Site icon Vistara News

Pakistan Cricket Team : ಭಾರತದ ಔದಾರ್ಯ ನೆನೆದ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ

A former player of Pakistan cricket team who remembers India's generosity

#image_title

ನವ ದೆಹಲಿ: ತಮ್ಮ ಪತ್ನಿ ಆರೋಗ್ಯ ಸಮಸ್ಯೆಯಲ್ಲಿ ಇರುವಾಗ ಭಾರತದ ಅಧಿಕಾರಿಗಳು ಸಾಕಷ್ಟು ನೆರವು ನೀಡಿದ್ದಾರೆ ಎಂಬುದಾಗಿ ಪಾಕಿಸ್ತಾನ ತಂಡದ ಮಾಜಿ ಆಟಗಾರ (Pakistan Cricket Team) ವಾಸಿಮ್​ ಅಕ್ರಮ್​ ನೆನಪಿಸಿಕೊಂಡಿದ್ದಾರೆ. ತಮ್ಮ ಆತ್ಮಚರಿತ್ರೆ ಸುಲ್ತಾನ್​ ಎ ಮೆಮೋಯಿರ್​ ಪುಸ್ತಕದಲ್ಲಿ ಅವರು ಭಾರತೀಯರು ಹೃದಯವಂತರು ಎಂಬ ವಿಷಯವನ್ನು ಒತ್ತಿ ಹೇಳಿದ್ದಾರೆ. ತಮ್ಮ ಬಳಿ ವೀಸಾ ಇಲ್ಲದಿದ್ದರೂ ಅಲ್ಲಿನ ಅಧಿಕಾರಿಗಳು ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದರೂ ಎಂಬುದಾಗಿ ಅವರು ಹೇಳಿದ್ದಾರೆ.

ಪಾಕಿಸ್ತಾನ ತಂಡದ ಮಾಜಿ ನಾಯಕನ ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅದಕ್ಕಿಂತ ಮೊದಲು ಅವರ ಅನಾರೋಗ್ಯ ಹೆಚ್ಚಳವಾದಾಗ ಸಿಂಗಾಪುರಕ್ಕೆ ವಿಮಾನದ ಮೂಲಕ ಕರೆದೊಯ್ಯುತ್ತಿದ್ದರು. ಈ ವೇಳೆ ವಿಮಾನ ಇಂಧನ ಭರ್ತಿ ಮಾಡಲೆಂದು ಚೆನ್ನೈನಲ್ಲಿ ಇಳಿದಿತ್ತು. ಅದೇ ಸಂದರ್ಭದಲ್ಲಿ ಪತ್ನಿಯ ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು. ವಾಸ್ತವದಲ್ಲಿ ಅವರ ಬಳಿ ಸಿಂಗಾಪುರ ವೀಸಾ ಮಾತ್ರ ಇತ್ತು. ಹೀಗಾಗಿ ಭಾರತದಲ್ಲಿ ಇಳಿಯಲು ಅವರಿಗೆ ಅವಕಾಶ ಇರಲಿಲ್ಲ. ಆದರೆ, ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಮಾನವೀಯತೆಯ ಆಧಾರದಲ್ಲಿ ಅವರನ್ನು ಸ್ಥಳೀಯ ವಿಕ್ರಮ್​ ಆಸ್ಪತ್ರೆಗೆ ದಾಖಲಿಸಲು ಅವಕಾಶ ಕೊಟ್ಟಿದ್ದರು.

ನನ್ನ ಬಳಿ ಭಾರತದ ವೀಸಾ ಇರಲಿಲ್ಲ. ಆದರೆ ಪತ್ನಿಯ ಆರೋಗ್ಯ ಹದಗೆಟ್ಟ ಸಂದರ್ಭದಲ್ಲಿ ಅಲ್ಲಿನ ಅಧಿಕಾರಿಗಳು ವೀಸಾ ಇಲ್ಲದಿದ್ದರೂ ಪರ್ವಾಗಿಲ್ಲ. ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಕೊಡಿಸಿ ಎಂದರು. ವೀಸಾದ ಸಮಸ್ಯೆ ಆಗುವುದಿಲ್ಲವೇ ಎಂದು ಪ್ರಶ್ನೆ ಮಾಡಿದ್ದರೆ, ನಾವು ಮಾನವೀಯತೆಯ ಮೇಲೆ ನಿಮಗೆ ಬಿಡುತ್ತಿದ್ದೇವೆ ಎಂದು ಸಮಾಧಾನ ಹೇಳಿದರು ಎಂಬುದಾಗಿ ಇಮ್ರಾನ್​ ಖಾನ್ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.

ಇದನ್ನೂ ಓದಿ : Asia Cup 2023: ಏಷ್ಯಾಕಪ್ ಆಯೋಜನೆ ಕೈ ತಪ್ಪಿದರೆ ವಿಶ್ವಕಪ್‌ ಬಹಿಷ್ಕಾರ: ಪಿಸಿಬಿ ಬೆದರಿಕೆ

ಅಕ್ರಮ್​ ಅವರು ಬರೆದಿರುವ ಸುಲ್ರಾನ್​ ಎ ಮೆಮೊಯಿರ್​ನಲ್ಲಿ ಪಾಕಿಸ್ತಾನ ಕ್ರಿಕೆಟ್​ ತಂಡದ ಕುರಿತು ಸಾಕಷ್ಟು ವಿಚಾರಗಳು ದಾಖಲಾಗಿವೆ. ಜತೆಗೆ ವೈಯಕ್ತಿಕ ವಿಚಾರಗಳನ್ನೂ ಅವರು ಅಲ್ಲಿ ಹಂಚಿಕೊಂಡಿದ್ದಾರೆ.

Exit mobile version