ರಿಯಾದ್: ಬ್ರೆಜಿಲ್ ಫುಟ್ಬಾಲ್ ತಂಡದ ಸ್ಟಾರ್ ಆಟಗಾರ ನೇಯ್ಮರ್(Neymar) ಕೆಲ ದಿನಗಳ ಹಿಂದಷ್ಟೇ ಸೌದಿ ಅರೇಬಿಯಾದ ಅಲ್-ಹಿಲಾಲ್ ಫುಟ್ಬಾಲ್ ಕ್ಲಬ್‌ಗೆ(Al Hilal Saudi Club) ಸೇರ್ಪಡೆಗೊಂಡಿದ್ದರು. 100 ಮಿಲಿಯನ್ ಯುರೋ (ಸುಮಾರು 1455ಕೋಟಿ ರೂ.) ಮೊತ್ತಕ್ಕೆ ಎರಡು ವರ್ಷಗಳ ಕಾಲ ನೇಯ್ಮರ್ ಈ ಕ್ಲಬ್ ಆಡಲು ಒಪ್ಪಂದ ಮಾಡಿಕೊಂಡಿದ್ದರು. ಆದರೆ ಇಷ್ಟು ದೊಡ್ಡ ಮೊತ್ತ ಮಾತ್ರವಲ್ಲದೆ ಅವರ ಕುಟುಂಬಕ್ಕ ಸೌದಿಯಲ್ಲಿ ರಾಜ ವೈಭೋಗದ ವ್ಯವಸ್ತೆಯನ್ನು ಮಾಡಲಾಗಿದೆ.
25 ಬೆಡ್‌ರೂಂ ಮನೆ, 3 ಐಷಾರಾಮಿ ಕಾರುಗಳು, ಖಾಸಗಿ ವಿಮಾನ!
ಮಾಧ್ಯಮಗಳ ವರದಿ ಪ್ರಕಾರ, ನೇಯ್ಮರ್‌ಗೆ 2 ವರ್ಷಕ್ಕೆ 1457 ಕೋಟಿ ರೂ. ವೇತನದ ಜತೆಗೆ ಇನ್ನಷ್ಟು ದುಬಾರಿ ಸವಲತ್ತುಗಳು ಸೌದಿ ಅರೇಬಿಯಾ ವ್ಯವಸ್ಥೆ ಮಾಡಿದೆ. ನೇಯ್ಮರ್ ಹಾಗೂ ಕುಟುಂಬಸ್ಥರು ಉಳಿದುಕೊಳ್ಳಲು 25 ಬೆಡ್‌ರೂಂಗಳಿರುವ ಮನೆ ನೀಡುವುದಾಗಿ ಅಲ್-ಹಿಲಾಲ್ ತಂಡದ ಮಾಲಿಕರು ತಿಳಿಸಿದ್ದಾರೆ. ಈ ಮನೆಯಲ್ಲಿ 24 ಗಂಟೆ ಕಾಲ ಕನಿಷ್ಠ 5 ಸಿಬ್ಬಂದಿ, ಒಲಿಂಪಿಕ್ಸ್‌ನಲ್ಲಿ ಬಳಸುವಷ್ಟು ದೊಡ್ಡ ಈಜುಕೊಳ, ಇಲ್ಲಿ ಓಡಾಡಲು ಲ್ಯಾಂಬೊರ್ಗಿನಿ ಸೇರಿ 3 ಐಷಾರಾಮಿ ಕಾರುಗಳು, 24 ಗಂಟೆ ಲಭ್ಯವಿರುವ ಚಾಲಕರು, ಮತ್ತು ಕುಟುಂಬದೊಂದಿಗೆ ವಿದೇಶಕ್ಕೆ ಪ್ರಯಾಣಿಸಲು ಖಾಸಗಿ ವಿಮಾನ ವ್ಯವಸ್ಥೆಯನ್ನು ಕೂಡ ಕಲ್ಪಿಸಲಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ Neymar: ಸೌದಿ ಅರೇಬಿಯಾದ ಪ್ರಸಿದ್ಧ ಕ್ಲಬ್ ಪರ ಆಡಲಿದ್ದಾರೆ ನೇಮರ್
ಸೇಂಟ್-ಜರ್ಮೈನ್ ತೊರೆದ ನೇಯ್ಮರ್
2017 ರಲ್ಲಿ ಸ್ಪೇನ್ನ ಖ್ಯಾತ ಫುಟ್ಬಾಲ್ ಕ್ಲಬ್ ಬಾರ್ಸಿಲೋನಾ ತಂಡದಲ್ಲಿದ್ದ ನೇಯ್ಮರ್ ಅವರನ್ನು ಟ್ರಾನ್ಸ್ಫರ್ ಆಯ್ಕೆಯ ಮೂಲಕ ಫ್ರಾನ್ಸ್ನ ಪ್ಯಾರಿಸ್ ಸೇಂಟ್-ಜರ್ಮೈನ್ ಕ್ಲಬ್(Paris Saint-Germain Football Club) ಖರೀದಿಸಿತ್ತು. ಆ ಬಳಿಕ 6 ವರ್ಷಗಳ ಕಾಲ ಈ ತಂಡದ ಪರ ಆಡಿದ್ದರು. ಅವರು ಆಡಿದ 173 ಪಂದ್ಯಗಳಲ್ಲಿ 118 ಗೋಲುಗಳನ್ನು ಬಾರಿಸಿದ್ದಾರೆ. ಇದಕ್ಕೂ ಮುನ್ನ ಬಾರ್ಸಿಲೋನಾ(FC Barcelona) ಪರ 186 ಪಂದ್ಯಗಳಲ್ಲಿ 105 ಗೋಲುಗಳಿಸಿದ್ದರು. ಇದೀಗ ಸೌದಿ ಅರೇಬಿಯಾ ಕ್ಲಬ್ ಪರ ಮೋಡಿ ಮಾಡುವ ವಿಶ್ವಾಸದಲ್ಲಿದ್ದಾರೆ.
ತಂಡಕ್ಕೆ ಮರಳಿದ ನೇಯ್ಮರ್
ಮುಂದಿನ ತಿಂಗಳು ನಡೆಯಲಿರುವ ದಕ್ಷಿಣ ಅಮೆರಿಕದ ವಿಶ್ವಕಪ್‌ನ (World Cup) ಆರಂಭಿಕ ಎರಡು ಸುತ್ತಿನ ಅರ್ಹತಾ ಪಂದ್ಯಗಳಲ್ಲಿ ನೇಯ್ಮರ್ ಕೂಡ ಆಡಲಿದ್ದಾರೆ. ತಂಡದ ನೂತನ ಕೋಚ್ ಫರ್ನಾಂಡೋ ಡಿನಿಜ್ ಅವರ ಸೂಚನೆ ಮೇರೆಗೆ ನೇಮರ್ ತಂಡಕ್ಕೆ ಮರಳಲಿದ್ದಾರೆ. ಕಳೆದ ವಿಶ್ವಕಪ್ ನಂತರ ಮೊದಲ ಬಾರಿಗೆ ಬ್ರೆಜಿಲ್ ಪರ ಆಡಲಿದ್ದಾರೆ. ಬ್ರೆಜಿಲ್ ಸೆಪ್ಟೆಂಬರ್ 8 ರಂದು ಅಮೆಜಾನ್ ಪ್ರದೇಶದ ಬೆಲೆಮ್‌ನಲ್ಲಿ ಬೊಲಿವಿಯಾ ತಂಡವನ್ನು ಎದುರಿಸಲಿದೆ. ಇದಾದ ನಂತರ ನಾಲ್ಕು ದಿನಗಳ ನಂತರ ಲಿಮಾದಲ್ಲಿ ಪೆರುವನ್ನು ಎದುರಿಸಲಿದೆ.