ಭುವನೇಶ್ವರ : ಹಾಕಿ ವಿಶ್ವ ಕಪ್ನ (Hockey World Cup) ಡಿ ಗುಂಪಿನ ತನ್ನ ಕೊನೇ ಪಂದ್ಯದಲ್ಲಿ ಭಾರತ ತಂಡ ವೇಲ್ಸ್ ತಂಡದ ವಿರುದ್ಧ 4-0 ಗೋಲ್ಗಳ ಅಂತರದ ವಿಜಯ ಸಾಧಿಸಿದೆ. ಆದಾಗ್ಯೂ ಭಾರತ ತಂಡಕ್ಕೆ ಕ್ವಾರ್ಟರ್ಫೈನಲ್ಸ್ಗೆ ನೇರ ಪ್ರವೇಶ ಮಾಡಲು ಸಾಧ್ಯವಾಗಿಲ್ಲ. ಗುಂಪಿನ ಮೊದಲ ತಂಡವಾಗಿರುವ ಇಂಗ್ಲೆಂಡ್ ಗೋಲ್ಗಳ ಅಂತರದಿಂದ ಎಂಟರ ಘಟ್ಟಕ್ಕೆ ನೇರ ಪ್ರವೇಶ ಪಡೆಯಿತು.
ಇಲ್ಲಿನ ಬಿರ್ಸಾ ಮುಂಡಾ ಹಾಕಿ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡದ ಆಕಾಶ್ದೀಪ್ (21ನೇ ನಿಮಿಷ) ಎರಡು ಗೋಲ್ಗಳನ್ನು ಬಾರಿಸಿದರೆ,ಶಂಶೇರ್ ಸಿಂಗ್ (32, 45ನೇ ನಿಮಿಷ) ಹಾಗೂ ಹರ್ಮನ್ಪ್ರಿತ್ ಸಿಂಗ್(59ನೇ ನಿಮಿಷ) ತಲಾ ಒಂದು ಗೋಲ್ಗಳನ್ನು ಬಾರಿಸಿದರು. ಎದುರಾಳಿ ತಂಡದ ಫುರ್ಲಾಂಗ್ ಗರೇತ್ (42 ನಿಮಿಷ), ಡ್ರೇಪರ್ ಜೇಕಬ್ (44) ತಲಾ ಒಂದು ಗೋಲ್ ಬಾರಿಸಿದರು.
ಈ ಪಂದ್ಯದಲ್ಲಿ ಭಾರತ ತಂಡ ಹೆಚ್ಚು ಗೋಲ್ಗಳ ಅಂತರವನ್ನು ಕಾಪಾಡಿಕೊಂಡಿದ್ದರೆ ನೇರವಾಗಿ ಕ್ವಾರ್ಟರ್ಫೈನಲ್ಸ್ಗೆ ಪ್ರವೇಶ ಪಡೆಯಬಹುದಾಗಿತ್ತು. ಆದರೆ, ವೇಲ್ಸ್ ತಂಡ ಎರಡು ಗೋಲ್ಗಳನ್ನು ಬಾರಿಸುವ ಮೂಲಕ ಅಂತರವನ್ನು ತಗ್ಗಿಸಿತು. ಡಿ ಗುಂಪಿನಲ್ಲಿರುವ ಭಾರತ ಹಾಗೂ ಇಂಗ್ಲೆಂಡ್ ತಂಡ ಮೂರರಲ್ಲಿ ತಲಾ ಎರಡು ಗೆಲುವು ಹಾಗೂ ಒಂದು ಪಂದ್ಯವನ್ನು ಡ್ರಾ ಮಾಡಿಸುವ ಮೂಲ 7 ಅಂಕಗಳನ್ನು ಪಡೆದುಕೊಂಡಿತ್ತು. ಆದರೆ ಇಂಗ್ಲೆಂಡ್ ತಂಡ ಒಟ್ಟು 9 ಗೋಲ್ಗಳನ್ನು ಬಾರಿಸಿದ್ದ, ಭಾರತ 7 ಗೋಲ್ಗಳನ್ನು ಬಾರಿಸಿತ್ತು. ಗುಂಪು ಹಂತದಲ್ಲಿ ಮೊದಲ ತಂಡ ಕ್ವಾರ್ಟಫೈನಲ್ಸ್ಗೆ ನೇರ ಪ್ರವೇಶ ಪಡೆದ ಕಾರಣ ಭಾರತ ಕ್ರಾಸ್ಓವರ್ ಪಂದ್ಯದಲ್ಲಿ ಆಡಬೇಕಾಯಿತು.
ಇದನ್ನೂ ಓದಿ | Hockey World Cup | ಹಾಕಿ ವಿಶ್ವಕಪ್ ವರದಿ ಮಾಡಲು ಬಂದ ದಕ್ಷಿಣ ಕೊರಿಯಾದ ಫೋಟೊ ಜರ್ನಲಿಸ್ಟ್ ಚರಂಡಿಗೆ ಬಿದ್ದು ಗಾಯ