Site icon Vistara News

Team India : ಕ್ರಿಕೆಟ್​ನ ಶ್ರೇಷ್ಠ ಕ್ಲಬ್​ನ ಆಜೀವ ಸದಸ್ಯತ್ವ ಪಡೆದ ಧೋನಿ ಸೇರಿದಂತೆ 5 ಭಾರತೀಯ ಆಟಗಾರರು

5 senior players including Dhoni who got lifetime membership of cricket's greatest club

#image_title

ನವ ದೆಹಲಿ: ಭಾರತ ಕ್ರಿಕೆಟ್​ ಕ್ಷೇತ್ರದ ಅದ್ಭುತ ಸಾಧಕರಾದ ಮಹೇಂದ್ರ ಸಿಂಗ್​ ಧೋನಿ, ಯುವರಾಜ್​ ಸಿಂಗ್​, ಸುರೇಶ್​ ರೈನಾ, ಜೂಲನ್​ ಗೋಸ್ವಾಮಿ ಹಾಗೂ ಮಿಥಾಲಿ ರಾಜ್ ಅವರಿಗೆ ಮೆರಿಲ್​ಬೋನ್​ ಕ್ರಿಕೆಟ್​ ಕ್ಲಬ್​ ತನ್ನ ಆಜೀವ ಸದಸ್ಯತ್ವ ನೀಡಿದೆ. ಈ ಮೂಲಕ ವಿಶ್ವದ ಅತ್ಯಂತ ಪ್ರತಿಷ್ಠಿತ ಕ್ರಿಕೆಟ್​ ಕ್ಲಬ್​ ಭಾಗವಾಗಿ ಈ ಐವರು ಆಟಗಾರರು ಕೆಲಸ ಮಾಡಲಿದ್ದಾರೆ. ಮೆರಿಲ್​ಬೋನ್​ ಕ್ರಿಕೆಟ್​ ಕ್ಲಬ್​ ಕ್ರಿಕೆಟ್​ ನಿಯಮಗಳನ್ನು ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಇಂಥ ಕ್ಲಬ್​ನ ಸದಸ್ಯತ್ವ ಪಡೆಯವುದು ಗೌರವದ ವಿಷಯ ಎನ್ನಲಾಗಿದೆ.

ಎಂಎಸ್‌ ಧೋನಿ, ಯುವರಾಜ್‌ ಸಿಂಗ್, ಸುರೇಶ್‌ ರೈನಾ ಸೇರಿದಂತೆ ಐವರು ಭಾರತೀಯ ದಿಗ್ಗಜರಿಗೆ ಎಂಸಿಸಿ ತನ್ನ ಸದಸ್ಯತ್ವವನ್ನು ನೀಡುವ ಜೊತೆಗೆ ಟೆಸ್ಟ್‌ ಕ್ರಿಕೆಟ್‌ ಆಡುವ 8 ರಾಷ್ಟ್ರಗಳಿಂದ ಒಟ್ಟು 19 ಆಟಗಾರರಿಗೆ ಎಂಸಿಸಿ ತನ್ನ ಆಜೀವ ಸದಸ್ಯತ್ವವನ್ನು ನೀಡಿ ಗೌರವಿಸಿದೆ.

ಭಾರತ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ವೇಗದ ಬೌಲರ್​ ಜೂಲನ್‌ ಗೋಸ್ವಾಮಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇವರ ಸಹ ಆಟಗಾರ್ತಿಯಾಗಿದ್ದ ಹಾಗೂ ಬ್ಯಾಟಿಂಗ್‌ ದಿಗ್ಗಜೆ ಮಿಥಾಲಿ ರಾಜ್‌ ಮಹಿಳಾ ಒಡಿಐ ಕ್ರಿಕೆಟ್‌ನಲ್ಲಿ 211 ಇನಿಂಗ್ಸ್‌ಗಳಿಂದ 7,805 ರನ್‌ ಗಳಿಸಿದ್ದಾರೆ.

ವಿಶ್ವ ಕಪ್​ ವಿಜೇತರು ಧೋನಿ, ಯುವರಾಜ್​

2007 ಮತ್ತು 2011ರ ಐಸಿಸಿ ವಿಶ್ವಕಪ್‌ ಟೂರ್ನಿಗಳಲ್ಲಿ ಭಾರತ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಎಂಎಸ್‌ ಧೋನಿ ಹಾಗೂ ಯುವರಾಜ್‌ ಸಿಂಗ್‌ ಅವರಿಗೂ ಎಂಸಿಸಿ ಆಜೀವ ಸದಸ್ಯತ್ವವನ್ನು ನೀಡಿದೆ. ಇನ್ನು ಭಾರತ ತಂಡದ ಮಾಜಿ ಆಲ್‌ರೌಂಡರ್‌ ಸುರೇಶ್‌ ರೈನಾ, ಏಕದಿನ ಕ್ರಿಕೆಟ್‌ನಲ್ಲಿ 5,500 ರನ್‌ಗಳನ್ನು ಪೇರಿಸಿದ ಸಾಧನೆ ಮಾಡಿದ್ದಾರೆ.

“ಮುಂದಿನ ಬೇಸಗೆಯ ಕ್ರಿಕೆಟ್​ ಋತುವಿಗೆ ಸಜ್ಜಾಗುತ್ತಿರುವ ನಡುವೆಯೇ ಸದಸ್ಯತ್ವ ಘೋಷಣೆ ಮಾಡಿದ್ದೇವೆ. ಇಂದು(ಬುಧವಾರ) ಘೋಷಿಸಿದ ಹೆಸರುಗಳು ಆಧುನಿಕ ಕ್ರಿಕೆಟ್‌ನ ಕೆಲ ಶ್ರೇಷ್ಠ ಅಂತಾರಾಷ್ಟ್ರೀಯ ಆಟಗಾರರರು. ಇವರೀಗ ಕ್ಲಬ್‌ನ ಮೌಲ್ಯಯುತ ಸದಸ್ಯರೆಂದು ಹೇಳಿಕೊಳ್ಳಲು ಸಂತಸವಾಗುತ್ತಿದೆ,” ಎಂದು ಎಂಸಿಸಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೈ ಲ್ಯಾವೆಂಡರ್ ಹೇಳಿದ್ದಾರೆ

ಎಂಸಿಸಿ ಆಜೀವ ಸದಸ್ಯತ್ವ ಸ್ವೀಕರಿಸಿದ 19 ಆಟಗಾರ/ಆಟಗಾರ್ತಿಯರ ಪಟ್ಟಿ

Exit mobile version