ಮುಂಬಯಿ : ಮುಂದಿನ ಮಾರ್ಚ್4ರಿಂದ ನಡೆಯಲಿರುವ ಮಹಿಳೆಯರ ಪ್ರೀಮಿಯರ್ ಲೀಗ್ಗೆ (Women’s Premier League) ಹರಾಜಿನಲ್ಲಿ ಪಾಲ್ಗೊಂಡಿರುವ ಆಟಗಾರ್ತಿಯರ ಅಂತಿಮ ಪಟ್ಟಿ ಮಂಗಳವಾರ (ಫೆಬ್ರವರಿ 7) ಬಿಡುಗಡೆಯಾಗಿದ್ದು, ಒಟ್ಟು 409 ಆಟಗಾರ್ತಿಯರು ಬಿಡ್ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ 246 ಭಾರತೀಯರಾಗಿದ್ದರೆ 163 ವಿದೇಶಿ ಆಟಗಾರ್ತಿಯರು ಇದ್ದಾರೆ. ಫೆಬ್ರವರಿ 13ರಂದು ಹರಾಜು ಪ್ರಕ್ರಿಯೆ ನಡೆಯಲಿದೆ.
ಒಟ್ಟು 1525 ಆಟಗಾರರು ಹರಾಜಿನಲ್ಲಿ ನೋಂದಾಯಿಸಿಕೊಂಡಿದ್ದರು. ಅವರೆಲ್ಲರ ದಾಖಲೆ ಪರಿಶೀಲನೆ ಮಾಡಿ 409 ಆಟಗಾರ್ತಿಯರನ್ನು ಉಳಿಸಿಕೊಳ್ಳಲಾಗಿದೆ. ಗರಿಷ್ಠ 90 ಸ್ಲಾಟ್‌ಗಳನ್ನು ಭರ್ತಿ ಮಾಡಲು ಅವಕಾಶವಿದ್ದು, ಅವರಲ್ಲಿ 30 ವಿದೇಶಿ ಆಟಗಾರ್ತಿಯರಾಗಿದ್ದಾರೆ. ಅಂತಿಮ ಪಟ್ಟಿಯಲ್ಲಿ 199 ಆಟಗಾರ್ತಿಯರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡದವರಾಗಿದ್ದಾರೆ.
ಗರಿಷ್ಠ ಮೂಲ ಬೆಲೆ 50 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಈ ಪಟ್ಟಿಯಲ್ಲಿ 24 ಆಟಗಾರ್ತಿಯರಿದ್ದು, ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್, ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ, ಶೆಫಾಲಿ ವರ್ಮಾ ಮತ್ತಿತರರು ಇದ್ದಾರೆ.
ಇದನ್ನೂ ಓದಿ : Women’s Premier League : ಮಹಿಳೆಯರ ಸೂಪರ್ ಲೀಗ್ನ ವೇಳಾಪಟ್ಟಿ ಪ್ರಕಟ; ಎಲ್ಲಿಂದ ಎಲ್ಲಿಯ ತನಕ ಟೂರ್ನಿ?
30 ಆಟಗಾರ್ತಿಯಾರು ನಂತರದ ಪಟ್ಟಿಯಲ್ಲಿದ್ದಾರೆ. ಅವರೆಲ್ಲರೂ 40 ಲಕ್ಷ ರೂಪಾಯಿ ಮೂಲಕ ಬೆಲೆ ಹೊಂದಿದ್ದಾರೆ. ಬಿಸಿಸಿಐ ಸೋಮವಾರವೇ ಟೂರ್ನಿಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಮಾರ್ಚ್ 4ರಂದು ಆರಂಭಗೊಂಡು ಅದೇ ತಿಂಗಳ 26ರವರಗೆ ನಡೆಯಲಿದೆ.