Site icon Vistara News

IND vs PAK | 100ನೇ ಪಂದ್ಯವಾಡುತ್ತಿರುವ ವಿರಾಟ್‌ ಕೊಹ್ಲಿಗೆ ಶುಭಾಶಯಗಳ ಸುರಿಮಳೆ

ind vs pak

ದುಬೈ : ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್‌ ಪಂದ್ಯದೊಂದಿಗೆ ೧೦೦ನೇ ಟಿ೨೦ ಅಂತಾರಾಷ್ಟ್ರೀಯ ಪಂದ್ಯವಾಡಿದ ಭಾರತ ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿಗೆ ಹಿರಿಯ, ಕರಿಯ ಕ್ರಿಕೆಟಿಗರನೇಕರು ಶುಭಾಶಯಗಳನ್ನು ಕೋರಿದ್ದಾರೆ. ವಿರಾಟ್‌ ಕೊಹ್ಲಿಗೆ ಶುಭಾಶಯ ಕೋರುತ್ತಿರುವ ವಿಡಿಯೊವನ್ನು ಬಿಸಿಸಿಐ ತನ್ನ ಟ್ವೀಟ್‌ ಖಾತೆಯಲ್ಲಿ ಪ್ರಕಟಿಸಿದೆ. ಭಾರತ ತಂಡದ ನಾಯಕ ರೋಹಿತ್‌ ಶರ್ಮ, ಉಪನಾಯಕ ಕೆ ಎಲ್‌ ರಾಹುಲ್‌, ಸೂರ್ಯಕುಮಾರ್‌ ಯಾದವ್‌ ಸೇರಿದಂತೆ ಎಲ್ಲರೂ ಶುಭಾಶಯ ಕೋರಿದ್ದಾರೆ.

ವಿರಾಟ್‌ ಕೊಹ್ಲಿ ೯೯ ಪಂದ್ಯಗಳ ೯೧ ಇನಿಂಗ್ಸ್‌ಗಳಲ್ಲಿ ೩೩೦೮ ರನ್‌ ಬಾರಿಸಿದ್ದಾರೆ. ಅಜೇಯ ೯೪ ರನ್‌ಗಳು ಈ ಮಾದರಿಯಲ್ಲಿ ವಿರಾಟ್‌ ಕೊಹ್ಲಿ ಅವರ ಗರಿಷ್ಠ ಮೊತ್ತವಾಗಿದ್ದು, ೩೦ ಅರ್ಧ ಶತಕಗಳನ್ನು ಬಾರಿಸಿದ್ದಾರೆ. ವಿರಾಟ್‌ ಕೊಹ್ಲಿ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ನೂರು ಪಂದ್ಯವಾಡಿದ ದಾಖಲೆ ಮಾಡಿದ್ದಾರೆ.

ಇದನ್ನೂ ಓದಿ | Asia Cup- 2022 | ಮ್ಯಾಕ್ಸ್‌ವೆಲ್‌ ರೀತಿ ರಿವರ್ಸ್‌ ಸ್ವೀಪ್‌ ಮಾಡಿ ಎಲ್ಲರನ್ನೂ ಚಕಿತಗೊಳಿಸಿದ ವಿರಾಟ್‌ ಕೊಹ್ಲಿ

Exit mobile version