ಲಂಡನ್: ಕೆಲವು ತಿಂಗಳುಗಳ ಹಿಂದೆ ಭಾರತ ತಂಡದ (Team India) ಮಧ್ಯಮ ವೇಗಿ ಭುವನೇಶ್ವರ್ ಕುಮಾರ್ ವಿದಾಯ ಹೇಳಲೇಬೇಕು ಎನ್ನುವ ಪರಿಸ್ಥಿತಿ ಎದುರಿಸಿದ್ದರು. ಅವರ ಬೌಲಿಂಗ್‌ನಲ್ಲಿ ವಿಕೆಟ್ ಬೀಳುತ್ತಿರಲಿಲ್ಲ ಜತೆಗೆ ರನ್ ಕೂಡ ಬಿಟ್ಟುಕೊಡುತಿದ್ದರು. ಆದರೆ, ಕಳೆದರೆರಡು ತಿಂಗಳಿಂದ ಅವರ ಅದೃಷ್ಟವೇ ಬದಲಾಗಿದೆ. ಅವರ ಸ್ವಿಂಗ್ ತಂತ್ರ ಫಲ ಕೊಡುತ್ತಿದ್ದೆ. ಭರಪೂರ ವಿಕೆಟ್‌ಗಳ ಜತೆಗೆ ರನ್ ನಿಯಂತ್ರಣ ಮಾಡುವ ಮೂಲಕ ಭಾರತ ತಂಡದ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸುತ್ತಿದ್ದಾರೆ. ಇಂಥ ಬೌಲರ್ ಈಗ ಟಿ೨೦ ಮಾದರಿಯ ಪವರ್‌ಪ್ಲೇ ಅವಧಿಯಲ್ಲಿ ೫೦೦ ಡಾಟ್ ಬಾಲ್‌ಗಳನ್ನು ಎಸೆದ ಮೊದಲ ಬೌಲರ್ ಎಂಬ ಖ್ಯಾತಿ ಗಿಟ್ಟಿಸಿಕೊಂಡಿದ್ದಾರೆ.
ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡ ಸೌತಾಂಪ್ಟನ್ ಹಾಗೂ ಎಜ್‌ಬಾಸ್ಟನ್‌ನಲ್ಲಿ ನಡೆದ ಟಿ೨೦ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಜಯ ಗಳಿಸಿದೆ. ಈ ಪಂದ್ಯಗಳ ಗೆಲುವಿಗೆ ಭುವಿ ಸೇರಿದಂತೆ ಬೌಲರ್‌ಗಳ ಪರಾಕ್ರಮವೇ ಕಾರಣ. ಇದೇ ವೇಳೆ ಭುವನೇಶ್ವರ್ ಕುಮಾರ್ ಪವರ್ ಪ್ಲೇನಲ್ಲಿ ೫೦೦ ಡಾಟ್ ಬಾಲ್‌ಗಳ ಸಾಧನೆಯನ್ನು ಮಾಡಿದ್ದಾರೆ.
ನ್ಯೂಜಿಲೆಂಡ್‌ನ ಟಿಮ್ ಸೌಥೀ ಹಾಗೂ ವೆಸ್ಟ್ ಇಂಡೀಸ್‌ನ ಸ್ಯಾಮುಯೆಲ್ ಬದ್ರಿ ಭುವಿಯ ನಂತರ ಸ್ಥಾನಗಳಲ್ಲಿ ಇದ್ದಾರೆ. ಇವರಿಬ್ಬರು ಪವರ್‌ಪ್ಲೇ ಅವಧಿಯಲ್ಲಿ ತಲಾ ೩೮೩ ಡಾಟ್ ಬಾಲ್ ಎಸೆದಿದ್ದಾರೆ.
ಭರ್ಜರಿ ಫಾರ್ಮ್
ಭುವನೇಶ್ವರ್ ಕುಮಾರ್ ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ನಾಯಕ ಜೋಸ್ ಬಟ್ಲರ್ ಅವರನ್ನು ಗೋಲ್ಡನ್ ಡಕ್‌ಗೆ ಔಟ್ ಮಾಡಿದ್ದರು. ಅಂತೆಯೇ ಎರಡನೇ ಪಂದ್ಯದ ಮೊದಲ ಎಸೆತದಲ್ಲಿಯೇ ಜೇಸನ್ ರಾಯ್ ವಿಕೆಟ್ ಕಬಳಿಸಿದ್ದರು. ಅವರ ಈ ಪರಾಕ್ರಮದಿಂದ ಭಾರತ ತಂಡ ಜಯ ಗಳಿಸಿದೆ.
ಇದನ್ನೂ ಓದಿ: IND vs WI | ಘಟಾನುಘಟಿಗಳ ಅನುಪಸ್ಥಿತಿಯಲ್ಲಿ ಭಾರತದ ಮುಂದಿನ ಸರಣಿ, ಶಿಖರ್ ಧವನ್‌ಗೆ ಕ್ಯಾಪ್ಟನ್ ಪಟ್ಟ