ಹೈದರಾಬಾದ್: ಭಾರತ ಹಾಗೂ ಆಸ್ಟ್ರೇಲಿಯಾ ಮಧ್ಯೆ ಸೆಪ್ಟೆಂಬರ್ ೨೫ರಂದು ನಡೆಯುವ ಮೂರನೇ ಟಿ-೨೦ ಪಂದ್ಯದ ಟಿಕೆಟ್ ಖರೀದಿಗೆ ಹೈದರಾಬಾದ್‌ನಲ್ಲಿ ಕಾಲ್ತುಳಿತ (Stampede) ಉಂಟಾಗಿದೆ. ಹೈದರಾಬಾದ್‌ನ ರಾಜೀವ್ ಗಾಂಧಿ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದ್ದು, ಟಿಕೆಟ್ ಖರೀದಿಸಲು ಜನ ಜಿಮ್‌ಖಾನಾ ಸ್ಟೇಡಿಯಂ ಬಳಿ ನೆರೆದಿದ್ದಾಗ ಕಾಲ್ತುಳಿತ ಸಂಭವಿಸಿದೆ.
ನೂರಾರು ಜನ ಏಕಾಏಕಿ ಟಿಕೆಟ್ ಕೌಂಟರ್‌ನಲ್ಲಿ ನಿಂತಿದ್ದು, ಈ ವೇಳೆ ನಾ ಮುಂದು, ತಾ ಮುಂದು ಎಂದು ಖರೀದಿಗೆ ಮುಂದಾಗಿದ್ದಾರೆ. ಹೀಗೆ ಜನಜಂಗುಳಿಯು ಅವಸರ ಮಾಡಿದ ಕಾರಣ ಕಾಲ್ತುಳಿತ ಉಂಟಾಗಿ ನಾಲ್ವರು ಗಾಯಗೊಂಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದ್ದು, ಎರಡನೇ ಟಿ-೨೦ ಪಂದ್ಯವು ಶುಕ್ರವಾರ ನಡೆಯಲಿದೆ.
ಇದನ್ನೂ ಓದಿ | ಚೆಂಡಿಗೆ ಎಂಜಲು ಬಳಸುವ ಪದ್ಧತಿ ಸಂಪೂರ್ಣ ನಿಷೇಧ, ಕ್ರಿಕೆಟ್ ನಿಯಮಗಳಲ್ಲಿ ಬದಲಾವಣೆ ತಂದ ಐಸಿಸಿ