Site icon Vistara News

Prithvi Shaw selfie controversy : ಪೃಥ್ವಿ ಶಾ ವಿರುದ್ಧ ದೌರ್ಜನ್ಯ ಆರೋಪ ಹೊರಿಸಿದ ಯುವತಿ

pritvi sha

#image_title

ಮುಂಬಯಿ: ಯುವ ಕ್ರಿಕೆಟಿಗ ಪೃಥ್ವಿ ಶಾ ಅವರ ಕಾರಿಗೆ ಮೇಲೆ ಗುಂಪೊಂದು ದಾಳಿ ನಡೆಸಿರುವ ಪ್ರಕರಣ (Prithvi Shaw selfie controversy) ಮತ್ತೊಂದು ತಿರುವು ಪಡೆದುಕೊಂಡಿದ್ದು, ಕ್ರಿಕೆಟರ್​ ನಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂಬುದಾಗಿ ಆ ಗುಂಪಿನಲ್ಲಿದ್ದ ಯುವತಿ ಆರೋಪಿಸಿದ್ದಾರೆ. ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ಪೊಲೀಸರ ವಶದಲ್ಲಿರುವ ಯುವತಿ ಹೇಳಿಕೆ ಕೊಟ್ಟಿದ್ದಾರೆ.

ಬುಧವಾರ ರಾತ್ರಿ ಘಟನೆ ನಡೆದಿದ್ದು, ಎಂಟು ಮಂದಿಯ ಗುಂಪೊಂದು ಪೃಥ್ವಿ ಶಾ ಅವರ ಗೆಳೆಯರು ಪ್ರಯಾಣ ಮಾಡುತ್ತಿದ್ದ ಕಾರಿನ ಮೇಲೆ ದಾಳಿ ನಡೆಸಿದ್ದರು ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಒಶಿವಾರ ಠಾಣೆಯ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆ ಗುಂಪಿನಲ್ಲಿದ್ದ ಸೋಶಿಯಲ್​ ಮೀಡಿಯಾ ಇನ್​ಫ್ಲುಯೆನ್ಸರ್​ ಸಪ್ನಾ ಗಿಲ್​ ಎಂಬುವರು ಕ್ರಿಕೆಟರ್ ತಮ್ಮ ಮೇಲೆಯೇ ದೌರ್ಜನ್ಯ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ವಿಡಿಯೊಗಳನ್ನು ಕೂಡ ಶೇರ್​ ಮಾಡಲಾಗಿದೆ.

ಪೃಥ್ವಿ​ ಮೇಲೆ ದಾಳಿ ಮಾಡಿದ್ದು ಯಾರು?

ಪೃಥ್ವಿ ಶಾ ತಮ್ಮ ಗೆಳೆಯರ ಜತೆ ಪಂಚತಾರಾ ಹೋಟೆಲೊಂದಕ್ಕೆ ರಾತ್ರಿಯ ಊಟಕ್ಕೆ ತೆರಳಿದ್ದಾಗ ಎಂಟು ಮಂದಿಯ ಗುಂಪು ಅವರ ಬಳಿ ಸೆಲ್ಫಿಗೆ ಮನವಿ ಮಾಡಿತ್ತು. ಪೃಥ್ವಿ ಶಾ ಆರಂಭದಲ್ಲಿ ಅದಕ್ಕೆ ಒಪ್ಪಿದ್ದರು. ಆದರೆ ಸಪ್ನಾ ಗಿಲ್​ ಇನ್ನಷ್ಟು ಫೊಟೋಗಳಿಗೆ ಮನವಿ ಮಾಡಿದಾಗ ಅವರು ನಿರಾಕರಿಸಿದ್ದರು ಎನ್ನಲಾಗಿದೆ. ಈ ವೇಳೆ ಅವರು ಅಲ್ಲಿ ಗಲಾಟೆ ಮಾಡಿದ್ದರು. ಬಳಿಕ ಪೃಥ್ವಿ ಹೋಟೆಲ್​ ಸಿಬ್ಬಂದಿಯನ್ನು ಕರೆಸಿ ಆ ಗುಂಪನ್ನು ಅಲ್ಲಿಂದ ತೆರವುಗೊಳಿಸುವಂತೆ ಮನವಿ ಮಾಡಿದ್ದರು.

ಇದನ್ನೂ ಓದಿ : Prithvi Shaw: ಸೆಲ್ಫಿ ನಿರಾಕರಿಸಿದ್ದಕ್ಕೆ ಪೃಥ್ವಿ ಶಾ ಕಾರಿನ ಮೇಲೆ ದಾಳಿ; 8 ಮಂದಿ ವಿರುದ್ಧ ಪ್ರಕರಣ ದಾಖಲು

ಪೃಥ್ವಿ ಮತ್ತು ಗೆಳೆಯ ಗುಂಪು ಊಟ ಮುಗಿಸಿ ವಾಪಸ್​ ಬರುವಾಗ ಬೇಸ್​ಬಾಲ್​ ಬ್ಯಾಟ್​ನೊಂದಿಗೆ ಕಾದು ಕುಳಿತಿದ್ದ ಅವರೆಲ್ಲರೂ ಕಾರಿನ ಮೇಲೆ ದಾಳಿ ಮಾಡಿದ್ದರು. ಬಳಿಕ ಪೊಲೀಸರು ಬಂದು ಅವರೆಲ್ಲರನ್ನೂ ಸ್ಥಳದಿಂದ ತೆರವು ಮಾಡಿದ್ದರು.

Exit mobile version