನ್ನು ಋತುರಾಜ್​ ಗಾಯಕ್ವಾಡ್​ ಹಾಗೂ ಮಹಿಳೆಯರ ತಂಡವನ್ನು ಹರ್ಮನ್​ಪ್ರೀತ್​ ಕೌರ್​ ಮುನ್ನಡೆಸಲಿದ್ದಾರೆ.

ಭಾರತದ ಬಾಕ್ಸಿಂಗ್‌ ತಂಡ(Indian boxing team) ಸೇರಿ ಹಲವು ವಿಭಾಗದ ಸ್ಪರ್ಧಿಗಳು ಈಗಾಗಲೇ ಚೀನಾ ತಲುಪಿದೆ. 2 ಬಾರಿ ವಿಶ್ವ ಚಾಂಪಿಯನ್‌ ನಿಖತ್‌ ಜರೀನ್‌(Nikhat Zareen) ಅವರು​ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಇವರ ಜತೆಗೆ ಟೋಕಿಯೋ ಒಲಿಂಪಿಕ್ಸ್‌ ಪದಕ ವಿಜೇತೆ ಲವ್ಲೀನಾ ಬೊರ್ಗಹೈನ್‌(Lovlina Borgohain) ಕೂಡ ಕಣಕ್ಕಿಳಿಯಲಿದ್ದಾರೆ. ಉಭಯ ಆಟಗಾರ್ತಿಯ ಮೇಲೆ ಪದಕ ಬರವಸೆಯನ್ನು ಇಡಲಾಗಿದೆ.

ಮಹಿಳೆಯರ ವಿಭಾಗದಲ್ಲಿ ಜಾಸ್ಮೀನ್‌, ಅರುಂಧತಿ ಚೌಧರಿ, ಪ್ರೀತಿ ಪವಾರ್‌, ಪರ್ವೀನ್‌ ಹೂಡಾ ಕೂಡಾ ಕಣಕ್ಕಿಳಿಯಲಿದ್ದಾರೆ. ಅಚ್ಚರಿ ಎಂದರೆ ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ಅಮಿತ್‌ ಪಂಘಲ್‌, ವಿಶ್ವ ಚಾಂಪಿಯನ್‌ ನೀತು ಗಂಗಾಸ್‌ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಪುರುಷರ ವಿಭಾಗದಲ್ಲಿ ದೀಪಕ್‌ ಭೋರಿಯ ತಂಡ ಮುನ್ನಡೆಸಲಿದ್ದು, ಸಚಿನ್‌, ಶಿವ ಥಾಪ, ನಿಶಾಂತ್‌ ದೇವ್‌, ಲಕ್ಷ್ಯ ಚಹರ್‌, ಸಂಜೀತ್‌ ಹಾಗೂ ನರೇಂದರ್‌ ಬರ್ವಾಲ್‌ ಸಹ ಆಡಲಿದ್ದಾರೆ. 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಮೊದಲ ಅರ್ಹತಾ ಕೂಟವಾಗಿರುವ ಕಾರಣ ಏಷ್ಯಾದ ಬಾಕ್ಸರ್‌ಗಳಿಗೆ ಇದು ಮಹತ್ವದ ಟೂರ್ನಿಯಾಗಿದೆ.

Exit mobile version