ಲಂಡನ್: ಭಾರತ(England vs India Tests) ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ 16 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಅಚ್ಚರಿ ಎಂದರೆ ಈ ತಂಡದಲ್ಲಿ 4 ಸ್ಪಿನ್ನರ್ಗಳು ಕಾಣಿಸಿಕೊಂಡಿದ್ದಾರೆ. ಭಾರತದಲ್ಲಿ ಈ ಸರಣಿ ನಡೆಯುವ ಕಾರಣ ಸ್ಪಿನ್ ಪ್ರಯೋಜನಕಾರಿ ಆಗಬಹುದೆಂಬುದು ಇಂಗ್ಲೆಂಡ್ ಈ ಉಪಾಯ ಮಾಡಿದೆ.
ತಂಡವನ್ನು ಆಲ್ರೌಂಡರ್ ಬೆನ್ ಸ್ಟೋಕ್ಸ್ ಮುನ್ನಡೆಸಲಿದ್ದಾರೆ. ತಂಡ ಯುವ ಮತ್ತು ಅನುಭವಿ ಆಟಗಾರರ ಸಮ್ಮಿಶ್ರಣದಿಂದ ಕೂಡಿದೆ. ಸ್ಪಿನ್ನರ್‌ಗಳಾದ ಟಾಮ್ ಹಾರ್ಟ್ಲಿ ಮತ್ತು ಶೋಯೆಬ್ ಬಶೀರ್ ಹೊಸ ಮುಖವಾಗಿದೆ. ಉಳಿದಂತೆ ಜೇಮ್ಸ್ ಅ್ಯಂಡರ್ಸನ್, ಜಾನಿ ಬೇರ್ಸ್ಟೋ, ಜೋ ರೂಟ್, ಝಾಕ್ ಕ್ರಾಲಿ ಕೂಡ ಸ್ಥಾನ ಪಡೆದಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿ ಮುಂದಿನ ವರ್ಷದಿಂದ ಆರಂಭಗೊಳ್ಳಲಿದೆ. ಮೊದಲ ಪಂದ್ಯ ಜನವರಿ 25ಕ್ಕೆ ಹೈದರಾಬಾದ್ನಲ್ಲಿ ಆರಂಭಗೊಳ್ಳಲಿದೆ. ಒಟ್ಟು 5 ಪಂದ್ಯಗಳ ಸರಣಿ ಇದಾಗಿದೆ. ಇದು ಟೆಸ್ಟ್ ವಿಶ್ವಚಾಂಪಿಯನ್ಶಿಪ್ ಭಾಗವಾಗಿದೆ.
All set for India! 💪
— England Cricket (@englandcricket) December 11, 2023
Our 16-player squad for the five-Test series 🏏
🇮🇳 #INDvENG 🏴 | #EnglandCricket pic.twitter.com/z7UjI634h1
ಇಂಗ್ಲೆಂಡ್ ತಂಡ
ಬೆನ್ ಸ್ಟೋಕ್ಸ್ (ನಾಯಕ), ರೆಹಾನ್ ಅಹ್ಮದ್, ಜೇಮ್ಸ್ ಆಂಡರ್ಸನ್, ಜೋ ರೂಟ್, ಗಸ್ ಅಟ್ಕಿನ್ಸನ್, ಜಾನಿ ಬೇರ್ಸ್ಟೋ, ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಬೆನ್ ಫೋಕ್ಸ್ (ವಿಕೆಟ್ ಕೀಪರ್), ಟಾಮ್ ಹಾರ್ಟ್ಲಿ, ಜ್ಯಾಕ್ ಲೀಚ್, ಓಲಿ ಪೋಪ್, ಓಲಿ ರಾಬಿನ್ಸನ್, ಮಾರ್ಕ್ ವುಡ್.
ಸರಣಿಯ ವೇಳಾಪಟ್ಟಿ
ಜನವರಿ 25 ರಿಂದ 29- ಮೊದಲ ಟೆಸ್ಟ್ ಪಂದ್ಯ (ಹೈದರಾಬಾದ್)
ಫೆಬ್ರವರಿ 2 ರಿಂದ 6- ಎರಡನೇ ಟೆಸ್ಟ್ ಪಂದ್ಯ (ವಿಶಾಖಪಟ್ಟಣಂ)
ಫೆಬ್ರವರಿ 15 ರಿಂದ 19- ಮೂರನೇ ಟೆಸ್ಟ್ ಪಂದ್ಯ (ರಾಜ್ಕೋಟ್)
ಫೆಬ್ರವರಿ 23 ರಿಂದ 27- ನಾಲ್ಕನೇ ಟೆಸ್ಟ್ ಪಂದ್ಯ (ರಾಂಚಿ)
ಮಾರ್ಚ್ 7 ರಿಂದ 11- ಐದನೇ ಟೆಸ್ಟ್ ಪಂದ್ಯ (ಧರ್ಮಶಾಲಾ)
ಇದನ್ನೂ ಓದಿ IND vs SA 2nd T20: ಮಳೆ ಭೀತಿಯಲ್ಲಿ ಆಡಲು ಸಜ್ಜಾದ ಭಾರತ-ದಕ್ಷಿಣ ಆಫ್ರಿಕಾ
ಇತ್ತೀಚೆಗೆ ಮುಕ್ತಾಯ ಕಂಡಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಅತ್ಯಂತ ಕಳಪೆ ಪದರ್ಶನ ತೋರಿತ್ತು. ತಂಡ ಬಲಿಷ್ಠವಾಗಿದ್ದರೂ ಯಾರೂ ಕೂಡ ನಿರೀಕ್ಷಿತ ಬ್ಯಾಟಿಂಗ್, ಬೌಲಿಂಗ್ ನಡೆಸಲು ಸಾಧ್ಯವಾಗಿರಲಿಲ್ಲ. ವಿಶ್ವಕಪ್ ಆರಂಭಕ್ಕೂ ಮುನ್ನ ಎಲ್ಲ ಕ್ರಿಕೆಟ್ ಪಂಡಿತರು ಇಂಗ್ಲೆಂಡ್ ತಂಡವೇ ಕಪ್ ಗೆಲ್ಲಲಿದೆ ಎಂದು ಹೇಳಿದ್ದರು. ಆದರೆ ಇದು ಹುಸಿಗೊಂಡಿತ್ತು. ಆಡಿದ 9 ಪಂದ್ಯಗಳ ಪೈಕಿ ಕೇವಲ ಮೂರು ಪಂದ್ಯ ಮಾತ್ರ ಗೆದ್ದಿತ್ತು. ಕ್ರಿಕೆಟ್ ಶಿಶು ಅಫಘಾನಿಸ್ತಾನ ವಿರುದ್ಧವೂ ಕೂಡ ಸೋಲು ಕಂಡಿತ್ತು.
ಶನಿವಾರ ಮುಕ್ತಾಯ ಕಂಡಿದ್ದ ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿಯಲ್ಲೂ ಅತ್ಯಂತ ಕಳಪೆ ಪ್ರದರ್ಶನ ತೋರಿದ ಇಂಗ್ಲೆಂಡ್ ಸರಣಿ ಸೋಲಿನ ಅವಮಾನ ಎದುರಿಸಿತ್ತು. ಇದೀಗ ಹೊಸ ವರ್ಷದಲ್ಲಾದರೂ ತಂಡ ಗೆಲುವಿನ ಟ್ರ್ಯಾಕ್ಗೆ ಮರಳಲಿದೆಯಾ ಎಂದು ಕಾದು ನೋಡಬೇಕಿದೆ.