Site icon Vistara News

T20 World Cup | ಫೈನಲ್‌ ಪಂದ್ಯಕ್ಕೆ ಮೊದಲು ಭಾರತ ಮೂಲದ ಬಾಲಕಿಯಿಂದ ಸಂಗೀತ; ಯಾರೀಕೆ?

t20 world cup

ಮೆಲ್ಬೋರ್ನ್‌ : ಟಿ೨೦ ವಿಶ್ವ ಕಪ್‌ನಿಂದ ಭಾರತ ತಂಡ ಹೊರಕ್ಕೆ ಬಿದ್ದಿದೆ. ಹೀಗಾಗಿ ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಟೂರ್ನಿಯ ಫೈನಲ್‌ ಕುರಿತು ಆಸಕ್ತಿ ಕಳೆದುಕೊಂಡಿದ್ದಾರೆ. ಹೀಗಾಗಿ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವೆ ನಡೆಯಲಿರುವ ಪ್ರಶಸ್ತಿ ಫೈಟ್‌ ನೋಡುವುದಕ್ಕೂ ಭಾರತೀಯರಿಗೆ ಅಸಕ್ತಿಯಿಲ್ಲ. ಆದರೆ, ಭಾರತೀಯರು ನೋಡಲೇಬೇಕಾದ ಕಾರ್ಯಕ್ರಮವೊಂದು ಫೈನಲ್ ಪಂದ್ಯಕ್ಕೆ ಮೊದಲು ಮೆಲ್ಬೋರ್ನ್‌ ಕ್ರಿಕೆಟ್‌ ಸ್ಟೇಡಿಯಮ್‌ನಲ್ಲಿ Melbourne Cricket Ground ಆಯೋಜನೆಗೊಂಡಿದೆ. ಅದುವೇ ಭಾರತೀಯ ಮೂಲದ ಬಾಲಕಿಯೊಬ್ಬಳ ಸಂಗೀತ ಕಾರ್ಯಕ್ರಮ.

ಫೈನಲ್‌ ಪಂದ್ಯಕ್ಕೆ ಮೊದಲು ನಾನಾ ಸಾಂಸ್ಕೃತಿ ಕಾರ್ಯಕ್ರಮಗಳನ್ನು ಐಸಿಸಿ ಅಯೋಜಿಸಿದೆ. ಅದು ಸಮಾರೋಪ ಸಮಾರಂಭವೂ ಆಗಿದೆ. ಈ ಕಾರ್ಯಕ್ರಮದಲ್ಲಿ ಭಾರತ ಮೂಲದ ೧೪ ವರ್ಷದ ಸಂಗೀತಗಾರ್ತಿ ಜಾನಕಿ ಈಶ್ವರನ್‌ ಅವರು ಕಾರ್ಯಕ್ರಮ ನೀಡಲಿದ್ದಾರೆ.

ಜಾನಕಿ ಈಶ್ವರನ್‌ ಅವರು ಕೇರಳ ಮೂಲದವರಾಗಿದ್ದು, ಉದ್ಯೋಗ ನಿಮಿತ್ತ ಅವರ ಪೋಷಕರು ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ. ಕರ್ನಾಟಕ ಸಂಗೀತದೊಂದಿಗೆ ವೆಸ್ಟರ್ನ್‌ ಮ್ಯೂಸಿಕ್‌ ಸಲೀಸಾಗಿ ಹಾಡಬಲ್ಲ ಅವರು ಆಸ್ಟ್ರೇಲಿಯಾದಲ್ಲಿ ಈಗಾಗಲೇ ಪ್ರಖ್ಯಾತಿ ಹೊಂದಿದ್ದಾರೆ. ಹೀಗಾಗಿ ಫೈನಲ್‌ ಪಂದ್ಯಕ್ಕೆ ಮೊದಲು ಆಸ್ಟ್ರೇಲಿಯಾ ಕ್ರಿಕೆಟ್‌ ಸಂಸ್ಥೆ ಜಾನಕಿ ಅವರ ಕಾರ್ಯಕ್ರಮ ನಿಗದಿ ಮಾಡಿದೆ. ಈ ಪ್ರತಿಭೆ ಅಲ್ಲಿನ ಐಸ್‌ಹೌಸ್‌ ಎಂಬ ರಾಕ್‌ ಬ್ಯಾಂಡ್‌ ಜತೆಗೆ ಪ್ರದರ್ಶನ ನೀಡಲಿದ್ದಾರೆ.

ಯಾರೀಕೆ ಜಾನಕಿ?

ಜಾನಕಿ ಈಶ್ವರನ್ ಅವರು ಕೇರಳದ ಕಲ್ಲಿಕೋಟೆಯವರು. ಅವರ ಪೋಷಕರಾದ ಅನೂಪ್‌ ದಿವಾಕರನ್‌ ಹಾಗೂ ದಿವ್ಯಾ ರವೀಂದ್ರನ್‌ ಅವರು ೧೫ ವರ್ಷಗಳ ಹಿಂದೆ ಆಸ್ಡ್ರೇಲಿಯಾಕ್ಕೆ ತೆರಳಿ ಅಲ್ಲೇ ನೆಲೆಸಿದ್ದಾರೆ. ಅಲ್ಲೇ ಹುಟ್ಟಿರುವ ಜಾನಕಿಗೆ ಪೋಷಕರು ಮೊದಲು ಕರ್ನಾಟಕ ಸಂಗೀತವನ್ನು ಕಲಿಸಿದ್ದರು. ಅದೇ ಸಾಮರ್ಥ್ಯದೊಂದಿಗೆ ಅವರು ಪಾಶ್ಚಾತ್ಯ ಸಂಗೀತವನ್ನೂ ಕಲಿತಿದ್ದಾರೆ. ಜಾನಕಿ ತನ್ನ ೧೨ನೇ ವರ್ಷದಲ್ಲಿ ವಿಶ್ವ ವಿಖ್ಯಾತ ಆಸ್ಟ್ರೇಲಿಯಾದ ರಿಯಾಲಿಟಿ ಶೋ ‘ದಿ ವಾಯ್ಸ್‌’ನಲ್ಲಿ ಹಾಡಿ ಜ್ಯೂರಿಗಳ ಮೆಚ್ಚುಗೆ ಗಳಿಸಿದ್ದಾರೆ.

ಇದನ್ನೂ ಓದಿ | PAK VS ENG | ಟಿ20 ವಿಶ್ವ ಕಪ್​ ಫೈನಲ್​ಗೆ ಮಳೆ ಭೀತಿ; ಪಂದ್ಯ ನಡೆಯದಿದ್ದರೆ ಏನು ಗತಿ?

Exit mobile version