Site icon Vistara News

T20 World CUP ಆಡಲಿರುವ 16 ತಂಡಗಳ ಪಟ್ಟಿ ಇಲ್ಲಿದೆ; ಯುಎಸ್‌, ಪಿಎನ್‌ಜಿಗೆ ನಿರಾಸೆ

T20 world cup

ದುಬೈ: ಮುಂಬರುವ T20 World CUP ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ೧೬ ತಂಡಗಳ ಪಟ್ಟಿ ಶುಕ್ರವಾರ ಪ್ರಕಟಗೊಂಡಿದೆ. ಜಿಂಬಾಬ್ವೆಯಲ್ಲಿ ನಡೆದ ಕ್ವಾಲಿಫೈಯರ್‌ ಪಂದ್ಯಗಳಲ್ಲಿ ತಮ್ಮ ತಮ್ಮ ಫೈನಲ್‌ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಜಿಂಬಾಬ್ವೆ ಹಾಗೂ ನೆದರ್ಲೆಂಡ್ಸ್‌ ತಂಡಗಳು ಕೊನೆಯದಾಗಿ ಟೂರ್ನಿಗೆ ಅವಕಾಶ ಪಡೆದುಕೊಂಡವು.

ಗ್ಲೋಬಲ್‌ ಕ್ವಾಲಿಫೈಯರ್‌ ಎ ಗುಂಪಿನಿಂದ ಐರ್ಲೆಂಡ್‌ ಹಾಗೂ ಯುಎಇ ತಂಡಗಳು T೨೦ world cup ಟೂರ್ನಿಗೆ ಈ ಹಿಂದೆಯೇ ಅರ್ಹತೆ ಗಿಟ್ಟಿಸಿಕೊಂಡಿದ್ದವು. ಗುರುವಾರ ಬಿ ಗುಂಪಿನ ಅಂತಿಮ ಎರಡು ತಂಡಗಳ ಆಯ್ಕೆಗೆ ಪಂದ್ಯಗಳು ನಡೆದಿದ್ದು, ಆತಿಥೇಯ ಜಿಂಬಾಬ್ವೆ ತಂಡ ಪಪುವಾ ನ್ಯೂಗಿನಿ (PNG) ತಂಡವನ್ನು ಮಣಿಸಿದರೆ, ನೆದರ್ಲೆಂಡ್ಸ್‌ ತಂಡ ಅಮೆರಿಕ (USA) ಬಳಗವನ್ನು ಸೋಲಿಸಿ ಅರ್ಹತೆ ಗಿಟ್ಟಿಸಿಕೊಂಡಿತು. ಈ ಮೂಲಕ ಕಳೆದ ವಿಶ್ವ ಕಪ್‌ನಲ್ಲಿ ಆಡಲು ಅವಕಾಶ ಪಡೆದಿದ್ದ ಪಿಎನ್‌ಜಿ ತಂಡ ಹಾಗೂ ಮೊದಲ ಬಾರಿ ಟೂರ್ನಿಯಲ್ಲಿ ಪಾಲ್ಗೊಳ್ಳುವ ಅವಕಾಶಕ್ಕಾಗಿ ಕಾಯುತ್ತಿದ್ದ ಯುಎಸ್‌ಎ ತಂಡಕ್ಕೆ ನಿರಾಸೆ ಎದುರಾಯಿತು.

ನೆದರ್ಲೆಂಡ್ಸ್‌ ತಂಡ ಮೊದಲು ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡು ೧೯.೪ ಓವರ್‌ಗಳಲ್ಲಿ ೧೩೮ ರನ್‌ಗಳಿಗೆ ಆಲ್‌ಔಟ್‌ ಮಾಡಿತು. ಗುರಿ ಬೆನ್ನಟ್ಟಿ ಏಳು ವಿಕೆಟ್‌ಗಳ ಜಯ ಗಳಿಸಿತು. ಇನ್ನೊಂದು ಪಂದ್ಯದಲ್ಲಿ ಜಿಂಬಾಬ್ವೆ ತಂಡ ಪಿಎನ್‌ಜಿ ತಂಡನ್ನು ೨೭ ರನ್‌ಗಳಿಂದ ಸೋಲಿಸಿತು.

T೨೦ world cup ಆಡಲಿರುವ ತಂಡಗಳು

ಆಸ್ಟ್ರೇಲಿಯಾ (ಆತಿಥ್ಯ ಹಾಗೂ ಹಾಲಿ ಚಾಂಪಿಯನ್‌), ಅಫಘಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್‌, ಭಾರತ, ನಮೀಬಿಯಾ, ನ್ಯೂಜಿಲೆಂಡ್‌, ಪಾಕಿಸ್ತಾನ, ಸ್ಕಾಟ್ಲೆಂಡ್‌, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್‌ ಇಂಡೀಸ್‌.

ಗ್ಲೋಬಲ್‌ ಕ್ವಾಲಿಫೈಯರ್‌ ಎ ಗುಂಪಿನಿಂದ: ಐರ್ಲೆಂಡ್‌, ಯುನೈಟೆಡ್‌ ಅರಬ್‌ ಎಮಿರೇಟ್ಸ್‌

ಗ್ಲೋಬಲ್‌ ಕ್ವಾಲಿಫೈಯರ್‌ ಬಿ ಗುಂಪಿನಿಂದ: ಜಿಂಬಾಬ್ವೆ ಮತ್ತು ನೆದರ್ಲೆಂಡ್ಸ್‌

ಇದನ್ನೂ ಓದಿ | Independence Day ಅಮೃತ ಮಹೋತ್ಸವಕ್ಕೆ ಭಾರತ ಹಾಗೂ ವಿಶ್ವ ಇಲೆವೆನ್‌ XI ನಡುವೆ ಕ್ರಿಕೆಟ್‌ ಪಂದ್ಯ

Exit mobile version