Site icon Vistara News

Prithvi Shaw : ನಟಿ ಸಪ್ನಾ ಗಿಲ್​ ವಿರುದ್ಧ ಕೊಲೆ ಕೇಸ್​ ಕೂಡ ದಾಖಲು, ಮತ್ತೊಮ್ಮೆ ಜೈಲು ಸೇರುವ ಸಾಧ್ಯತೆ?

A murder case has also been registered against T Sapna Gill, the possibility of going to jail again?

#image_title

ಮುಂಬಯಿ: ನಟಿ ಹಾಗೂ ಸೋಶಿಯಲ್​ ಮೀಡಿಯಾ ಇನಫ್ಯುಯೆನ್ಸರ್​ ಸಪ್ನಾ ಗಿಲ್ ವಿರುದ್ಧ ಕ್ರಿಕೆಟರ್​ ಪೃಥ್ವಿ ಶಾ (Prithvi Shaw) ಗೆಳೆಯರೊಬ್ಬರು ಕೊಲೆ ಬೆದರಿಕೆ ಕೇಸ್​ ದಾಖಲಿದ್ದಾರೆ. ಪೃಥ್ವಿ ಮೇಲೆ ದಾಳಿ ನಡೆಸಿದ ಆರೋಪದಲ್ಲಿ ಜೈಲು ಸೇರಿ ಇದೀಗ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವರ ಅವರು ಮತ್ತೊಂದು ಬಾರಿ ಜೈಲು ಪಾಲಾಗುವ ಸಾಧ್ಯತೆಗಳಿವೆ. ಘಟನೆ ನಡೆದ ಸಂದರ್ಭದಲ್ಲಿ ಸಪ್ನಾ ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂಬುದಾಗಿ ಪೃಥ್ವಿ ಶಾ ಅವರ ಗೆಳೆಯ ಆಶೀಶ್​ ಎಂಬುವರು ದೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಫೆಬ್ರವರಿ 15ರಂದು ಗಲಾಟೆ ನಡೆದು ತಕ್ಷಣವೇ ಗಿಲ್​ ಹಾಗೂ ಆಕೆಯ ಸ್ನೇಹಿತರನ್ನು ಪೊಲೀಸರು ಅರೆಸ್ಟ್​ ಮಾಡಿದ್ದರು. ಅವರೆಲ್ಲರಿಗೂ ನ್ಯಾಯಾಂಗ ಬಂಧನ ವಿಧಿಸಿದ್ದ ಕೋರ್ಟ್​ ಬಳಿಕ ಜಾಮೀನು ನೀಡಿತ್ತು. ಇದೀಗ ಆಶೀಶ್ ಅವರು ಪ್ರತ್ಯೇಕ ದೂರು ದಾಖಲಿಸಿರುವ ಕಾರಣ ಮತ್ತೆ ನಟಿ ಹಾಗೂ ಆಕೆಯ ಗೆಳೆಯರ ಬಂಧನವಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ : Prithvi Shaw: ಪೃಥ್ವಿ ಶಾ ಕಾರಿನ ಮೇಲೆ ದಾಳಿ: ನಟಿ ಸಪ್ನಾ ಗಿಲ್ ಸೇರಿ ನಾಲ್ವರಿಗೆ 14 ದಿನ ನ್ಯಾಯಾಂಗ ಬಂಧನ

ಫೆಬ್ರವರಿ 15ರಂದು ಪೃಥ್ವಿ ಶಾ ಹಾಗೂ ಗೆಳೆಯರು ಮುಂಬಯಿಯ ಪಂಚತಾರಾ ಹೋಟೆಲೊಂದಕ್ಕೆ ಊಟಕ್ಕೆ ಹೋಗಿದ್ದರು. ಈ ವೇಳೆ ಅಲ್ಲಿದ್ದ ಸಪ್ನಾ ಗಿಲ್ ಹಾಗೂ ಸಹಚರರು ಸೆಲ್ಫಿಗಾಗಿ ಪೃಥ್ವಿಗೆ ದುಂಬಾಲು ಬಿದಿದ್ದಾರೆ. ಮೊದಲಿಗೆ ಪೃಥ್ವಿ ಒಪ್ಪಿಕೊಂಡಿದ್ದರು. ಆದರೆ, ಪದೇ ಪದೇ ಅವರು ಹಿಂಸೆ ಕೊಡಲು ಶುರು ಮಾಡಿದಾಗ ನಿರಾಕರಿಸಿ ಮುಂದೆ ನಡೆದಿದ್ದರು. ಈ ವೇಳೆ ಸಪ್ನಾ ಹಾಗೂ ಗೆಳೆಯರು ಪೃಥ್ವಿ ಶಾ ಅವರನ್ನು ನಿಂದಿಸಿ ಗಲಾಟೆ ಮಾಡಲು ಮುಂದಾಗಿದ್ದರು. ತಕ್ಷಣ ಹೋಟೆಲ್​ನ ಭದ್ರತಾ ಸಿಬ್ಬಂದಿ ಅವರನ್ನು ಹೊರಕ್ಕೆ ಕಳುಹಿಸಿದ್ದರು. ಹೊರಗಡೆ ಹೋದ ಸಪ್ನಾ ಹಾಗೂ ಗೆಳೆಯರು ಪೃಥ್ವಿ ಶಾ ಹೋಟೆಲ್​ನಲ್ಲಿ ಊಟ ಮುಗಿಸಿ ಹೊರಕ್ಕೆ ಬರುತ್ತಿದ್ದಂತೆ ಬೇಸ್​ಬಾಲ್​ ಬ್ಯಾಟ್​ನೊಂದಿಗೆ ಬೆನ್ನಟ್ಟಿ ಹಲ್ಲೆ ಮಾಡಿದ್ದರು. ಅವರ ಕಾರಿನ ಹಿಂಬದಿಯ ಗಾಜಿಗೂ ಹೊಡೆದಿದ್ದರು.

Exit mobile version