ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಗೆ ( IPL 2024) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB Team) ಭರ್ಜರಿ ಸಿದ್ಧತೆಗಳನ್ನು ನಡೆಸುತ್ತಿದೆ. ಪ್ರಮುಖವಾಗಿ ಹಿಂದಿನ ಹಲವು ಆವೃತ್ತಿಗಳಲ್ಲಿ ತಂಡದ ಸಹಾಯಕ ಸಿಬ್ಬಂದಿಗಳಾಗಿದ್ದವರನ್ನು ಬಿಡುಗಡೆಗೊಳಿಸಿ ಹೊಸ ಮುಖಗಳಿಗೆ ಆದ್ಯತೆ ನೀಡಲಾಗುತ್ತಿದೆ. ಅಂತೆಯೇ ನಿರ್ದೇಶಕರಾಗಿದ್ದ ಮೈಕ್ ಹೆಸ್ಸಾನ್ ಅವರ ಜಾಗಕ್ಕೆ ಆ್ಯಂಡಿ ಫ್ಲವರ್ ಅವರನ್ನು ಕರೆದುಕೊಂಡು ಬರಲಾಗಿದೆ. ಇದರ ಜತೆಗೆ ತಂಡದ ಮಾಜಿ ಆಟಗಾರ ಐಪಿಎಲ್ ದಂತಕಥೆ ಎಬಿ ಡಿವಿಲಿಯರ್ಸ್ ಅವರು ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡದ ಮಾರ್ಗದರ್ಶಕರಾಗಿ ನೇಮಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ. ತಂಡದೊಳಗೆ ಈ ಬೆಳವಣಿಗೆ ಆರಂಭವಾಗಿದೆ. ಆದರೆ, ಅಧಿಕೃತ ಮಾಹಿತಿ ಪ್ರಕಟಗೊಂಡಿಲ್ಲ.
ಆರ್ಸಿಬಿಯ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಮೈಕ್ ಹೆಸ್ಸನ್ ಆಗಸ್ಟ್ 31 ರಂದು ತಮ್ಮ ಸ್ಥಾನದಿಂದ ಕೆಳಗಿಳಿಯಲಿದ್ದು, ಅವರ ಸ್ಥಾನಕ್ಕೆ ಆಂಡಿ ಫ್ಲವರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲಾಗಿದೆ. ಆರ್ಸಿಬಿಯ ಮುಖ್ಯ ಕೋಚ್ ಸಂಜಯ್ ಬಂಗಾರ್ ಮತ್ತು ಹೆಸ್ಸನ್ ಅವರ ಸಹಾಯಕ ಸಿಬ್ಬಂದಿ ಕೂಡ ತಂಡದಿಂದ ನಿರ್ಗಮಿಸಲಿದ್ದಾರೆ.
ಕ್ರಿಕ್ಬಝ್ ಪ್ರಕಾರ ಎಬಿಡಿ ವಿಲಿಯರ್ಸ್ ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಫ್ರಾಂಚೈಸಿಯ ಯಶಸ್ಸಿಗೆ ಗಮನಾರ್ಹ ಕೊಡುಗೆ ನೀಡಿದ ಎಬಿ ಡಿವಿಲಿಯರ್ಸ್ ಆ್ಯಂಡಿ ಫ್ಲವರ್ ಅವರೊಂದಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡುವ ಸಾಧ್ಯತೆಯಿದೆ.
ಐಪಿಎಲ್ 2023 ರ ನಂತರ ಲಕ್ನೋ ಸೂಪರ್ ಜೈಂಟ್ಸ್ನೊಂದಿಗೆ ಅವರ ಎರಡು ವರ್ಷಗಳ ಒಪ್ಪಂದವು ಮುಕ್ತಾಯಗೊಂಡಿತ್ತು. ಆಸ್ಟ್ರೇಲಿಯಾದ ಮಾಜಿ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಈಗಾಗಲೇ ಸಂಜೀವ್ ಗೋಯೆಂಕಾ ಒಡೆತನದ ಫ್ರಾಂಚೈಸಿಯಲ್ಲಿ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ.
ಆರ್ಸಿಬಿಯಿಂದ ಯಾರೆಲ್ಲಾ ಹೋಗುತ್ತಿದ್ದಾರೆ?
2019 ರಲ್ಲಿ ಹೆಸ್ಸನ್ ನೇಮಕವಾದಾಗಿನಿಂದ, ಆರ್ಸಿಬಿ ಸತತ ಮೂರು ಬಾರಿ ಪ್ಲೇಆಫ್ಗೆ ಅರ್ಹತೆ ಪಡೆದಿದೆ. ಅವರು ತಮ್ಮ ಮೊದಲ ಐಪಿಎಲ್ ಚಾಂಪಿಯನ್ಷಿಪ್ ಗೆಲ್ಲಲು ಇನ್ನೂ ಸಾಧ್ಯವಾಗಿಲ್ಲ. ಫ್ರಾಂಚೈಸಿ ಈಗ ಹೊಸ ಪರಿಕಲ್ಪನೆಗಳನ್ನು ಕಾರ್ಯಗತಗೊಳಿಸಲು ಉತ್ಸುಕವಾಗಿದೆ. 2023ರ ಋತುವಿನಲ್ಲಿ ಪ್ಲೇಆಫ್ನಿಂದ ಆರ್ಸಿಬಿ ಹೊರಕ್ಕೆ ಬಿದ್ದ ಕಾರಣ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಹೀಗಾಗಿ ಸಹಾಯಕ ಸಿಬ್ಬಂದಿಯನ್ನು ಬದಲಿಸಲು ಮುಂದಾಗಿದೆ.
ಇದನ್ನೂ ಓದಿ : RCB: ಆರ್ಸಿಬಿ ತಂಡಕ್ಕೆ ಆ್ಯಂಡಿ ಫ್ಲವರ್ ನೂತನ ಕೋಚ್; ಬದಲಾದೀತೇ ಲಕ್!
ಫಾಫ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಕಳೆದ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿತ್ತು. ಫಾಫ್ ಡು ಪ್ಲೆಸಿಸ್ ತಮ್ಮ ತಂಡದ ಪರ ಹೆಚ್ಚು ರನ್ ಗಳಿಸಿದ್ದರು. ಆರ್ಸಿಬಿ ನಾಯಕ 14 ಪಂದ್ಯಗಳಲ್ಲಿ 56.15 ಸರಾಸರಿ ಮತ್ತು 153.18 ಸ್ಟ್ರೈಕ್ರೇಟ್ನೊಂದಿಗೆ 730 ರನ್ ಗಳಿಸಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್ನಲ್ಲಿ ಅತಿ ಹೆಚ್ಚು ಶತಕಗಳ ದಾಖಲೆಯನ್ನು ಮುರಿದಿದ್ದು ಮಾತ್ರವಲ್ಲ, 2016ರ ನಂತರ 600 ರನ್ಗಳನ್ನು ದಾಟಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಕೊಹ್ಲಿ 53.29ರ ಸರಾಸರಿ ಹಾಗೂ 139.82ರ ಸ್ಟ್ರೈಕ್ರೇಟ್ನೊಂದಿಗೆ 639 ರನ್ ಗಳಿಸಿದ್ದಾರೆ.
ದಿನೇಶ್ ಕಾರ್ತಿಕ್ ಈ ವರ್ಷದ ಐಪಿಎಲ್ನಲ್ಲಿ ಕೇವಲ 140 ರನ್ ಗಳಿಸುವ ಮೂಲಕ ಅನಪೇಕ್ಷಿತ ದಾಖಲೆಯನ್ನು ಮುರಿದರು. ಭಾರತದ ಮಾಜಿ ವಿಕೆಟ್ ಕೀಪರ್ ಕಾರ್ತಿಕ್ ಪ್ರಸ್ತುತ 17 ಐಪಿಎಲ್ ಡಕ್ಔಟ್ ದಾಖಲೆ ಹೊಂದಿದ್ದಾರೆ. ರೋಹಿತ್ ಶರ್ಮಾ 16ರೊಂದಿಗೆ ನಂತರದ ಸ್ಥಾನದಲ್ಲಿದ್ದಾರೆ. ಕಾರ್ತಿಕ್ ತಮ್ಮ ವೃತ್ತಿಜೀವನದಲ್ಲಿ ೧೭ ಬಾರಿ ಸ್ಕೋರರ್ ಗಳಿಗೆ ತೊಂದರೆ ನೀಡದೆ ಔಟ್ ಆಗಿದ್ದಾರೆ.