ಮುಂಬಯಿ: ಬಹುನಿರೀಕ್ಷಿತ 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿ ಆರಂಭಕ್ಕೆ ಇನ್ನು ಕೆಲವು ದಿನಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ಎಲ್ಲ ಫ್ರಾಂಚೈಸಿಗಳು ಟೂರ್ನಿಗಾಗಿ ಭರದಿಂದ ಸಿದ್ಧತೆ ಆರಂಭಿಸಿದೆ. ಈ ಮಧ್ಯೆ ಆರ್‌ಸಿಬಿ(RCB) ತಂಡದ ಮಾಜಿ ಆಟಗಾರ, ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್(AB de Villiers) ಅವರು ತಮ್ಮ ಭಾರತದ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.
ಎಬಿಡಿ ಅವರು ತಮ್ಮದೇ ಅಧಿಕೃತ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದು, ಐಪಿಎಲ್ ಟೂರ್ನಿಯ ಆರಂಭಿಕ ದಿನಗಳಲ್ಲಿ ನಾನು ಮುಂಬೈನಲ್ಲಿ ಇರಲಿದ್ದು, ವೀಕ್ಷಕ ವಿವರಣೆಗಾರರಾಗಿ ಕಾರ್ಯ ನಿರ್ವಹಿಸಲಿದ್ದೇನೆ ಎಂದು ಹೇಳಿದ್ದಾರೆ. ಈ ಮೂಲಕ ಎಬಿಡಿ ಐಪಿಎಲ್ನಲ್ಲಿ ಕಾಣಿಸಕೊಳ್ಳಲಿದ್ದಾರೆ.
ಆರ್ಸಿಬಿಗೆ ಬ್ಯಾಟಿಂಗ್ ಮಾರ್ಗದರ್ಶನ?
40 ವರ್ಷದ ಎಬಿಡಿ ಈ ಬಾರಿ ಕಾಮೆಂಟ್ರಿ ಮಾತ್ರವಲ್ಲದೆ, ಆರ್‌ಸಿಬಿ ಬ್ಯಾಟರ್‌ಗಳಿಗೆ ಮಾರ್ಗದರ್ಶನ ನೀಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೂಡ ಕೇಳಿ ಬಂದಿವವೆ. ಇದೇ ವಿಚಾರವಾಗಿ ಎಬಿಡಿ ಕೂಡ ಮಾತನಾಡಿದ್ದಾರೆ. “ಸದ್ಯಕ್ಕೆ ಇದುವರೆಗೂ ಯಾವುದೇ ಖಚಿತತೆ ಇಲ್ಲ. ಆದರೆ, ವಿರಾಟ್ ಕೊಹ್ಲಿ ಹಾಗೂ ಆರ್‌ಸಿಬಿ ತಂಡದ ಇತರ ಆಟಗಾರರೊಂದಿಗೆ ಅಲ್ಪ ಸಮಯ ಕಳೆಯಲು ನಾನು ಬಯಸುತ್ತೇನೆ” ಎಂದು ಹೇಳಿದ್ದಾರೆ.
“ನನ್ನ ಹೃದಯವು ಆರ್ಸಿಬಿಯೊಂದಿಗೆ ಇದೆ. ಅಲ್ಲಿ ಅನೇಕ ವರ್ಷ ಆಡಿದ್ದೇನೆ. ಬೆಂಗಳೂರಿನ ಅಭಿಮಾನಿಗಳೊಂದಿಗೆ ನನಗೆ ಉತ್ತಮ ಸಂಪರ್ಕವಿದೆ. ಅವರು ಅಪಾರ ಪ್ರೀತಿ ತೋರುತ್ತಾರೆ ಎಂದು ಎಬಿ ಡಿವಿಲಿಯರ್ಸ್ ಇಂಡಿಯಾ ಟುಡೇಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು.
ಇದನ್ನೂ ಓದಿ IPL 2024: ಆರ್ಸಿಬಿಗೆ ಮತ್ತೆ ಆತಂಕ ಸೃಷ್ಟಿಸಿದ ರಜತ್ ಪಾಟಿದಾರ್ ಗಾಯ
Breaking
— Kevin (@imkevin149) March 7, 2024
AB de Villiers got invitation from Virat Kohli to rejoin RCB and spend a bit of time with him and some of the batters.
Just make this happen god. pic.twitter.com/I26ULQx9fw
“ಆರ್‌ಸಿಬಿ ಹೆಡ್ ಕೋಚ್ ಆ್ಯಂಡಿ ಫ್ಲವರ್ ಹಾಗೂ ಫ್ರಾಂಚೈಸಿಯಿಂದ ಕರೆ ಬಂದಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಐಪಿಎಲ್ ಟೂರ್ನಿಯ ಮೊದಲ ಕೆಲವು ವಾರಗಳ ಕಾಲ ಮುಂಬೈನಲ್ಲಿ ನೆಲೆಸುತ್ತೇನೆ. ಕೆಲ ಪಂದ್ಯಗಳಿಗೆ ಕಾಮೆಂಟರಿ ಮಾಡುತ್ತೇನೆ. ಆದ್ದರಿಂದ ನಮ್ಮ ನೇರ ಪ್ರಸಾರಗಳನ್ನು ವೀಕ್ಷಿಸಿ” ಎಂದು ಎಬಿಡಿ ವಿಲಿಯರ್ಸ್ ಮನವಿ ಮಾಡಿದ್ದಾರೆ. ಮಿಸ್ಟರ್ 360 ಡಿಗ್ರಿ ಖ್ಯಾತಿಯ ಬ್ಯಾಟರ್, ಎಬಿಡಿ ಅವರು 184 ಐಪಿಎಲ್ ಪಂದ್ಯಗಳನ್ನಾಡಿ 3 ಶತಕ ಹಾಗೂ 40 ಅರ್ಧಶತಕಗಳ ನೆರವಿನಿಂದ 151.69 ಸ್ಟ್ರೆಕ್ ರೇಟ್‌ನಲ್ಲಿ 5162 ರನ್ ಸಿಡಿಸಿದ್ದಾರೆ.
ಎಬಿಡಿ ವಿಲಿಯನ್ಸ್ ದಕ್ಷಿಣ ಆಫ್ರಿಕಾದ ನಾಯಕರಾಗಿದ್ದರು. ವಿಶೇಷವಾಗಿ 2015 ರ ವಿಶ್ವಕಪ್ನಲ್ಲಿ ಅವರು ತಂಡವನ್ನು ಮುನ್ನಡೆಸಿದ್ದರು. ಅಲ್ಲಿ ದಕ್ಷಿಣ ಆಫ್ರಿಕಾವು ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ನಲ್ಲಿ ಹೃದಯ ವಿದ್ರಾವಕ ಸೋಲನ್ನು ಅನುಭವಿಸಿತು. 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಲು ಕಾರಣವಾದ ಹಲವು ಅಂಶಗಳಲ್ಲಿ ಇದೂ ಒಂದು ಎಂದು ಹೇಳಲಾಗಿದೆ.