Site icon Vistara News

‘ಲಖನೌ’ಗೆ ನೋ ಲಕ್; ಗುಜರಾತ್‌ಗೆ ಮೊದಲ ಗೆಲುವಿನ ಸಂಭ್ರಮ

ಈ ವರ್ಷದ ಹೊಸ ತಂಡಗಳಾದ ಗುಜರಾತ್ ಟೈಟಾನ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ನಡುವಿನ ಸಮರ ರೋಚಕವಾಗಿತ್ತು. ಲಖನೌ ಸೂಪರ್ ಜೈಂಟ್ಸ್ ಮೊದಲು ಬ್ಯಾಟಿಂಗ್ ಮಾಡಿ 158 ರನ್‌ಗಳನ್ನು ಗಳಿಸಿತ್ತು. ದೀಪಕ್ ಹೂಡಾ ಹಾಗೂ ಆಯೂಷ್ ಬದೋನಿ 50 ರನ್‌ಗಳ ಜೊತೆಯಾಟ ನಡೆಸಿ ತಂಡಕ್ಕೆ ಆಸರೆಯಾದರು.

ನಂತರ 159 ರನ್ ಚೇಸ್ ಮಾಡಲು ನಿಂತ ಗುಜರಾತ್ ತಂಡದ ಆರಂಭದ ಬ್ಯಾಟ್ಸ್‌ಮನ್‌ಗಳು ಲಖನೌ ಬೌಲಿಂಗ್ ದಾಳಿಗೆ ಶೀಘ್ರವೇ ತಮ್ಮ ವಿಕೆಟ್ ಒಪ್ಪಿಸಿದರು. ಗುಜರಾತ್ ತಂಡದ ಆಟಗಾರರು ಕೊನೇ ಕ್ಷಣದವರೆಗೂ ಹೋರಾಡಿ ರೋಚಕ ಗೆಲುವು ಸಾಧಿಸಿದರು. ಗುಜರಾತ್ ತಂಡದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ, ರಾಹುಲ್ ತೆವಾಟಿಯಾ, ಮಾಥ್ಯೂ ವೇಡ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಬೌಲಿಂಗ್‌ನಲ್ಲಿ ಕಮಾಲ್ ಮಾಡಿ ಗುಜರಾತ್ ತಂಡದ ಗೆಲುವಿಗೆ ಮುಖ್ಯ ಕಾರಣರಾದ ಮೊಹಮ್ಮದ್ ಶಮ್ಮಿ ಮ್ಯಾನ್ ಆಫ್ ದಿ ಮ್ಯಾಚ್‌ ಆದರು. ಮೊಹಮ್ಮದ್ ಶಮ್ಮಿ ಲಖನೌ ವಿರುದ್ಧ 3 ವಿಕೆಟ್ ಪಡೆದರು.

ಕೃಪೆ: IPL20.com

Exit mobile version