Site icon Vistara News

T20 Cricket : ಪಾಕಿಸ್ತಾನ ತಂಡಕ್ಕೆ ಮುಖಭಂಗ, ಅಫಘಾನಿಸ್ತಾನದಿಂದ ನೂತನ ದಾಖಲೆ

A new record for the Pakistan team, a new record from Afghanistan

#image_title

ಶಾರ್ಜಾ : ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಏಳು ವಿಕೆಟ್​​ಗಳಿಂದ ಸೋಲಿಸಿದ ಅಫಘಾನಿಸ್ತಾನ ತಂಡ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿಯನ್ನು ವಶಪಡಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ನೆರೆಯ ಪಾಕ್​ ವಿರುದ್ಧ ಮೊದಲ ಬಾರಿ ವಿಜಯ ಸಾಧಿಸಿದ ವಿಶ್ವ ದಾಖಲೆ ಬರೆದಿದ್ದ ಪಾಕ್​ ತಂಡ ಇದೀಗ ಸರಣಿ ಗೆಲವಿನ ದಾಖಲೆಯನ್ನು ಮಾಡಿತು. ಏತನ್ಮಧ್ಯೆ ಪಾಕಿಸ್ತಾನ ತಂಡ ದುರ್ಬಲ ಆಫ್ಘನ್​ ವಿರುದ್ದ ಸೋತು ತೀವ್ರ ಮುಖಭಂಗ ಅನುಭವಿಸಿದೆ.

ಶಾರ್ಜಾಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದಿದ 2ನೇ ಹಣಾಹಣಿಯಲ್ಲಿ ಟಾಸ್​ ಗೆದ್ದ ಪಾಕಿಸ್ತಾನ ತಂಡ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 130 ರನ್​ ಬಾರಿಸಿತು. ಸಾಧಾರಣ ಗುರಿ ಬೆನ್ನಟ್ಟಿದ ಅಫಘಾನಿಸ್ತಾನ ತಂಡ ಇನ್ನು ಒಂದು ಎಸೆತ ಬಾಕಿ ಇರುವಂತೆಯೇ 3 ವಿಕೆಟ್​ ಕಳೆದುಕೊಂಡು 133 ರನ್​ ಬಾರಿಸಿ ಗೆಲುವು ಸಾಧಿಸಿತು.

ಗುರಿ ಬೆನ್ನಟ್ಟಲು ಅರಂಭಿಸಿ ಅಫಘಾನಿಸ್ತಾನ ತಂಡ ಬಹುಬೇಗ ಉಸ್ಮಾನ್‌ ಘನಿ ಅವರ ವಿಕೆಟ್‌ ಅನ್ನು ಕಳೆದುಕೊಂಡಿತು. ಆದರೆ, ಆರಂಭಿಕ ಬ್ಯಾಟ್ಸ್‌ಮನ್‌ ರಹಮಾನುಲ್ಹಾ ಗುರ್ಬಜ್ ಅವರು ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಎದುರಿಸಿದ 49 ಎಸೆತಗಳಲ್ಲಿ 44 ರನ್‌ ಗಳಿಸಿದರು ಹಾಗೂ ಇಬ್ರಾಹಿಂ ಜದ್ರಾನ್​ ಅವರೊಂದಿಗೆ 56 ರನ್ ಜೊತೆಯಾಟವನ್ನು ನೀಡಿದರು. ಅವರು 40 ಎಸೆತಗಳಲ್ಲಿ 38 ರನ್​ ಬಾರಿಸಿದರು. ನಜೀಬುಲ್ಲಾ ಜದ್ರಾನ್​ ಕೂಡ ಅಜೇಯ 23 ರನ್​ ಬಾರಿಸಿದರು. ಮೊಹಮ್ಮದ್ ನಬಿ 9 ಎಸೆತಗಳಲ್ಲಿ 14 ರನ್​ ಕೊಡುಗೆ ಕೊಟ್ಟರು.

ಇದನ್ನೂ ಓದಿ : PAK VS AFG: ಪಾಕಿಸ್ತಾನ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಅಫಘಾನಿಸ್ತಾನ

ಅದಕ್ಕಿಂದ ಮೊದಲು ಬ್ಯಾಟ್​ ಮಾಡಿದ ಪಾಕಿಸ್ತಾನ ತಂಡ ಅಪಘಾನಿಸ್ತಾನದ ಬೌಲರ್​ಗಳ ಅಬ್ಬರಕ್ಕೆ ಮಂಕಾಯಿತು. ಆರಂಭಿಕ ಬ್ಯಾಟರ್​ ಸಯೀಮ್​ ಸೈಯದ್ ಶೂನ್ಯಕ್ಕೆ ಔಟಾದರೆ, ಮೊಹಮ್ಮದ್​ ಹ್ಯಾರಿಸ್​ 15 ರನ್​ ವಿಕೆಟ್ ಒಪ್ಪಿಸಿದರು. ಅಬ್ದುಲ್ಲಾ ಶಫೀಖ್​ ಕೂಡ ಶೂನ್ಯ ಸುತ್ತಿದರು. ಖಾತೆ ತೆರೆಯುವ ಮುನ್ನವೇ 2 ವಿಕೆಟ್​ ನಷ್ಟ ಮಾಡಿಕೊಂಡ ಪಾಕ್​ ತಂಡ 20 ರನ್​ ಗಳಾಗುವಷ್ಟರಲ್ಲಿ ಮೂರನೇ ವಿಕೆಟ್​ ನಷ್ಟ ಮಾಡಿಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಇಮಾದ್ ವಾಸಿಮ್​ 64 ರನ್ ಬಾರಿಸಿದರೆ ತಯ್ಯಬ್​ ತಾಹಿರ್​ 13 ರನ್​ ಮಾಡಿ ಔಟಾದರು. ಕೊನೆಯಲ್ಲಿ ಶದಾಬ್​ ಖಾನ್ 32 ರನ್ ಬಾರಿಸಿ ಸ್ಪರ್ಧಾತ್ಮಕ ಮೊತ್ತ ಪೇರಿಸಲು ತಂಡಕ್ಕೆ ನೆರವಾದರು.

ಅಫಘಾನಿಸ್ತಾನ ಪರ ಬೌಲಿಂಗ್​ನಲ್ಲಿ ಫಜಲಖ್​ ಪಾರೂಕಿ 19 ರನ್​ ವೆಚ್ಚದಲ್ಲಿ 2 ವಿಕೆಟ್​ ಪಡೆದು ಮಿಂಚಿದರು.

Exit mobile version