Site icon Vistara News

INDvsNZ | ಗತಕಾಲದ ಯೋಜನೆಯಿಂದ ಸರಣಿ ಗೆಲುವು ಅಸಾಧ್ಯ; ಭಾರತ ತಂಡವನ್ನು ತೆಗಳಿದ ಇಂಗ್ಲೆಂಡ್‌ ಕ್ರಿಕೆಟಿಗ

indvsnz

ಆಕ್ಲೆಂಡ್‌: ಭಾರತ ತಂಡದ ನೀಡಿದ್ದ 307 ರನ್‌ಗಳ ಗುರಿಯನ್ನು ನ್ಯೂಜಿಲೆಂಡ್ ತಂಡ ಇನ್ನೂ ೧೭ ಎಸೆತಗಳು ಬಾಕಿ ಇರುವಂತೆಯೇ ಮೀರಿತ್ತು. ಈ ಮೂಲಕ ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡಕ್ಕೆ ಹೀನಾಯ ಸೋಲು ಎದುರಾಯಿತು ಹಾಗೂ ಸರಣಿಯಲ್ಲಿ ೦-೧ ಹಿನ್ನಡೆ ಉಂಟಾಯಿತು. ಭಾರತ ನೀಡಿದ್ದ ಗುರಿಯನ್ನು ನ್ಯೂಜಿಲೆಂಡ್‌ ತಂಡ ಸುಲಭವಾಗಿ ಚೇಸ್‌ ಮಾಡಲು ಟಾಮ್‌ ಲೇಥಮ್ ಅವರ ಅಜೇಯ ೧೪೫ ರನ್‌ ಹಾಗೂ ನಾಯಕ ಕೇನ್‌ ವಿಲಿಯಮ್ಸನ್‌ ಅವರು ಔಟಾಗದೇ ಪೇರಿಸಿದ ೯೪ ರನ್‌ಗಳು ನೆರವಾದವು. ಇವರಿಬ್ಬರು ೨೨೧ ರನ್‌ಗಳ ಜತೆಯಾಟಕ್ಕೆ ಭಾರತದ ಬೌಲರ್‌ಗಳು ನಿರುತ್ತರರಾದರು.

ಶಿಖರ್‌ ಧವನ್‌ ನೇತೃತ್ವದ ಭಾರತ ತಂಡಕ್ಕೆ ಈ ಸೋಲು ಒತ್ತಡ ತಂದಿದೆ. ಮುಂದಿನೆರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡ ಸೃಷ್ಟಿಸಿದೆ. ಏತನ್ಮಧ್ಯೆ, ಭಾರತ ತಂಡ ಶುಕ್ರವಾರದ ಪಂದ್ಯದಲ್ಲಿ ರೂಪಿಸಿದ್ದ ರಣ ತಂತ್ರ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್‌ ವಾನ್ ಅವರ ಟೀಕೆಗೆ ಗುರಿಯಾಗಿದೆ. ಗತಕಾಲದ ಯೋಜನೆಯನ್ನು ಇಟ್ಟುಕೊಂಡು ಸರಣಿ ಗೆಲ್ಲುವುದು ಅಸಾಧ್ಯ ಎಂದಿದ್ದಾರೆ. ಪ್ರಮುಖವಾಗಿ ನಾಯಕ ಧವನ್‌ ಹಾಗೂ ಕೋಚ್‌ ವಿವಿಎಸ್ ಲಕ್ಷ್ಮಣ್‌ ಅವರನ್ನು ತೆಗಳಿದ್ದಾರೆ.

ಶುಕ್ರವಾರದ ಪಂದ್ಯದಲ್ಲಿ ಭಾರತ ತಂಡ ಐದು ಬೌಲರ್‌ಗಳ ಆಯ್ಕೆಯನ್ನು ಇಟ್ಟುಕೊಂಡಿತ್ತು. ಅರ್ಶ್‌ದೀಪ್‌, ಉಮ್ರಾನ್‌ ಮಲಿಕ್‌, ಶಾರ್ದುಲ್‌ ಠಾಕೂರ್‌, ವಾಷಿಂಗ್ಟನ್‌ ಸುಂದರ್‌ ಹಾಗೂ ಯಜ್ವೇಂದ್ರ ಚಹಲ್‌ ಅವಕಾಶ ಪಡೆದುಕೊಂಡಿದ್ದರು. ಆದರೆ, ಮೈಕೆಲ್‌ ವಾನ್‌ ಪ್ರಕಾರ ಇದು ಕೆಟ್ಟ ರಣತಂತ್ರವಾಗಿದೆ. ಕನಿಷ್ಠ ೬ ಅಥವಾ ೭ ಬೌಲರ್‌ಗಳ ಆಯ್ಕೆ ಇರಬೇಕಿತ್ತು ಎಂಬುದಾಗಿ ಅವರು ಹೇಳಿದ್ದಾರೆ. ಕೇವಲ ಐದು ಬೌಲರ್‌ಗಳನ್ನು ಆಡಲು ಇಳಿಸಿ ಗೆಲ್ಲಲು ಮುಂದಾಗಿರುವ ವಿವಿಎಸ್‌ ಲಕ್ಷ್ಮಣ್‌ ಹಾಗೂ ಧವನ್‌ ಯೋಜನೆ ಕಳಪೆಯಾಗಿದೆ ಎಂಬುದಾಗಿ ಅವರು ಟ್ವೀಟ್‌ ಮಾಡಿದ್ದಾರೆ.

ಇದನ್ನೂ ಓದಿ | IND VS NZ | ಲ್ಯಾಥಮ್‌, ವಿಲಿಯಮ್ಸನ್‌ ಬ್ಯಾಟಿಂಗ್‌ ಆರ್ಭಟಕ್ಕೆ ಮಂಕಾದ ಟೀಮ್‌ ಇಂಡಿಯಾ; 7 ವಿಕೆಟ್‌ ಸೋಲು

Exit mobile version