ಕಾನ್ಸ್ (ಆಸ್ಟ್ರೇಲಿಯಾ) : ಆಸ್ಟ್ರೇಲಿಯಾ ತಂಡದ ಓಪನಿಂಗ್ ಬ್ಯಾಟರ್ ಹಾಗೂ ಸೀಮಿತ ಓವರ್‌ಗಳ ತಂಡದ ನಾಯಕ ಆರೋನ್ ಫಿಂಚ್, ಏಕ ದಿನ ಮಾದರಿಯ ಕ್ರಿಕೆಟ್‌ಗೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯ ಕಾಣುತ್ತಿರುವ ಹಿನ್ನೆಲೆಯಲ್ಲಿ ಅವರು ನಿವೃತ್ತಿ ಘೋಷಿಸಿದ್ದಾರೆ.
೩೫ ವರ್ಷದ ಹಿರಿಯ ಆಟಗಾರ ಭಾನುವಾರ ತಮ್ಮ ಕೊನೇ ಪಂದ್ಯವನ್ನು ನ್ಯೂಜಿಲೆಂಡ್ ವಿರುದ್ಧ ಆಡಲಿದ್ದಾರೆ. ಅದು ಅವರ ೧೪೬ನೇ ಪಂದ್ಯವಾಗಿದೆ. ೫೦ ಓವರ್‌ಗಳ ಮಾದರಿಯಲ್ಲಿ ಅವರು ಒಟ್ಟಾರೆ ೫೪೦೧ ರನ್‌ಗಳನ್ನು ಬಾರಿಸಿದ್ದಾರೆ. ೧೭ ಶತಕಗಳನ್ನು ಬಾರಿಸಿರುವರ ಅವರು ರಿಕಿ ಪಾಂಟಿಂಗ್ (೨೯), ಡೇವಿಡ್ ವಾರ್ನರ್, ಮಾರ್ಕ್‌ವಾ (೧೮) ನಂತರದ ಸ್ಥಾನದಲ್ಲಿದ್ದಾರೆ. ಫಿಂಚ್ ಅವರು ಮುಂದಿನ ಟಿ೨೦ ವಿಶ್ವ ಕಪ್‌ಗೆ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ.
“ಆಸ್ಟ್ರೇಲಿಯಾ ಏಕ ದಿನ ತಂಡದ ಭಾಗವಾಗಿರಲು ನಾನು ಅದೃಷ್ಟ ಮಾಡಿದ್ದೇನೆ. ಅದೇ ರೀತಿ ನನ್ನ ಜತೆ ಆಡಿದವರು ಹಾಗೂ ನನಗೆ ಬೆಂಬಲ ನೀಡಿದವರಿಗೆ ಆಭಾರಿಯಾಗಿದ್ದೇನೆ,” ಎಂದು ವಿದಾಯದ ವೇಳೆ ಫಿಂಚ್ ನುಡಿದಿದ್ದಾರೆ.
ಆರೋನ್ ಫಿಂಚ್ ನಾಯಕತ್ವದಲ್ಲಿ ಅತ್ಯಂತ ಹೆಚ್ಚು ಯಶಸ್ಸು ಪಡೆದ ಆಟಗಾರ.. ಆದರೆ ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯ ಅನುಭವಿಸಿದ್ದರು. ಕಳೆದ ಏಳು ಪಂದ್ಯಗಳಲ್ಲಿ ಅವರು ೫,೫,೧,೧೫, ೦,೦,೦ ರನ್ ಬಾರಿಸಿದ್ದರು.
ಇದನ್ನೂ ಓದಿ | T20 World Cup | ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ನ್ಯೂಜಿಲೆಂಡ್, ಆಸ್ಟ್ರೇಲಿಯಾ ಎದುರಾಳಿ