ರಾವಲ್ಪಿಂಡಿ : ಇಂಗ್ಲೆಂಡ್ ಕ್ರಿಕೆಟ್ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಟೆಸ್ಟ್ ಮಾದರಿಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಟೆಸ್ಟ್ ಸರಣಿಯ ಮೊದಲ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ೪ ವಿಕೆಟ್ ಕಳೆದುಕೊಂಡು ೫೦೬ ರನ್ ಬಾರಿಸಿದೆ. ಇದು ವಿಶ್ವ ದಾಖಲೆಯಾಗಿದ್ದು, ಆಸ್ಟ್ರೇಲಿಯಾ ತಂಡದ ಹೆಸರಿನಲ್ಲಿದ್ದ ದಾಖಲೆಯನ್ನು ಇಂಗ್ಲೆಂಡ್ ಅಳಿಸಿದೆ.
ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡ ಮಂದ ಬೆಳಕಿನ ಕಾರಣಕ್ಕೆ ಮೊದಲ ದಿನದಾಟ ಮುಕ್ತಾಯದ ವೇಳೆಗೆ ೭೫ ಓವರ್‌ಗಳಲ್ಲಿ ೬.೭೪ ರನ್‌ರೇಟ್ ಪ್ರಕಾರ ೪ ವಿಕೆಟ್ ನಷ್ಟಕ್ಕೆ ೫೦೬ ರನ್ ಬಾರಿಸಿದೆ. ಈ ಮೂಲಕ ೧೯೧೦ರಲ್ಲಿ ಆಸ್ಟ್ರೇಲಿಯಾ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ದಿನ ಬಾರಿಸಿದ್ದ ೬ ವಿಕೆಟ್‌ಗೆ ೪೯೪ ರನ್‌ಗಳ ದಾಖಲೆ ಮುರಿದರು. ಗುರುವಾರದ ಆಟ ಕೇವಲ ೭೫ ರನ್‌ಗಳಿಗೆ ಮುಕ್ತಾಯ ಕಂಡಿತ್ತು. ಒಂದು ವೇಳೆ ಪಂದ್ಯ ೯೦ ಓವರ್‌ಗಳ ತನಕ ನಡೆದಿದ್ದರೆ ಇಂಗ್ಲೆಂಡ್ ತಂಡ ಇನ್ನಷ್ಟು ರನ್‌ಗಳನ್ನು ಬಾರಿಸುತ್ತಿತ್ತು.
ಇಂಗ್ಲೆಂಡ್ ತಂಡದ ಪರ ನಾಲ್ಕು ಬ್ಯಾಟರ್‌ಗಳು ಶತಕ ಬಾರಿಸಿದ್ದಾರೆ. ಜಾಕ್ ಕ್ರಾವ್ಲಿ (೧೨೨), ಬೆನ್ ಡಕೆಟ್ (೧೦೭), ಒಲಿ ಪೋಪ್ (೧೦೮), ಹ್ಯಾರಿ ಬ್ರೂಕ್ (೧೦೧) ಶತಕಧಾರಿಗಳಾಗಿದ್ದಾರೆ.
ಮೊದಲ ದಿನದಲ್ಲಿ ಗರಿಷ್ಠ ರನ್‌ಗಳ ದಾಖಲೆಗಳು
ತಂಡ | ರನ್ | ವಿರುದ್ಧ | ವರ್ಷ |
ಇಂಗ್ಲೆಂಡ್ | 506/4 | ಪಾಕಿಸ್ತಾನ | 2022 |
ಆಸ್ಟ್ರೇಲಿಯಾ | 496/6 | ದಕ್ಷಿಣ ಆಫ್ರಿಕಾ | 1910 |
ಆಸ್ಟ್ರೇಲಿಯಾ | 482/5 | ದಕ್ಷಿಣ ಆಫ್ರಿಕಾ | 2012 |
ಇಂಗ್ಲೆಂಡ್ | 475/2 | ಆಸ್ಟ್ರೇಲಿಯಾ | 1934 |
ಇಂಗ್ಲೆಂಡ್ | 471/8 | ಭಾರತ | 1936 |
ಇದನ್ನೂ ಓದಿ | World Record | ಟೆಸ್ಟ್ ಕ್ರಿಕೆಟ್‌ನಲ್ಲಿ ನೂತನ ದಾಖಲೆ ಬರೆದ ಇಂಗ್ಲೆಂಡ್ ತಂಡ; ಏನದು ನೂತನ ದಾಖಲೆ?