Site icon Vistara News

Team India | ಮೊಹಾಲಿ ಸ್ಟೇಡಿಯಮ್‌ನ ಎರಡು ಗ್ಯಾಲರಿಗಳಿಗೆ ಯುವರಾಜ್‌, ಹರ್ಭಜನ್‌ ಹೆಸರು ನಾಮಕರಣ

yuvaraj singh

ಮೊಹಾಲಿ : ಮಂಗಳವಾರ ನಡೆದ ಭಾರತ (Team India) ಹಾಗೂ ಪ್ರವಾಸಿ ಆಸ್ಟ್ರೇಲಿಯಾ ತಂಡಗಳ ನಡುವಿನ ಟಿ೨೦ ಸರಣಿಯ ಮೊದಲ ಪಂದ್ಯಕ್ಕೂ ಮುಂಚೆ ಭಾರತದ ಇಬ್ಬರು ಮಾಜಿ ಕ್ರಿಕೆಟಿಗರಿಗೆ ಗೌರವ ಸಲ್ಲಿಸಲಾಯಿತು. ಪಂಜಾಬ್‌ನವರಾದ ಹರ್ಭಜನ್‌ ಸಿಂಗ್‌ ಹಾಗೂ ಯುವರಾಜ್‌ ಸಿಂಗ್‌ ಈ ಇಬ್ಬರು ಆಟಗಾರರು. ಇವರಿಬ್ಬರ ಹೆಸರನ್ನು ಮೊಹಾಲಿ ಸ್ಟೇಡಿಯಮ್‌ನ ಎರಡು ಪ್ರೇಕ್ಷಕರ ಗ್ಯಾಲರಿಗೆ ನಾಮಕರಣ ಮಾಡಲಾಯಿತು. ಪಂಜಾಬ್‌ ಸಿಂಬ್‌ ಭಗವಂತ್‌ ಸಿಂಗ್‌ ಮಾನ್‌ ಅವರ ಉಪಸ್ಥಿತಿಯಲ್ಲಿ ನಾಮಕರಣ ನಡೆಯಿತು.

ಯುವರಾಜ್‌ ಸಿಂಗ್‌ ಭಾರತ ತಂಡ ಕಂಡಿರುವ ಇದುವರೆಗಿನ ಅತ್ಯಂತ ಯಶಸ್ವಿ ಆಟಗಾರ ಎನಿಸಿಕೊಂಡಿದ್ದು, ಹಲವು ದಾಖಲೆಗಳನ್ನು ಹೊಂದಿದ್ದಾರೆ. 40 ಟೆಸ್ಟ್‌, ೩೦೪ ಏಕ ದಿನ ಪಂದ್ಯಗಳು ಮತ್ತು ೨೮ ಟಿ೨೦ ಪಂದ್ಯಗಳನ್ನು ಭಾರತ ಪರವಾಗಿ ಅವರು ಆಡಿದ್ದಾರೆ. ಈ ಸಾಧನೆಗಾಗಿ ಅವರ ಹೆಸರನ್ನು ಮೊಹಾಲಿಯ ಸ್ಟೇಡಿಯಮ್‌ಗೆ ಇಡಲಾಯಿತು.

ಆಫ್ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಅವರೂ ಭಾರತ ಕ್ರಿಕೆಟ್‌ ತಂಡ ದೈತ್ಯ ಬೌಲರ್‌. ೧೦೩ ಟೆಸ್ಟ್, ೨೩೬ ಏಕ ದಿನ ಪಂದ್ಯಗಳು ಹಾಗೂ ೨೮ ಟಿ೨೦ ಪಂದ್ಯಗಳನ್ನು ಅವರು ಭಾರತ ತಂಡದ ಪರ ಆಡಿದ್ದಾರೆ. ಹೀಗಾಗಿ ಅವರ ಹೆಸರನ್ನೂ ಸ್ಟೇಡಿಯಮ್‌ಗೆ ಇಡಲಾಯಿತು.

“ಪಿಸಿಎ ಸ್ಟೇಡಿಯಮ್‌ಗೆ ಬರಲು ಅತ್ಯಂತ ಖುಷಿಯಾಗುತ್ತಿದೆ. ಮೊದಲ ಬಾರಿ ಬಿಸಿಸಿಐ ಬ್ಲೇಶರ್‌ ಹಾಕಿಕೊಂಡು ಕಾಣಿಸಿಕೊಳ್ಳುವುದು ಕೂಡ ಖುಷಿಯ ಸಂಗತಿ. ನನ್ನ ಮಾತೃ ಸಂಸ್ಥೆಯ ಮೂಲಕ ಸ್ಟೇಡಿಯಮ್‌ಗೆ ನನ್ನ ಹೆಸರು ನಾಮಕರಣ ಮಾಡುತ್ತಿರುವುದು ಅತ್ಯಂತ ಸಂತಸದ ಸಂಗತಿ,” ಎಂದು ಕಾರ್ಯಕ್ರಮದ ವೇಳೆ ಹಾಜರಿದ್ದ ಯುವರಾಜ್‌ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ | IND vs AUS | 200 ಪ್ಲಸ್‌ ರನ್‌ ಪೇರಿಸಿದ್ದರೂ ಟೀಮ್‌ ಇಂಡಿಯಾಗೆ ಗೆಲುವು ಸಿಗಲಿಲ್ಲ ಯಾಕೆ?

Exit mobile version