ಅಹಮದಾಬಾದ್: ಹಿಮಾಚಲ ಪ್ರದೇಶ ತಂಡದ ಕ್ರಿಕೆಟ್ ಆಟಗಾರ ಸಿದ್ಧಾರ್ಥ್ ಶರ್ಮಾ ಜನವರಿ 12ರಂದು ಗುಜರಾತ್ನಲ್ಲಿ ನಿಧನ (Cricketer Death) ಹೊಂದಿದ್ದಾರೆ. ರಣಜಿ ಟ್ರೋಫಿಗಾಗಿ ತಂಡದೊಂದಿಗೆ ಗುಜರಾತ್ಗೆ ಬಂದಿದ್ದ ಅವರು ಅಸೌಖ್ಯದಿಂದ ಆಸ್ಪತ್ರೆ ಸೇರಿದ್ದರು. 28 ವರ್ಷದ ಅವರಿಗೆ ಕಳೆದ ಎರಡು ವಾರಗಳಿಂದ ಅವರಿಗೆ ಚಿಕಿತ್ಸೆ ನೀಡಲಾಗಿದ್ದರೂ ಗುಣಮುಖರಾಗದೇ ನಿಧನ ಹೊಂದಿದ್ದಾರೆ. ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ಯುವ ಪ್ರತಿಭೆಯ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಸಿದ್ಧಾರ್ಥ ಶರ್ಮ ಅವರು ವಿಜಯ್ ಹಜಾರೆ ಟ್ರೋಫಿ ಗೆದ್ದ ಹಿಮಾಚಲ ತಂಡದ ಸದಸ್ಯರಾಗಿದ್ದು, ಅವರ ಕೊನೇ ಸಾಧನೆಯಾಗಿದೆ. ವಡೋದರಾದಲ್ಲಿ ಕಳೆದ ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಅವರು ವೆಂಟಿಲೇಟರ್ ಸಹಾಯದಿಂದ ಬದುಕಿದ್ದರು. ಆದರೆ ಗುರುವಾರ ರಾತ್ರಿ ನಿಧನ ಹೊಂದಿದ್ದಾರೆ.
ಉನಾದಲ್ಲಿ ಜನಿಸಿದ ಸಿದ್ಧಾರ್ಥ್ ಶರ್ಮಾ ಅವರ ವೇಗದ ಬೌಲರ್ ಆಗಿ ದೇಶೀಯ ಕ್ರಿಕೆಟ್ ವೃತ್ತಿ ಕಡಿಮೆ ಅವಧಿಯದ್ದಾಗಿತ್ತು. ಐದು ವರ್ಷಗಳ ಅವಧಿಯಲ್ಲಿ ಅವರು ಹಿಮಾಚಲ ತಂಡದ ಪರ ಒಂದು ಟಿ20 ಪಂದ್ಯ, ಆರು ಪ್ರಥಮ ದರ್ಜೆ ಪಂದ್ಯಗಳು ಹಾಗೂ ಲಿಸ್ಟ್ ಎ ಪಂದ್ಯಗಳಲ್ಲಿ ಆಡಿದ್ದರು. ಕಳೆದ ಡಿಸೆಂಬರ್‌ನಲ್ಲಿ ಕೋಲ್ಕೊತಾದ ಈಡನ್ ಗಾರ್ಡನ್ಸ್‌ನಲ್ಲಿ ಬೆಂಗಾಲ್ ವಿರುದ್ಧ ಅವರು ಕೊನೇ ಪಂದ್ಯದಲ್ಲಿ ಆಡಿದ್ದರು. ಅಲ್ಲಿ ಅವರು ಮೊದಲ ಇನ್ನಿಂಗ್ಸ್‌ನಲ್ಲಿ ಐದು ಎರಡನೇ ಇನಿಂಗ್ಸ್ನಲ್ಲಿ ಎರಡು ವಿಕೆಟ್ಗಳನ್ನು ಕಬಳಿಸಿದ್ದರು.
ಇದನ್ನೂ ಓದಿ | Roger Binny | ಕನ್ನಡಿಗ ರೋಜರ್ ಬಿನ್ನಿ ಬಿಸಿಸಿಐ ಅಧ್ಯಕ್ಷರಾಗಿ ಅವಿರೋಧ ಆಯ್ಕೆ