Site icon Vistara News

ಟೆಸ್ಟ್​ ಕ್ರಿಕೆಟ್​ನಲ್ಲಿ ಬ್ಯಾಕ್ ಟು ಬ್ಯಾಕ್​ ದಾಖಲೆ ಬರೆಯುತ್ತಿರುವ ಸವ್ಯಸಾಚಿ ಕ್ರಿಕೆಟಿಗ ​ ವಿಲಿಯಮ್ಸನ್

Kane Williamson

ಆಕ್ಲೆಂಡ್​: ನ್ಯೂಜಿಲ್ಯಾಂಡ್​ನ ಸವ್ಯಸಾಚಿ ಕ್ರಿಕೆಟಿಗ ಕೇನ್​ ವಿಲಿಯಮ್ಸನ್(Kane Williamson)​ ಅವರು ಟೆಸ್ಟ್​ ಕ್ರಿಕೆಟ್​ನಲ್ಲಿ ಅಮೋಘ ಸಾಧನೆಗಳನ್ನು ಮಾಡುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಪಂದ್ಯದ ಎರಡೂ ಇನಿಂಗ್ಸ್​ನಲ್ಲಿಯೂ ಶತಕ ಬಾರಿಸಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

ವಿಶ್ವ ಟೆಸ್ಟ್​ ಶ್ರೇಯಾಂಕದಲ್ಲಿ ನಂ.1 ಆಟಗಾರನಾಗಿರುವ ಕೇನ್​ ವಿಲಿಯಮ್ಸನ್​(New Zealand batter Kane Williamson) ತನ್ನ ಖ್ಯಾತಿಗೆ ತಕ್ಕ ಪ್ರದರ್ಶನ ತೋರುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್​(New Zealand vs South Africa 1st Test) ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 118 ರನ್​ ಬಾರಿಸಿದರೆ, ದ್ವಿತೀಯ ಇನಿಂಗ್ಸ್​ನಲ್ಲಿ 109 ರನ್​ ಗಳಿಸಿದರು. ಈ ಮೂಲಕ ತಮ್ಮ ಟೆಸ್ಟ್‌ ಕ್ರಿಕೆಟ್‌ ಬಾಳ್ವೆಯಲ್ಲಿ 31ನೇ ಶತಕ ಪೂರ್ತಿಗೊಳಿಸಿದರು. ಇದರೊಂದಿಗೆ ಅತಿಹೆಚ್ಚು ಶತಕ ಗಳಿಸಿದವರ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್‌ನ ಶಿವನಾರಾಯಣ್ ಚಂದ್ರಪಾಲ್. ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್, ಇಂಗ್ಲೆಂಡ್‌ನ ಜೋ ರೂಟ್‌ರನ್ನು ಹಿಂದಿಕ್ಕಿದರು. ಇವರೆಲ್ಲರೂ ತಲಾ 30 ಶತಕ ಬಾರಿಸಿದ್ದಾರೆ.

ಗರಿಷ್ಠ ಟೆಸ್ಟ್ ಶತಕ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೇನ್​ ವಿಲಿಯಮ್ಸನ್​ 13ನೇ ಸ್ಥಾನದಲ್ಲಿದದ್ದಾರೆ. 51 ಟೆಸ್ಟ್ ಶತಕ ಬಾರಿಸಿರುವ ಭಾರತದ ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡುಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಜಾಕ್​ ಕಾಲೀಸ್ 45, ಆಸ್ಟ್ರೇಲಿಯದ ರಿಕಿ ಪಾಂಟಿಂಗ್ 41 ಶತಕಗಳನ್ನು ಬಾರಿಸಿ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದಿದ್ದಾರೆ.  ಪ್ರಸಕ್ತ ಸಾಲಿನ ಕ್ರಿಕೆಟಿಗರಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆ ಆಸ್ಟ್ರೇಲಿಯಾದ ಸ್ಟೀವನ್​ ಸ್ಮಿತ್​ ಹೆಸರಿನಲ್ಲಿದೆ ಅವರು 32* ಶತಕ ಬಾರಿಸಿದ್ದಾರೆ. ವಿಲಿಯಮ್ಸನ್​ 2ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ IND vs ENG: ಉಳಿದ ಮೂರು ಟೆಸ್ಟ್​ಗೆ ಇಂದು ಭಾರತ ತಂಡ ಪ್ರಕಟ; ಕೊಹ್ಲಿ, ರಾಹುಲ್​ ಆಗಮನ?

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟರ್‌ಗಳ ಪಟ್ಟಿ

ಆಟಗಾರದೇಶಶತಕ
ಸಚಿನ್​ ತೆಂಡೂಲ್ಕರ್​ಭಾರತ51
ಜಾಕ್ ಕಾಲಿಸ್ದಕ್ಷಿಣ ಆಫ್ರಿಕಾ45
ರಿಕಿ ಪಾಂಟಿಂಗ್​ಆಸ್ಟ್ರೇಲಿಯಾ41
ಕುಮಾರ ಸಂಗಕ್ಕಾರಶ್ರೀಲಂಕಾ38
ರಾಹುಲ್ ದ್ರಾವಿಡ್ಭಾರತ36
ಸುನಿಲ್ ಗವಾಸ್ಕರ್ಭಾರತ34
ಬ್ರಿಯಾನ್ ಲಾರಾವೆಸ್ಟ್‌ ಇಂಡೀಸ್34
ಮಹೇಲಾ ಜಯವರ್ಧನೆಶ್ರೀಲಂಕಾ34
ಅಲೆಸ್ಟರ್ ಕುಕ್ಇಂಗ್ಲೆಂಡ್​33
ಸ್ಟೀವನ್​ ಸ್ಮಿತ್​ಆಸ್ಟ್ರೇಲಿಯಾ32*
ಮಾರ್ಕ್​ ವಾಆಸ್ಟ್ರೇಲಿಯಾ32
ಕೇನ್ ವಿಲಿಯಮ್ಸನ್ನ್ಯೂಜಿಲ್ಯಾಂಡ್​31*
ಮ್ಯಾಥ್ಯೂ ಹೇಡನ್ಆಸ್ಟ್ರೇಲಿಯಾ30
ಜೋ ರೂಟ್ಇಂಗ್ಲೆಂಡ್30*
ಶಿವನಾರಾಯಣ್ ಚಂದ್ರಪಾಲ್ವೆಸ್ಟ್‌ ಇಂಡೀಸ್30
ಡಾನ್ ಬ್ರಾಡ್ಮನ್ಆಸ್ಟ್ರೇಲಿಯಾ30
ವಿರಾಟ್ ಕೊಹ್ಲಿಭಾರತ29*

ಪಂದ್ಯ ಗೆದ್ದ ಕಿವೀಸ್​


ದಕ್ಷಿಣ ಆಫ್ರಿಕಾ ವಿರುದ್ಧ ಮೌಂಟ್‌ ಮಾಂಗನಿಯಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂಜಿಲ್ಯಾಂಡ್​ 281 ರನ್​ಗಳ ಬೃಹತ್‌ ಗೆಲುವು ದಾಖಲಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ 349 ರನ್‌ಗಳ ದೊಡ್ಡ ಮುನ್ನಡೆ ಪಡೆದರೂ ದಕ್ಷಿಣ ಆಫ್ರಿಕಾ ಮೇಲೆ ಫಾಲೋ ಆನ್‌ ಹೇರದ 2ನೇ ಇನ್ನಿಂಗ್ಸ್‌ ಬ್ಯಾಟಿಂಗ್​ ನಡೆಸಿದ ಕಿವೀಸ್​ 4 ವಿಕೆಟ್​ ಕಳೆದುಕೊಂಡು 179 ರನ್‌ ಗಳಿಸಿ ಡಿಕ್ಲೇರ್​ ಘೋಷಿಸಿತು. ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 247 ರನ್​ಗೆ ಸರ್ವಪತನ ಕಂಡು ಶರಣಾಯಿತು.

Exit mobile version